ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!
ಚೆನ್ನೈನ ಅಪಾರ್ಟ್ಮೆಂಟ್ನ ಬಾಲ್ಕನಿಯೊಂದರಿಂದ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡಿ ವಾರಗಳ ಬಳಿಕ ಮಗುವಿನ ತಾಯಿ ಶವವಾಗಿ ಪತ್ತೆಯಾಗಿದ್ದಾರೆ. ಏಪ್ರಿಲ್ 28ರಂದು ಎಂಟು ತಿಂಗಳ ಪುಟ್ಟ ಮಗು ಅಪಾರ್ಟ್ಮೆಂಟ್ನ ಮೇಲ್ಛಾವಣಿಯ ಶೀಟ್ ಮೇಲೆ ನೇತಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಅಕ್ಕಪಕ್ಕದವರು ಮಗು ಬಿದ್ದರೆ ಬೆಡ್ಶೀಟ್ ಮೇಲೆ ಬೀಳಲಿ ಎಂದು ಕೆಳಗೆ ಬೆಡ್ಶೀಟ್ ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೆಯೇ ಯಾರೂ ಮಗುವನ್ನು ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದರು.
ರಕ್ಷಣೆ ಮಾಡಿದವರನ್ನು ಪ್ರಶಂಸೆ ಮಾಡಲಾಯಿತಾದರೂ ಮಗುವಿನ ತಾಯಿಯ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ಆಕೆ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಆದರೆ ಇದು ಕೇವಲ ಒಂದು ಅಪಘಾತ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದರು.
ಘಟನೆಯ ನಂತರ ರಮ್ಯಾ ತನ್ನ ಮಗುವನ್ನು ಕರಮಡೈನಲ್ಲಿರುವ ತನ್ನ ಪೋಷಕರ ಮನೆಗೆ ಕರೆದುಕೊಂಡು ಹೋಗಿದ್ದರು. ಭಾನುವಾರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಗುವಿನ ತಾಯಿಯ ಸಾವಿನ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ನಟ ಪ್ರಶಾಂತ್ ರಂಗಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಘಟನೆಯಿಂದ ಅವಮಾನಗೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
@itisprashanth ಅವರಂತಹ ಜನರು ಪೋಷಕರನ್ನು ಅವಮಾನಿಸಿದವರು, ಈ ಮಗುವಿನ ತಾಯಿ ಈಗ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇವರೆಲ್ಲರು ಈಗ ಸಂಭ್ರಮಿಸಬಹುದು ಎಂದು ಬರೆದಿದ್ದಾರೆ.