ಮಂಗಳವಾರ, ಡಿಸೆಂಬರ್ 3, 2024
ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ, ಓದುತ್ತಿರುವ ಮಗಳಿದ್ದಾಳೆ, ಹೀಗಾಗಿ ಜಾಮೀನು ನೀಡಬೇಕು: ವಕೀಲರ ವಾದ-ಕಾರು - ಬಸ್‌ ಡಿಕ್ಕಿ: ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ-ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ-ಫೆಂಗಲ್ ಆರ್ಭಟ : ದಕ್ಷಿಣ ಕನ್ನಡ, ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ-ಸಮುದಾಯ ಉಳಿಯಬೇಕಾದ್ರೆ ಕನಿಷ್ಠ ಮೂರು ಮಕ್ಕಳು ಅವಶ್ಯಕ : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್-ಭೀಕರ ಅಪಘಾತ : ಬಸ್ ಪಲ್ಟಿಯಾಗಿ ಮೂವರು ಮಹಿಳೆಯರ ಸಾವು!-ಆತ್ಮಹತ್ಯೆಗೆ ಶರಣಾದ ಸೀರಿಯಲ್ ನಟಿ ಶೋಭಿತಾ ಶಿವಣ್ಣ-ಡ್ರಗ್ಸ್ ಪ್ರಕರಣದಲ್ಲಿ ನಟ ಅಜಾಜ್ ಖಾನ್ ಪತ್ನಿ ಬಂಧನ!-ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರು ವೈದ್ಯರು, ಓರ್ವ ವಕೀಲ ಸ್ಥಳದಲ್ಲೇ ಸಾವು-ತುಳು ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರೇಣುಕಾಸ್ವಾಮಿ ಹತ್ಯೆ ಪ್ರಕರಣದ: 3 ಆರೋಪಿಗಳಿಗೆ ಜಾಮೀನು ಮಂಜೂರು; ದರ್ಶನ್, ಪವಿತ್ರಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Twitter
Facebook
LinkedIn
WhatsApp
ರೇಣುಕಾಸ್ವಾಮಿ, ದರ್ಶನ್

ರೇಣುಕಾಸ್ವಾಮಿ ಕೊಲೆ ಕೇಸ್​ನ ತನಿಖೆ ಮುಕ್ತಾಯ ಆಗಿದೆ. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ಪವನ್ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪಗಳು ಎದುರಾಗಿವೆ. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತೀವ್ರ ತನಿಖೆ ಮಾಡಿದ್ದಾರೆ. ತನಿಖೆ ಅಂತ್ಯವಾಗಿದ್ದು, ಇತ್ತೀಚೆಗೆ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಆ ಬಳಿಕ ಜಾಮೀನು ಪಡೆಯುಲು ಆರೋಪಿಗಳು ಅರ್ಜಿ ಸಲ್ಲಿಸಿದರು. ಇಂದು (ಸೆಪ್ಟೆಂಬರ್ 23) ಮೂವರಿಗೆ ಜಾಮೀನು ನೀಡಲಾಗಿದೆ. ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್​ ಹಾಗೂ ನಿಖಿಲ್​ಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.

ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ನಡೆಯಿತು ಎಂಬ ಆರೋಪ ಇದೆ. ಘಟನೆ ನಡೆದ ಬಳಿಕ ಕೆಲವರು ಸೆರೆಂಡರ್​ ಆಗಿದ್ದರು. ಆ ಪೈಕಿ ಕಾರ್ತಿಕ್​, ನಿಖಿಲ್​ ನಾಯಕ್ ಮತ್ತು ಕೇಶವಮೂರ್ತಿ ಪ್ರಮುಖರು. ಈ ಕೇಸ್​ನಲ್ಲಿ ಕಾರ್ತಿಕ್​ ಎ15, ಕೇಶವಮೂರ್ತಿ ಎ16 ಹಾಗೂ ನಿಖಿಲ್ ನಾಯಕ್​ ಎ17 ಆಗಿದ್ದಾರೆ. ಈ ಮೂವರಿಗೂ ಜಾಮೀನು ನೀಡಲಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

57ನೇ ಸಿಸಿಹೆಚ್ ಕೋರ್ಟ್‌ನಿಂದ ಎ15 ಕಾರ್ತಿಕ್​ ಹಾಗೂ ಎ17 ನಿಖಿಲ್ ನಾಯಕ್​ಗೆ ಜಾಮೀನು ಮಂಜೂರಾಗಿದೆ. ಎ16 ಆಗಿರುವ ಕೇಶವಮೂರ್ತಿಗೆ ಹೈಕೋರ್ಟ್​ ಜಾಮೀನು ನೀಡಿದೆ. ಸಾಕ್ಷ್ಯ ನಾಶ ಮಾಡಿದ ಆರೋಪ ಆ ಮೂವರ ಮೇಲಿದೆ. ಪಟ್ಟಣಗೆರೆ ಶೆಡ್​ನಲ್ಲಿ ಕಾರ್ತಿಕ್​ ಕೆಲಸ ಮಾಡಿಕೊಂಡಿದ್ದ. ಶವ ಸಾಗಿಸಿದವರ ಗ್ಯಾಂಗ್​ನಲ್ಲಿ ನಿಖಿಲ್, ಕಾರ್ತಿಕ್ ಇದ್ದರು. ಬಳಿಕ ಅವರ ಜೊತೆ ಕೇಶವಮೂರ್ತಿ ಕೂಡ ಶರಣಾಗಿದ್ದ.

