ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಘಾತ; ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆ ಬಾರಿ ಹಿನ್ನಡೆ...!
ಲೋಕಸಭೆ ಚುನಾವಣೆ ಫಲಿತಾಂಶ 2024 : 294 ಸ್ಥಾನಗಳಲ್ಲಿ ಎನ್ಡಿಎ, 228 ರಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
ಬೆಳಗಾವಿಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಅಭ್ಯರ್ಥಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆ ಬಾರಿ ಹಿನ್ನಡೆಯಾಗಿದೆ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದು 303400 ಮತಗಳನ್ನು ಪಡೆದಿದ್ದು ಮೃಣಾಲ್ ಹೆಬ್ಬಾಳ್ಕರ್ 226707 ಮತಗಳು ದೊರಕಿದ್ದು 76693 ಮತಗಳಿಂದ ಹಿನ್ನಡೆಯಾಗಿದ್ದಾರೆ.
ಯಾವ ರಾಜ್ಯದಲ್ಲಿ ಯಾವ ಪಕ್ಷ ಮುಂದಿದೆ, ಯಾವ ಪಕ್ಷ ಹಿಂದಿದೆ
ದೆಹಲಿ- ಬಿಜೆಪಿ 6, ಕಾಂಗ್ರೆಸ್ 1 ಆಂಧ್ರಪ್ರದೇಶ- ಟಿಡಿಪಿ 15, ವೈಎಸ್‌ಆರ್‌ಸಿಪಿ 3, ಬಿಜೆಪಿ 3 ಬಿಹಾರ- ಜೆಡಿಯು 12, ಬಿಜೆಪಿ 9, ಎಲ್‌ಜೆಪಿ 5, ಆರ್‌ಜೆಡಿ 3, ಕಾಂಗ್ರೆಸ್ 2, ಛತ್ತೀಸ್‌ಗಢ- ಬಿಜೆಪಿ 9, ಕಾಂಗ್ರೆಸ್ 2, ಗೋವಾ- ಬಿಜೆಪಿ, ಕಾಂಗ್ರೆಸ್ 1, ಗುಜರಾತ್- ಬಿಜೆಪಿ 25, ಕಾಂಗ್ರೆಸ್ 1, ಹರಿಯಾಣ- ಕಾಂಗ್ರೆಸ್ 5, ಬಿಜೆಪಿ 4, ಎಎಪಿ 1 ,ಹಿಮಾಚಲ ಪ್ರದೇಶ- ಬಿಜೆಪಿ 4, ಜಮ್ಮು ಕಾಶ್ಮೀರ- NC 2, ಬಿಜೆಪಿ 2
ಮಹಾರಾಷ್ಟ್ರದಲ್ಲಿ ಬಿಜೆಪಿ 12, ಶಿವಸೇನೆ (ಠಾಕ್ರೆ ಬಣ) 10, ಕಾಂಗ್ರೆಸ್ 9, ಎನ್‌ಸಿಪಿ (ಶರದ್ ಪವಾರ್ ಬಣ) 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮುನ್ನಡೆ ಸಾಧಿಸಿದ್ದಾರೆ, ಕಾಂಗ್ರೆಸ್ ಅಜಯ್ ರಾವ್ ನಡುವೆ ತೀವ್ರ ಪೈಪೋಟಿ
ಹರ್ಯಾಣದಲ್ಲಿ ಬಿಜೆಪಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.