ವರದಕ್ಷಿಣೆಯಾಗಿ ಬೈಕ್ ಕೇಳಿದ ವರನಿಗೆ ಮಂಟಪದಲ್ಲೇ ಚಪ್ಪಲಿ ಏಟು ಕೊಟ್ಟ ಮಾವ!
ನವದೆಹಲಿ: ವರದಕ್ಷಿಣೆಯಾಗಿ ಬೈಕ್ ಕೇಳಿದ ವರನಿಗೆ ವಧುವಿನ ತಂದೆ ಮದುವೆ ಮಂಟಪದಲ್ಲೇ ಚಪ್ಪಲಿ ಏಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಒಳ್ಳೆಯ ಕಾರಣಕ್ಕಾಗಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವರ ಮದುವೆಯ ದಿನವೇ ಭಾರೀ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ. ದುಬಾರಿ ಬೈಕ್ಗೆ ಬೇಡಿಕೆ ಇಟ್ಟಿದ್ದ. ವರನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು ಆತ ತನ್ನ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಆತನಿಗೆ ಚಪ್ಪಲಿ ಸೇವೆ ಮಾಡಲಾಗಿದೆ. ಈ ವೇಳೆ ಮದುವೆ ಮಂಟಪದಲ್ಲಿ ಭಾರಿ ಗೊಂದಲ ಏರ್ಪಟ್ಟಿತ್ತು.
ಕದನ ವಿರಾಮದ ನಂತರ ವಧುವಿನ ತಂದೆ ತನ್ನ ಮಗಳನ್ನು ಸಂತೋಷವಾಗಿ ಇರಿಸಿಕೊಳ್ಳುವಂತೆ ವರನಿಗೆ ಹೇಳಿದನು. ಇಂದು ವೇಳೆ ಚೆನ್ನಾಗಿ ನೋಡಿಕೊಳ್ಳದಿದ್ದರೆ, ಇನ್ನಷ್ಟು ಕಪಾಳಮೋಕ್ಷ ಮಾಡುವುದಾಗಿ ಎಚ್ಚರಿಸಿದರು. ವಧುವಿನ ತಂದೆಗೆ ಹೆದರಿದ ವರ, ಮಾವನ ಮಾತಿಗೆ ಬದ್ಧನಾಗಿರಲು ನಿರ್ಧರಿಸಿದನು. ಇದಾದ ಬಳಿಕ ಮದುವೆ ಮಂಟಪದಲ್ಲಿ ಮತ್ತೆ ಮಂತ್ರಘೋಷಗಳು ಮೊಳಗಿದವು
दामाद ने दहेज में मांगी मोटरसाइकिल , ससुर ने सबके सामने चप्पल से सूत दिया ,
— Shakir Nadeem (@ShakirNadeem70) May 9, 2023
दहेज प्रथा का बहिष्कार करने का ये अच्छा तरीका है , pic.twitter.com/Y8UAlQ8uyt