ರಾಜಕೀಯಕ್ಕೆ ಶುಭಾ ಪೂಂಜಾ ಎಂಟ್ರಿ ಕೊಡ್ತಾರಾ? ಸ್ಪಷ್ಟನೆ ನೀಡಿದ ನಟಿ
ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ (Shubha Poonja) ಸದ್ಯ ‘ತ್ರಿದೇವಿ’ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಈ ಬೆನ್ನಲ್ಲೇ ರಾಜಕೀಯ ಪ್ರವೇಶದ ಬಗ್ಗೆ ಬಿಗ್ ಬಾಸ್ (Bigg Boss) ಬೆಡಗಿ ಶುಭಾ ಪೂಂಜಾ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಸ್ತುತ ರಾಜಕೀಯ (Politics) ಅಂಗಳದಲ್ಲಿ ಚುನಾವಣೆ ಕಾವು ಜೋರಾಗಿದೆ. ಚುನಾವಣೆ ಬರುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚಿಗೆ ಕಿಚ್ಚ ಸುದೀಪ್ (Kiccha Sudeep) ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಸಾಧು ಕೋಕಿಲ (Sadhu Kokila) ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಚಿತ್ರರಂಗದಿAದ ರಾಜಕೀಯಕ್ಕೆ ಹಲವು ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ನಟಿ ಶುಭಾಗೂ ರಾಜಕೀಯ ಪ್ರವೇಶದ (Politics Entry) ಬಗ್ಗೆ ಪ್ರಶ್ನೆ ಎದುರಾಗಿದೆ.
ನನಗೆ ಸುಮಾರು ಜನ ಕೇಳ್ತಿರುತ್ತಾರೆ ರಾಜಕೀಯಕ್ಕೆ ಬರುತ್ತೀರಾ ಅಂತಾ ಆದರೆ ಸದ್ಯಕ್ಕೆ ಈ ಬಗ್ಗೆ ಆಲೋಚನೆ ಇಲ್ಲ. ಸಿನಿಮಾಗೆ ಅನಿರೀಕ್ಷಿತವಾಗಿ ಎಂಟ್ರಿ ಸಿಕ್ಕಿತು. ಅದೇ ರೀತಿ ರಾಜಕೀಯಕ್ಕೆ ಬರಲು ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕರೆ ಬರುತ್ತೀನಿ. ಆದರೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ನಿಮ್ಮ ಮತಗಳನ್ನ ಚಲಾಯಿಸಿ, ಮೇ 10ಕ್ಕೆ ಎಲೆಕ್ಷನ್ Vote ಮಾಡಿ ಎಂದು ನಟಿ ಮತದಾರನ ಕರ್ತವ್ಯದ ಬಗ್ಗೆ ಮಾತನಾಡಿದ್ದಾರೆ.
ಶುಭಾ ಪೂಂಜಾ ನಟನೆಯ `ತ್ರಿದೇವಿ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ದೇವಿಯಾಗಿ ಶುಭಾ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮತ್ತು ನಿರ್ಮಾಪಕಿಯಾಗಿ (Executive Producer) ಕಾರ್ಯ ನಿರ್ವಹಿಸಿದ್ದಾರೆ.