ರಾತ್ರಿ ಪಾರ್ಟಿ ನಂತರ ಹೊತ್ತಿ ಉರಿದ ಗುಡಿಸಲು, ಓರ್ವ ವ್ಯಕ್ತಿ ಸಜೀವ ದಹನ
Twitter
Facebook
LinkedIn
WhatsApp
ಬೀದರ್: ತಡ ರಾತ್ರಿ ಪಾರ್ಟಿ ಮಾಡಿದ ನಂತರ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದು ಓರ್ವ ವ್ಯಕ್ತಿ ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದಿದೆ. 60 ವರ್ಷ ಜಗನಾಥ ಹಲಗೆ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬ ಇಬ್ಬರು ತಡ ರಾತ್ರಿ ಪಾರ್ಟಿ ಮಾಡಿ ನಿದ್ದೆಗೆ ಜಾರಿದ್ದರು.
ಈ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಜಗನಾಥ ಹಲಗೆ ರಕ್ಷಿಸಲು ಮುಂದಾಗಿದ್ದ ಮಾರುತಿ ಎಂಬತಾನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಜಗನಾಥ ಹಲಗೆ ಸಾವಿನ ಸುದ್ದಿ ತಿಳಿದ ಸಂಬಂದಿಕರ ಆಕ್ರಂದನ ಮುಗಿಲುಮುಟ್ಟಿದೆ. ಜೋಳ ಕಾಯಲು ಜಮಿನಿನಲ್ಲಿ ಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದರು.
ಈ ಗುಡಿಸಲಿನಲ್ಲಿ ರಾತ್ರಿ ಪಾರ್ಟಿ ಮಾಡಿ ಜನನಾಥ ಮತ್ತು ಮಾರುತಿ ಇಬ್ಬರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದುರ್ಘಟನೆ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭಾಲ್ಕಿ ತಾಲೂಕಿನ ಗ್ರಾಮಿಣ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.