ಶನಿವಾರ, ಡಿಸೆಂಬರ್ 21, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

Twitter
Facebook
LinkedIn
WhatsApp
Prathima ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್ ರೆಸ್ಟೋರೆಂಟ್ ಮಾಲಕರ ಮಗ. ವಯಸ್ಸು ಇನ್ನು 28… instagram ಮೂಲಕ ಈತನಿಗೂ ಪ್ರತಿಮಾಗು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿದೆ. ಸ್ನೇಹ ಒಂದು ಹೆಜ್ಜೆ ಮುಂದೆ ಹೋಗಿ ಇಬ್ಬರಿಗೂ ಅನ್ಯೋನ್ಯತೆ ಬೆಳೆಯುತ್ತೆ. ಇಬ್ಬರು ಒಟ್ಟಿಗೆ ಓಡಾಡುವುದನ್ನು ಊರ ಜನ ಎಲ್ಲ ಗಮನಿಸಿದ್ದಾರೆ. ಪತಿಗೂ ವಿಚಾರ ತಿಳಿಸಿದ್ದಾರೆ. ಸಾಕಷ್ಟು ಬುದ್ಧಿವಾದ ಹೇಳಿದರೂ ಇವರ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ. ಒಂದೆರಡು ಬಾರಿ ಪೊಲೀಸ್ ಠಾಣೆಗೂ ಈ ವಿಚಾರ ಹೋಗಿತ್ತು. 

ಆದರೆ ತನ್ನ ಪತ್ನಿಯ ಮೇಲೆ ವಿಪರೀತ ವ್ಯಾಮೋಹ ಹೊಂದಿದ್ದ ಬಾಲಕೃಷ್ಣ, ಎಲ್ಲೂ ಕೂಡ ಪ್ರತಿಮಾಳನ್ನು ಬಿಟ್ಟು ಕೊಟ್ಟಿಲ್ಲ. ಚೆನ್ನಾಗಿಯೇ ಸಂಸಾರ ಮಾಡುವ ಭರವಸೆ ಹೊತ್ತು ಮಡದಿಯನ್ನು ವಹಿಸಿಕೊಂಡು ಮಾತನಾಡಿದ್ದರು. ಇವರ ಸಂಸಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ಭಾವಿಸಿದ್ದರು.

ಉಡುಪಿ (Udupi) ಜಿಲ್ಲೆ ಕಾರ್ಕಳದ ಪ್ರತಿಮಾ ಎಂಬ ರಿಲ್ಸ್ ರಾಣಿ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ, ಮುಗ್ಧ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಂದಿರುವ ಅಮಾನವೀಯ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪ್ರಿಯಕರ ತಂದುಕೊಟ್ಟ ಸ್ಲೋ ಪಾಯ್ಸನನ್ನು ಸ್ವಲ್ಪ ಸ್ವಲ್ಪವೇ ಕೊಟ್ಟು, ಆರೋಗ್ಯ ಹದಗೆಡುವಂತೆ ಮಾಡಿದ ಪ್ರತಿಮಾ, ಕೊನೆಗೆ ಗೆಳೆಯನ ಜೊತೆ ಸೇರಿ ಉಸಿರುಗಟ್ಟಿಸಿ ಪತಿಯನ್ನು ಕೊಂದ ಪ್ರಕರಣವಿದು.