ಎ1 ಆಗಿರುವ ಪವಿತ್ರಾ ಗೌಡ ಮತ್ತು ಎ2 ದರ್ಶನ್​ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು (ಸೆ.23) ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್​ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್​ 27ಕ್ಕೆ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾರ್ಜ್​ಶೀಟ್​ ಸಲ್ಲಿಕೆ ಬಳಿಕ ಅವರು ಜಾಮೀನು ಪಡೆಯುವ ಬಗ್ಗೆ ಕುಟುಂಬದವರು ಹಾಗೂ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.

ಬೆಂಗಳೂರಿಗರ ಅವಹೇಳನ ಮಾಡಿದ್ದ ಉತ್ತರ ಭಾರತದ ಸುಗಂಧಾ ಶರ್ಮಾ ಕೆಲಸದಿಂದ ವಜಾ!

ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮೂಲಕ ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ರೀಲ್ಸ್ ರಾಣಿ ಸುಗಂಧಾ ಶರ್ಮಾಗೆ ಇದೀಗ ಕನ್ನಡಿಗರ ತಾಕತ್ತು ಅರ್ಥವಾಗಿದ್ದು ಕಂಪನಿಯೇ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದೆ.

ರೀಲ್ಸ್ ಮಾಡಿದ್ದ ಸುಗಂಧ ಶರ್ಮಾ ಉತ್ತರ ಭಾರತೀಯರು ಬೆಂಗಳೂರನ್ನು ಬಿಟ್ಟು ಹೊರಟರೆ ಬೆಂಗಳೂರು ಖಾಲಿಖಾಲಿಯಾಗುತ್ತೆ ಎಂದು ಕನ್ನಡಿಗರನ್ನು ಕೆಣಕಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಸುಗಂಧಾ ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಓಪನ್ ಆಗಿಯೇ ಚಾಲೆಂಜ್ ಹಾಕಿದ್ದರು. ಆದರೆ ಅವರ ಚಾಲೆಂಜ್ ಪರಿಣಾಮದಿಂದ ಸ್ವತಃ ಅವರೇ ಕೆಲಸ ಕಳೆದುಕೊಳ್ಳುವಂತಾಗಿದೆ.

ಸುಗಂಧಾ ಶರ್ಮಾ ರೀಲ್ಸ್ ನಲ್ಲಿ, ನೀವು ಹೊರಟು ಹೋಗಿ ಎನ್ನುತ್ತಿದ್ದೀರಾ. ನಿಜವಾಗಿಯು ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿ.ಜಿ.ಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ.

ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ’ ಎಂದು ಸುಗಂಧಾ ಶರ್ಮಾ ರೀಲ್ಸ್‌ನಲ್ಲಿ ಹೇಳಿದ್ದರು. ಕೆಲವೇ ಗಂಟೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿ ಕಾರಿದ್ದಾರೆ. ಭಾಷೆ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಈಗ `ಬೆಂಗಳೂರನ್ನು ಪ್ರೀತಿಸ್ತೇನೆ’ ಅಂತಿದ್ದಾಳೆ ಉತ್ತರ ಭಾರತದ ಮಹಿಳೆ!

ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಹೀಯಾಳಿಸಿದ್ದ ಮಹಿಳೆ ಇದೀಗ ಕೊಂಚ ಮೆತ್ತಗಾಗಿದ್ದಾಳೆ. ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ, ಕನ್ನಡವನ್ನು ಹೃದಯದಿಂದ ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಆದರೆ ತನ್ನ ಈ ಹಿಂದಿನ ಮಾತಿಗೆ ಕ್ಷಮೆಯನ್ನಾಗಲಿ, ವಿಷಾದವನ್ನಾಗಲಿ ತಿಳಿಸಿಲ್ಲ.

ಈ ರೀತಿ ಬೆಂಗಳೂರು ಮತ್ತು ಕನ್ನಡಿಗರ ಬಗ್ಗೆ ದ್ವೇಷದಿಂದ ಮಾತನಾಡಿದ್ದ ಸುಗಂಧ ಶರ್ಮ ಎಂಬ ಮಹಿಳೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಆಕೆ ಕೆಲಸ ಮಾಡುತ್ತಿದ್ದ ಫ್ರೀಡಂ ಆಪ್ ನಿಂದ ವಜಾ ಮಾಡಿದೆ. ಇದರ ಬೆನ್ನಲ್ಲೇ ಆಕೆ ಮತ್ತೊಂದು ರೀಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಾವೆಲ್ಲಾ ಭಾರತೀಯರು ಎಂದು ಹೇಳಿದ್ದಾಳೆ. 

ರೀಲ್ ನ ಪ್ರಾರಂಭದಲ್ಲಿ ಕಷ್ಟಪಟ್ಟು ಕನ್ನಡ ಭಾಷೆಯಲ್ಲಿಯೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ’ ಎಂದು ಹೇಳಿ ಮುಗಿಸಿ ಬಳಿಕ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಮಾತು ಮುಂದುವರಿಸಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist