ರಾಜ್ಯದಲ್ಲಿ ಮತ ಎಣಿಕೆ ಆರಂಭಕ್ಕೆ ಕ್ಷಣಗಣನೆ!
Twitter
Facebook
LinkedIn
WhatsApp

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಹೊತ್ತಲ್ಲಿ ಮತ ಎಣಿಕೆ ಆರಂಭವಾಗಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಸಂಜೆಯೊಳಗೆ ಅಭ್ಯರ್ಥಿಗಳ ಅಂತಿಮ ಫಲಿತಾಂಶವೂ ಹೊರಬೀಳಲಿದೆ.
ಗೆದ್ದರೆ ಪಕ್ಷೇತರರೇ ‘ಪವರ್’ಫುಲ್
ಮನದಾನೋತ್ತರ ಸಮೀಕ್ಷೆಗಳಲ್ಲಿ6 ರಿಂದ 8 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವಿನ ಚಿತ್ರಣ ಸಿಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಫಲಿತಾಂಶಕ್ಕೆ ಮುನ್ನವೇ ಕಾರ್ಯಾಚರಣೆಗಿಳಿದಿವೆ. ಮ್ಯಾಜಿಕ್ ನಂಬರ್ ಮುಟ್ಟಲು ಕೊರತೆಯಾದರೆ ಪಕ್ಷೇತರರ ಅಗತ್ಯ ಉದ್ಭವಿಸುವ ಕಾರಣಕ್ಕೆ ಮೊದಲೇ ಸಂಪರ್ಕಿಸಿ ಬೆಂಬಲ ಕಾಯ್ದಿಟ್ಟುಕೊಳ್ಳಲು ಉಭಯ ಪಕ್ಷಗಳ ನಾಯಕರು ಪ್ರಯತ್ನ ಚುರುಕುಗೊಳಿಸಿದ್ದಾರೆ.ಸಮೀಕ್ಷೆಗಳಲ್ಲಿಅತಂತ್ರ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆಗಳೂ ದಟ್ಟವಾಗಿವೆ. ಕಾಂಗ್ರೆಸ್ ಅಥವಾ ಬಿಜೆಪಿ ಗೆಲುವು 100ರಿಂದ 110 ರ ಗಡಿಯಲ್ಲಿ ಸೀಟುಗಳಲ್ಲಿ ಗೆಲುವು ನಿಂತುಹೋದರೆ, ಪಕ್ಷೇತರರ ಆಸರೆ ಅನಿವಾರ್ಯ ಆಗಲಿದೆ. ಇಂತಹ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಫಲಿತಾಂಶಕ್ಕೆ ಮುನ್ನವೇ ಪಕ್ಷೇತರರತ್ತ ಪ್ರಮುಖ ಪಕ್ಷಗಳ ದೃಷ್ಟಿ ಹರಿದಿದೆ.
ಕುಮಾರಸ್ವಾಮಿ ವಾಪಾಸ್: ತಡರಾತ್ರಿ ಬೆಂಗಳೂರಿಗೆ ವಾಪಾಸ್ಸಾದ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರದಿಂದ ಬೆಂಗಳೂರಿಗೆ ತಡರಾತ್ರಿ ಆಗಮಿಸಿದರು. ಏರ್ಪೋರ್ಟ್‌ನಿಂದ ನೇರವಾಗಿ ಜೆಪಿ ನಗರ ಮನೆಗೆ ಧಾವಿಸಿದರು. ಏರ್ಪೋರ್ಟ್ ಸಿಬ್ಬಂದಿ ಸೆಲ್ಫಿಗಾಗಿ ಮುಗಿಬಿದ್ದ ಘಟನೆಯೂ ನಡೆಯಿತು
ಅಭ್ಯರ್ಥಿಗಳ ಭವಿಷ್ಯ ನಿರ್ಧಾರ, ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ
ಎಲ್ಲ 224 ಕ್ಷೇತ್ರಗಳಿಗೆ ಏಕಕಾಲಕ್ಕೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆದು, ದಾಖಲೆ ಮಟ್ಟದ ಶೇ.73.19 ಮತದಾನವಾಗಿತ್ತು. ಬಿಜೆಪಿಯಿಂದ 224, ಕಾಂಗ್ರೆಸ್‌ನಿಂದ 223 ಹಾಗೂ ಜೆಡಿಎಸ್‌ನ 209 ಅಭ್ಯರ್ಥಿಗಳು ಕಣದಲ್ಲಿದ್ದು, 918 ಪಕ್ಷೇತರರು ಸೇರಿ 2,615 ಅಭ್ಯರ್ಥಿಗಳ ಭವಿಷ್ಯ ಹೊರಬರಲಿದೆ. ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಣಿಕೆ ಕೇಂದ್ರದ ಆವರಣದಲ್ಲಿ ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಣೆ ನಿರ್ಬಂಧಿಸಲಾಗಿದೆ. 200 ಮೀಟರ್ ಸುತ್ತ ನಿರಬಂಧ ವಹಿಸಲಾಗಿದೆ. ಡಿಜೆ ಗೂ ಅವಕಾಶವಿಲ್ಲ.
ಮತ ಎಣಿಕೆಗೆ ಸಕಲ ಸಿದ್ಧತೆ
ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಸುಸೂತ್ರ ಪ್ರಕ್ರಿಯೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ. 224 ಚುನಾವಣಾಧಿಕಾರಿಗಳು, 317 ಸಹಾಯಕ ಚುನಾವಣಾಧಿಕಾರಿಗಳು, 450 ಹೆಚ್ಚುವರಿ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಎಣಿಕೆ ಕೇಂದ್ರದಲ್ಲಿ ತಲಾ 10ರಂತೆ ಒಟ್ಟು 306 ಹಾಲ್‌ಗಳಲ್ಲಿ4,256 ಟೇಬಲ್‌ಗಳಲ್ಲಿಎಣಿಕೆ ನಡೆಯಲಿದೆ. ಟೇಬಲ್‌ಗೆ ತಲಾ ಒಬ್ಬ ಮೇಲ್ವಿಚಾರಕರು, ಎಣಿಕೆ ಸಹಾಯಕರು, ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭ, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ
ಮೇ 10ರಂದು ನಡೆದ ಮತದಾನದ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ರಾಜ್ಯಾದ್ಯಂತ 36 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2,615 ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗಲಿದೆ. ಮೊದಲಿಗೆ ಅಂಚೆ ಹಾಗೂ ಮನೆಮನೆ ಮತದಾನದ ಮತಗಳ ಎಣಿಕೆಯೊಂದಿಗೆ ಪ್ರಕ್ರಿಯೆ ಆರಂಭವಾಗಲಿದ್ದು, ಬಹುತೇಕ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಟ್ರೆಂಡ್ ಸಿಗಲಿದೆ.