NAYAN BAKERY

ಇದೀಗ ಆರೋಪಿಗಳಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. ತನ್ನ ಸಹೋದರನ ಮುಂದೆ ಎಲ್ಲಾ ಸತ್ಯವನ್ನು ಬಿಚ್ಚಿಟ್ಟ ಪ್ರತಿಮಾ, ಅಜೆಕಾರು ಪೊಲೀಸರ ಮುಂದೆ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನೇರವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ಎಲ್ಲಾ ದುಷ್ಟ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಅಕ್ಟೋಬರ್​ 20ರ ತಡರಾತ್ರಿ ಬಾಲಕೃಷ್ಣ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಕಳೆದ 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರನ್ನು ಕೆಎಂಸಿ, ನಿಮಾನ್ಸ್​ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಿದ್ದರೂ, ಪ್ರಯೋಜನವಾಗಲಿಲ್ಲ. ಬಾಲಕೃಷ್ಣ ಉಸಿರು ಚಲ್ಲಿದರು. ಆದರೆ, ಬಾಲಕೃಷ್ಣ ಮೃತಪಟ್ಟಿದ್ದು ಕಾಯಿಲೆಯಿಂದ ಅಲ್ಲ, ಕೊಲೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕೃಷ್ಣ ಅವರನ್ನು ಮುಗಿಸಲು ಪ್ರತಿಮಾ ಮತ್ತು ಈಕೆಯ ಪ್ರಿಯಕರ ದಿಲೀಪ್​ ಹೆಗ್ಡೆ ಖತರ್ನಾಕ್​ ಪ್ಲಾನ್​​ ಮಾಡಿದ್ದರು. ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಆರೋಪಿಗಳು ಒಂದು ತಿಂಗಳಿನಿಂದ ಹೊಂಚು ಹಾಕಿ ಸಂಚು ರೂಪಿಸಿದ್ದರು. ತನ್ನ ಪತಿ ಕಾಯಿಲೆಯಿಂದ ಮೃತಪಟ್ಟ ಅಂತ ನಂಬಿಸಲು ಪತ್ನಿ ಪ್ರತಿಮಾ, ಬಾಲಕೃಷ್ಣ ಅವರಿಗೆ ಸ್ಲೋ ಪಾಯ್ಸನ್​​ ನೀಡುತ್ತಿದ್ದಳಂತೆ. ಅಲ್ಲದೇ, ಈ ಸ್ಲೋ ಪಾಯ್ಸನ್​ ಅನ್ನು ಪ್ರಿಯಕರ ದಿಲೀಪ್​ ಹೆಗ್ಡೆ ತಂದುಕೊಟ್ಟಿದ್ದಾನೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾಳೆ.

ಪ್ರತಿಮಾ ಪತಿ ಬಾಲಕೃಷ್ಣ ಅವರಿಗೆ ಅನ್ನದಲ್ಲಿ ರಕ್ತದ ಕ್ಯಾನ್ಸರ್​ಗೆ ನೀಡುವ Arsenic Trioxide ಎಂಬ ಕಿಮೋಥೆರಪಿ ಮದ್ದು ಬೆರಸಿ ನೀಡುತ್ತಿದ್ದಳು. ಈ ಮದ್ದು ಯಾವುದೇ ಟೇಸ್ಟ್​ ಹೊಂದಿರುವುದಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಅನ್ನದ ಜೊತೆ ಮದ್ದನ್ನು ಬೆರೆಸಿ ನೀಡುತ್ತಿದಳು. ವಿಷ ಇದೆ ಎಂದು ಅರಿಯದೆ ಬಾಲಕೃಷ್ಣ ಊಟ ಮಾಡುತ್ತಿದ್ದರು. 

ಹಲವು ಬಾರಿ ವಿಷದ ಅನ್ನವನ್ನೇ ಪ್ರತಿಮಾ ಕೈ ತುತ್ತು ಮಾಡಿ ಬಾಲಕೃಷ್ಣ ಅವರಿಗೆ ತಿನ್ನಿಸುತ್ತಿದ್ದಳು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದ್ಯಾವುದರ ಅರಿವು ಇಲ್ಲದ ಬಾಲಕೃಷ್ಣ ತಾನಾಯ್ತು ತನ್ನ ದುಡಿಮೆ ಆಯ್ತು ಎಂದು ಹೆಂಡತಿ ಕೊಟ್ಟದ್ದನೆಲ್ಲ ತಿಂದಿದ್ದಾನೆ. ಪದೇ ಪದೇ ವಿಷಪ್ರಾಶನವಾದದ್ದರಿಂದ, ಬಾಲಕೃಷ್ಣರ ಕಿಡ್ನಿ ಲಿವರ್ ಹಾಳಾಗಿವೆ. ನರಗಳಲ್ಲಿ ಪದೇ ಪದೇ ಸಮಸ್ಯೆ ಕಂಡು ಬಂದಿದೆ. ವಿಷಪೂರಿತ ಅನ್ನ ತಿಂದು ಬಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.  

