ಈ ವಿಡಿಯೋವನ್ನು ಸುತೇಜ್ ಸಿಂಗ್ ಪನ್ನು (Sujeth singh pannu) ಅವರು ಇನ್ಸ್ಟಾಗ್ರಾಮ್ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ಅವರೊಬ್ಬ ಮದುವೆ ಫೋಟೋಗಳನ್ನು ತೆಗೆಯುವ ಫೋಟೋಗ್ರಾಫರ್ ಆಗಿದ್ದು,ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸುಂದರವಾದ ವ್ಯಕ್ತಿತ್ವದ ಫೋಟೋಗಳನ್ನು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅವುಗಳಲ್ಲಿ ಜನರ ನಿಜವಾದ ಭಾವನೆಗಳು ಸೆರೆ ಆಗಿರುತ್ತವೆ.
ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಫೋಟೋಗ್ರಾಫರ್ಗೆ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಈ ಫೋಟೋಗೆ ಫೋಸ್ ನೀಡಿದವರು ಓರ್ವ ಪಂಜಾಬ್ ರೈತ ಆಗಿದ್ದು, ಹೊಲದಲ್ಲಿ ಕಡ್ಲೆಕಾಯಿ ಬೆಳೆದಂತೆ ಕಾಣಿಸುತ್ತಿದೆ. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಅವರ ನಗು ತುಂಬಾ ಇಷ್ಟವಾಯ್ತು ಇಂತಹ ನಗು ನೋಡಲು ಪುಣ್ಯ ಮಾಡಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾದ ವ್ಯಕ್ತಿಗಳು ಇನ್ಸ್ಟಾಗ್ರಾಮ್ನಲ್ಲಿ ಇರುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ನಿಜವಾದ ಆತ್ಮಗಳು, ಇವರ ಮುಗ್ಧತೆ ಕೃತಜ್ಞತೆಯನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ ಎಂದು ಒಬ್ಬರು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೈತು ಯಾವಾಗಲೂ ಸಂಕಷ್ಟದಿಂದಲೇ ಬದುಕು ನಡೆಸುತ್ತಿರುತ್ತಾರೆ. ಬೆಳೆ ಇದ್ದಾಗ ಬೆಲೆಯೇ ಇರುವುದಿಲ್ಲ, ಬೆಳೆ ಇಲ್ಲದಾಗ ಬೆಲೆ ಉತ್ತಮವಾಗಿರುತ್ತದೆ. ಮತ್ತೆ ಕೆಲವೊಮ್ಮೆ ಉತ್ತಮ ಬೆಲೆ ಇದ್ದಾಗಲೇ ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಂದಾಗಿ ಬೆಳೆಯೆಲ್ಲಾ ನಾಶವಾಗಿರುತ್ತದೆ. ಹೀಗಿದ್ದರೂ ಕೂಡ ಯಾವ ರೈತರು ಕೂಡ ಬೆಳೆ ಬೆಳಯುವುದನ್ನು ತಮ್ಮಿಂದ ಸಾಧ್ಯವಾಗುವವರೆಗೂ ನಿಲ್ಲಿಸುವುದಿಲ್ಲ. ಇದೇ ಕಾರಣಕ್ಕೇ ದೇಶದ ಪ್ರತಿಯೊಬ್ಬರೂ ಇಂದು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜೀವನದಲ್ಲಿ ಕಷ್ಟಕ್ಕೆ ಅಂಜ ಬಾರದು ವಾಸ್ತವದಲ್ಲಿ ಬದುಕಬೇಕು ಎಂಬುದನ್ನು ವಿಡಿಯೋ ತೋರಿಸುತ್ತಿದೆ. ಇಂತಹ ರೈತನಿಗೊಂದು ಸೆಲ್ಯೂಟ್.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist