ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಸಂಸ್ಥೆಯಲ್ಲಿ ೭೬ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿಯಿಂದ ಕಾರ್ಯಕ್ರಮ
Twitter
Facebook
LinkedIn
WhatsApp
ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಸಂಸ್ಥೆಯಲ್ಲಿ ೭೬ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .ಮಕ್ಕಳು ಪಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀ ಅಷ್ಲೆ ಫರ್ನಾಂಡಿಸ್ ಹಾಗೂ ಕೀರ್ತನಾ ಪಿ ವಿಶೇಷ ಮಕ್ಕಳೊಂದಿಗೆ ಕಳೆದ ಅಮೂಲ್ಯ ಸಮಯದ ಬಗ್ಗೆ ಹಾಗೂ ಸಂಸ್ಥೆಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಹಾಗೂ ಮಕ್ಕಳೊಂದಿಗೆ ಬೆರೆತು ಕೆಲ ಸಮಯ ಕಳೆದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕಿಯಾದ ಶ್ರೀಮತಿ ಬಬಿತಾರವರು ರಿಯಾ ಫೌಂಡೇಶನ್ ಸಂಸ್ಥೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿಗಳಾದ ರೋಲ್ವಿನ್ ಹಾಗೂ ತಂಡದಿಂದ ದೇಶ ಭಕ್ತಿಗೀತೆಯನ್ನು ಹಾಡಲಾಯಿತು.
ನಂತರ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ ಕಾರಕ್ರಮವನ್ನು ಹಮ್ಮಿಕೊಳ್ಳಲಾಯಿತು ಸಂಸ್ಥೆಯ ಪ್ರತಿನಿಧಿಗಳಿಂದ ವಂದನಾರ್ಪಣೆ ನೆರವೇರಿಸಿದರು