ಮೊದಲು ಕಾರ್ಕಳದ ಕೆಎಂಸಿ ಕ್ಯಾಂಪ್ ನಲ್ಲಿ ಚಿಕಿತ್ಸೆ ಪಡೆಯುತ್ತಾರೆ, ಹೆಚ್ಚಿನ ಚಿಕಿಸಬೇಕು ಎಂಬುದು ಅರಿವಿಗೆ ಬಂದು ಉಡುಪಿ ಜಿಲ್ಲೆಯ ಅಜರಕಾಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆಲ್ಲಕಾಸ್ಪತ್ರೆಗೆ ಸೇರಿಸಲಾಗುತ್ತದೆ.

ಇದರಿಂದಲೂ ಏನು ಪ್ರಯೋಜನವಾಗುವುದಿಲ್ಲ. ಮುಂದೆ ಹೆಚ್ಚಿನ ಚಿಕಿಸಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ತಕ್ಕಮಟ್ಟಿಗೆ ಆರೋಗ್ಯ ಸುಧಾರಿಸಿಕೊಂಡು ವಾಪಸು ಅಜೆಕಾರಿಗೆ ಅವರನ್ನು ಐದಾರು ದಿನಗಳ ಹಿಂದೆ ಕರೆತರಲಾಗಿತ್ತು.

ಬೆಂಗಳೂರಿನಿಂದ ಚಿಕಿತ್ಸೆ ಮುಗಿಸಿಕೊಂಡು ಬಂದ ಬಾಲಕೃಷ್ಣ, ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಂತೆ ಕಂಡುಬಂದಿದ್ದರು. ಚಿಕ್ಕಮ್ಮನ ಜೊತೆ ಇವರು ಬೆಂಗಳೂರಿನವರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ವಾಪಸಾದ ಬಳಿಕ, ತನ್ನ ಸುಧಾರಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆ ದಿನ ರಾತ್ರಿ ಅಮ್ಮನ ಕೈಯಿಂದ ಊಟ ಕಷಾಯ ಪಡೆದುಕೊಂಡು, ಅಮ್ಮನಿಗೆ ಪಕ್ಕದಲ್ಲಿರುವ ಮನೆಗೆ ಹೋಗುವಂತೆ ಹೇಳಿದ್ದರು. ಪ್ರತಿಮಾ ಕೂಡ ಗಂಡನನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಬಂಧುಗಳಿಗೆಲ್ಲ ಹೇಳಿ ರಾತ್ರಿ ಪತಿಯ ಜೊತೆ ಏಕಾಂಗಿಯಾಗಿದ್ದರು.

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಪತಿ ಸುಧಾರಿಸಿಕೊಳ್ಳಬಹುದು ಎಂಬ ಆತಂಕ ಪ್ರತಿಮಾಗೆ ಕಾದಿತ್ತು. ಹಾಗಾಗಿ ಪತಿಯನ್ಮು ಕೊಂದೆ ಬಿಡಬೇಕು ಎಂಬ ನಿರ್ಧಾರ ಮಾಡಿ ನಡುರಾತ್ರಿ ಪ್ರಿಯಕರ ದಿಲೀಪ್ ಹೆಗಡೆಯನ್ನು ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ಇಬ್ಬರು ಸರಿ ರಾತ್ರಿ ಮೂರು ಗಂಟೆ ಸುಮಾರಿಗೆ ದಿಂಬಿನ ಮೂಲಕ ಕುತ್ತಿಗೆ ಒತ್ತಿ ಹಿಡಿದು, ಬಾಲಕೃಷ್ಣ ಪೂಜಾರಿಯನ್ನು ಬಲಿ ಪಡೆದಿದ್ದಾರೆ. ನಂತರ ದಿಲೀಪ್ ಹೆಗಡೆ ಏನು ಆಗಿಲ್ಲ ಎಂಬಂತೆ ಕಾರ್ಕಳಕ್ಕೆ ವಾಪಸ್ ಆಗಿದ್ದಾನೆ. ಪಕ್ಕದಲ್ಲಿ ಇರುವ ಸಂಬಂಧಿಕರ ಮನೆಗೆ ಕರೆ ಮಾಡಿ ಪ್ರತಿಮಾ, ತನ್ನ ಪತಿ ಸತ್ತಿರುವುದಾಗಿ ಮಾಹಿತಿ ರವಾನಿಸಿದ್ದಾಳೆ.

