ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್-ಕಾರು ನಡುವೆ ಡಿಕ್ಕಿ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು
ರಾಜಸ್ಥಾನ: ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ರಾಜಸ್ಥಾನದ ಫತೇಪುರ್-ಸಲಾಸರ್ ಹೆದ್ದಾರಿಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಹರಿಯಾಣ ಮೂಲದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಬಗ್ಗೆ ಡೆಪ್ಯುಟಿ ಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಬರಬೇಕಿದೆ.
70ರ ಹರೆಯದ ವ್ಯಕ್ತಿಗೆ ಡಿಕ್ಕಿ ಹೊಡೆದು 8 ಕಿಮೀ ಎಳೆದೊಯ್ದು ಅವರ ಮೇಲೆ ಕಾರು ಚಲಾಯಿಸಿದ ಚಾಲಕ
ಪಾಟ್ನಾ: ಬಿಹಾರದಲ್ಲಿ (Bihar) ಕಾರೊಂದು ಹಿರಿಯ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು ಕಾರಿನ ಬಾನೆಟ್‌ಗೆ ಸಿಕ್ಕಿಹಾಕಿಕೊಂಡ ಆ ವ್ಯಕ್ತಿಯನ್ನು ಎಂಟು ಕಿಲೋಮೀಟರ್ ದೂರ ಎಳೆದೊಯ್ದಿದೆ. ನಂತರ ಕಾರು ಚಾಲಕ, ಹಠಾತ್ ಬ್ರೇಕ್ ಹಾಕಿದಾಗ ರಸ್ತೆಯ ಮೇಲೆ ವೃದ್ಧರ ಮೇಲೆ ಚಾಲಕ ಕಾರು ಚಲಾಯಿಸಿದ್ದು, ಹಿರಿಯ ವ್ಯಕ್ತಿ ಸ್ಥಳದಲ್ಲೇ ಅಸು ನೀಗಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಬಿಹಾರದ ಪೂರ್ವ ಚಂಪಾರಣ್ (East Champaran) ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಈ ಘಟನೆ ವರದಿಯಾಗಿದೆ.
ಸಾವಿಗೀಡಾದ ವ್ಯಕ್ತಿಯನ್ನು ಜಿಲ್ಲೆಯ ಕೋಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗ್ರಾ ಗ್ರಾಮದ ನಿವಾಸಿ 70 ವರ್ಷದ ಶಂಕರ್ ಚೌಧೂರ್ ಎಂದು ಗುರುತಿಸಲಾಗಿದೆ. ಸೈಕ್ಲಿಸ್ಟ್ ಶಂಕರ್ ಚೌಧೂರ್ ಅವರು ಬಾಂಗ್ರಾ ಚೌಕ್ ಬಳಿ ಎನ್ಎಚ್ 27 ಅನ್ನು ದಾಟುತ್ತಿದ್ದಾಗ ಗೋಪಾಲ್ಗಂಜ್ ಪಟ್ಟಣದಿಂದ ವೇಗವಾಗಿ ಬಂದ ಕಾರು ಬೈಸಿಕಲ್ ಗೆ ಡಿಕ್ಕಿ ಹೊಡೆದಿದೆ. ಹೀಗೆ ಕಾಕು ಗುದ್ದಿದಾಗ ಚೌದೂರ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಕಾರಿನ ವೈಪರ್ ಹಿಡಿದು ಕಾರನ್ನು ನಿಲ್ಲಿಸುವಂತೆ ಕೂಗುತ್ತಾ ಅವರು ಮನವಿ ಮಾಡಿದರು ಎನ್ನಲಾಗಿದೆ.