ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

Twitter
Facebook
LinkedIn
WhatsApp
 ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

ಬೆಂಗಳೂರು: ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲೆ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi)  ಎಲ್ಲರೂ ಬೇಲ್ ಮೇಲೆ ಇದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.

 

ಬಿಜೆಪಿ ಭ್ರಷ್ಟಾಚಾರ ಪಕ್ಷ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲ್ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi)  ಎಲ್ಲರೂ ಬೇಲ್ ಮೇಲೆ ಇದ್ದಾರೆ. ಭ್ರಷ್ಟಾಚಾರದ ಮೇಲೆ ಅವರು ಬೇಲ್ ಮೇಲೆ ಇದ್ದಾರೆ.

ಅವರು ನಮ್ಮ ಬಗ್ಗೆ ಮಾತಾಡೋದಾ? ನಮ್ಮ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು (ಡಿಕೆಶಿವಕುಮಾರ್) ಬೇಲ್ ಮೇಲೆ ಹೊರಗೆ ಇರೋದು. ಪಾಪ ಎರಡು ವರ್ಷದಿಂದ ಕೇಸ್ ನಡೆಯುತ್ತಿದೆ. ಇವರು ನಮ್ಮ ಬಗ್ಗೆ ಮಾತಾಡೋದಾ? ಕಾಂಗ್ರೆಸ್‍ನವರಿಗೆ ಕರ್ನಾಟಕ ATM ಆಗಿತ್ತು. ಅದು ಕೈ ತಪ್ಪಿದೆ ಅಂತ ಕಾಂಗ್ರೆಸ್‍ನವರು ಹೀಗೆ ಮಾತನಾಡುತ್ತಿದ್ದಾರೆ. ಕರ್ನಾಟಕ ಕೈ ತಪ್ಪಿದೆ ಅಂತ ಅವರಿಗೆ ಕೊರಗು ಇದೆ. ಹೀಗಾಗಿ ಆರೋಪ ಮಾಡ್ತಿದ್ದಾರೆ. ನಮ್ಮಲ್ಲಿ 40% ಇಲ್ಲ ಯಾವುದು ಇಲ್ಲ. ಕಾಂಗ್ರೆಸ್‍ನವರು ದುರುದ್ದೇಶದ ಪ್ರಚಾರ ಮಾಡುತ್ತಿದ್ದಾರೆ. ಪದೇ ಪದೇ ಹೇಳ್ತೀನಿ ಯಾವುದೇ ದಾಖಲೆ ಇದ್ದರೆ ಕೊಡಲಿ. ಆ ಬಗ್ಗೆ ತನಿಖೆ ಮಾಡಿಸ್ತೀನಿ. ಇದೇ ನಮ್ಮ ಸ್ಟಾಂಡ್ ಎಂದು ವಾಗ್ದಾಳಿ ನಡೆಸಿದರು.

ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ, ವಿಧಾನಸೌಧದ ಗಾಂಧಿಜೀ ಪ್ರತಿಮೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ (Lal Bahadur Shastri) ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ಅವರು, ರಾಷ್ಟ್ರಪಿತ ಗಾಂಧಿಯವರ ಜನ್ಮ ದಿನ ಇಂದು. ನಾವೆಲ್ಲರು ಗೌರವ ಅರ್ಪಣೆ ಮಾಡಿದ್ದೇವೆ. ಗಾಂಧಿ ದೇಶಕ್ಕೆ ಪ್ರೇರಣ ಶಕ್ತಿ. ಅವರ ಬದುಕು ಆದರ್ಶ. ಹಲವು ಅಪಮಾನ ಸಹಿಸಿಕೊಂಡು ಹೋರಾಟ ಮಾಡಿದವರು. ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದವರು. ಗಾಂಧಿಯವರ ನೇತೃತ್ವ ಸಿಗೋವರೆಗೂ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಸಿಕ್ಕಿತು. ಸತ್ಯ, ಅಹಿಂಸೆ ಎಂಬ ಎರಡು ಅಸ್ತ್ರ ಕೊಟ್ಟರು. ಈ ಎರಡು ಅಸ್ತ್ರ ಪ್ರಬಲವಾಗಿದ್ದವು. ಬ್ರಿಟಿಷರ ವಿರುದ್ಧ ಜನಾಂದೋಲ ಸೃಷ್ಟಿ ಆಗಿ ಸ್ವಾತಂತ್ರ್ಯ ಸಿಕ್ಕಿತು. ಗಾಂಧಿಯವರ ಜೀವನವೇ ನಮಗೆ ಸಂದೇಶ. ಸತ್ಯ, ಅಹಿಂಸೆ ಮಾರ್ಗವನ್ನು ಅವರು ಬಿಡಲಿಲ್ಲ. ಇಂದೂ ಕೂಡಾ ನಮ್ಮ ದೇಶಕ್ಕೆ ಅಂತರ್ ಸತ್ವದ ಪ್ರೇರಣೆ ಗಾಂಧಿಜೀ. ಅವರು ಹೇಳಿದ ಮಾತು ಈಗಲೂ ಪ್ರಸ್ತುತ ಎಂದರು. ಇದನ್ನೂ ಓದಿ: ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ

ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜಯಂತಿ ಕೂಡ ಇಂದು ನಡೆಸಲಾಗಿದೆ. ಗಾಂಧಿಜೀ ಶಾಸ್ತ್ರಿಯವರ ನಡುವೆ ಸಾಮ್ಯತೆ ಇದೆ. ಒಂದೇ ದಿನ ಅವರ ಜಯಂತಿ ದೈವ ಇಚ್ಛೆ. ಶಾಸ್ತ್ರಿಗಳು ಇಂದಿಗೂ ಕೂಡಾ ಜನ ಮಾನಸದಲ್ಲಿ ಇದ್ದಾರೆ. ಬಡತನದಿಂದ ಬಂದರು ಬದುಕಿನಲ್ಲಿ ರಾಜೀ ಮಾಡಿಕೊಂಡಿಲ್ಲ. ಪ್ರಧಾನಿ ಆದ್ರು ಅವರ ಆದರ್ಶ ಬಿಡಲಿಲ್ಲ. ದೇಶವನ್ನು ಸಮರ್ಥವಾಗಿ ನಡೆಸಿದರು. ಇಂಡೋ-ಪಾಕ್ ಕದನದಲ್ಲಿ ಸೇನೆಗೆ ಧೈರ್ಯ ಹೇಳಿದ್ದರು. ಯುದ್ದ ಗೆಲ್ಲಲು ಪ್ರೇರಣೆ ನೀಡಿದ್ದರು. ನಾವು ಅಂದು ಆಹಾರದಲ್ಲಿ ಸ್ವಾವಲಂಬಿ ಆಗಿರಲಿಲ್ಲ. ಹಸಿರು ಕಾಂತ್ರಿಗೆ ಅಡಿಪಾಯ ಹಾಕಿದ್ರು. ಜೈ ಜವಾನ್ ಜೈ ಕಿಸಾನ್ ಅಂತ ಹೇಳಿದರು. ಸತ್ಯದಿಂದ ಅವರು ಆಡಳಿತ ಮಾಡಿದರು. ಅವರ ಆಡಳಿತ ನಮಗೆ ಮಾರ್ಗದರ್ಶನ ಎಂದು ನುಡಿದರು.

ಬಳಿಕ ಮಾಧ್ಯಮಗಳೊಂದಿಗೆ ಚನ್ನಪಟ್ಟಣ ಗಲಾಟೆ ವಿಚಾರವಾಗಿ ಮಾತನಾಡಿ, ಮಾಹಿತಿ ತರಿಸಿಕೊಳ್ತಿದ್ದೇನೆ. ಸರ್ಕಾರದ ಕಾರ್ಯಕ್ರಮ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಹಿಂಸೆಗೆ ಅವಕಾಶ ಕೊಡಬಾರದು. ನಾವು ಪ್ರಬುದ್ಧವಾಗಿ ಇದ್ದೇವೆ. ಅನುದಾನ ಜನರಿಗೆ ಮುಟ್ಟಬೇಕು. ಘಟನೆ ಬಗ್ಗೆ ವರದಿ ಪಡೆದುಕೊಳ್ತೀನಿ ಎಂದರು.

ಇದೇ ವೇಳೆ ಫಿಟ್ ಇಂಡಿಯಾ ಫ್ರೀಡಂ ರನ್‍ಗೆ ಸಿಎಂ ಚಾಲನೆ ನೀಡಿದರು. ಕ್ರೀಡಾ ಇಲಾಖೆ ಆಯೋಜನೆ ಮಾಡಿರೋ ಫಿಟ್ ಇಂಡಿಯಾ ರನ್ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಿಎಸ್ ವಂದಿತಾ ಶರ್ಮಾ ಸೇರಿ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