ಬಾಲಕೃಷ್ಣ ಪೂಜಾರಿಗೆ ತನ್ನ ಮಡದಿಯ ಮೇಲೆ ವಿಶೇಷ ಪ್ರೀತಿ ಇತ್ತು. ಯಾರು ಹೇಳಿದರು ಪತ್ನಿಯನ್ನು ಬಿಟ್ಟುಕೊಟ್ಟಿಲ್ಲ.ಸಂಶಯಾಸ್ಪದ ರೀತಿಯಲ್ಲಿ ಬಾಲಕೃಷ್ಣ ಸತ್ತಾಗ ಮೊದಲು ಸಂಶಯ ವ್ಯಕ್ತಪಡಿಸಿದ್ದೆ ಸಂದೀಪ್. ತನ್ನ ಸ್ವಂತ ಸಹೋದರಿಯ ಮೇಲೆ ಸಂಶಯಗೊಂಡ ಸಂದೀಪ್, ದೂರು ನೀಡುವಂತೆ ಭಾವನ ಮನೆಯವರಿಗೆ ಹೇಳಿದ್ದ. ಸ್ವತಹ ತಾನೆ ಭಾವನ ಬಂಧುಗಳ ಜೊತೆ ಅಧಿಕಾರ ಠಾಣೆಗೆ ಹೋಗಿ ದೂರು ನೀಡಿದ. ಪೋಸ್ಟ್ ಮಾರ್ಟಮ್ ನಡೆಸುವಂತೆ ಒತ್ತಾಯಿಸಿದ್ದ. ಕೊನೆಗೆ ತಂಗಿಯ ತಪ್ಪೊಪ್ಪಿಗೆಗೂ ಈತ ಪ್ಲಾನ್ ಮಾಡಿದ್ದ!

ಪ್ರಕರಣದ ಕುರಿತು ಉಡುಪಿ ಎಸ್ಪಿ ಡಾ. ಅರುಣ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಪತಿ ಬಾಲಕೃಷ್ಣನಿಂದ ಇದ್ದರೆ ನಮ್ಮ ಸ್ನೇಹಕ್ಕೆ ಅಡ್ಡಿಯಾಗುತ್ತದೆ ಎಂದು ಪತ್ನಿ ಕೊಲೆ ಮಾಡಿದ್ದಾಳೆ. ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಬದುಕಿರೋದೇ ಸಮಸ್ಯೆ ಎಂದು ಕೊಲೆಮಾಡಿರುವುದು ಸಾಬೀತಾಗಿದೆ. ಅಲ್ಲದೇ ಪ್ರತಿನಿತ್ಯ ಊಟದಲ್ಲಿ ಪತಿಗೆ ವಿಷ ಬೆರೆಸಿಕೊಡುತ್ತಿದ್ದ ಪತ್ನಿ ಪ್ರತಿಮಾ, ಪ್ಲ್ಯಾನ್ ಪ್ರಕಾರ ಪತಿಯನ್ನು ಸಾಯುಸಲು ಪ್ರಿಯಕರನನ್ನ ಮನೆಗೆ ಕರೆಸಿದ್ದಳು ಎಂದು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

1 ವರ್ಷದ ಮನೆ ಕಟ್ಟಿಸಿ ಹೆಂಡತಿ ಮಕ್ಕಳನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಪೂಜಾರಿಯನ್ನು ಪತ್ನಿ ಕೊಂದಿದ್ದಾಳೆ. ಮನೆ ತುಂಬಾ ಅನ್ಯೋನ್ಯವಾಗಿ ಇರುವ ಫೋಟೋಗಳನ್ನು ಜೋಡಿಸಿರುವ ಕತರ್ನಾಕ್ ಸುಂದರಿ ಗಂಡನ ಜೊತೆ ಮಲಗಿ ಸುಖ ಸಂಸಾರ ಮಾಡಿದ ಬೆಡ್ ರೂಮ್ ನಲ್ಲೆ ಉಸಿರು ನಿಲ್ಲಿಸಿ ಬಿಟ್ಟಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist