ರಶ್ಮಿಕಾಗೆ ಗಡ್ಡ ಬೆಳೆದಿದೆ ಎಂದು ಮಾರ್ಕ್ ಮಾಡಿ ಕಾಲೆಳೆದ ಅಭಿಮಾನಿ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಆಗಾಗ್ಗೆ ಅಭಿಮಾನಿಗಳು ಒಂದಿಲ್ಲೊಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಬಹಳಷ್ಟು ಸಾರಿ ಪಾಸಿಟಿವ್ ಆಗಿ, ಕೆಲವು ಸಲ ನೆಗೆಟಿವ್ ಆಗಿಯೂ ಕಾಮೆಂಟ್ ಮಾಡಿದ್ದು ಇದೆ. ಈ ಸಲ ಅನೇಕರು ರಶ್ಮಿಕಾಗೆ ಕಾಲೆಳೆದಿದ್ದಾರೆ. ಕಾರಣ ಅವರು ಟ್ವೀಟ್ ಮಾಡಿರುವ ಫೋಟೋ.
ಇಂದು ಬೆಳಗ್ಗೆ ಫೋಟೋವೊಂದನ್ನು (Photo) ಟ್ವಿಟರ್ ನಲ್ಲಿ ಶೇರ್ ಮಾಡಿರುವ ರಶ್ಮಿಕಾ, ‘ಐ ಡೋಂಟ್ ನೋ ಹೌ ಟು ಪೌಟ್ ಸೋ ಎ ಸ್ಟ್ರೈಟ್ ಔಟ್ ಕಿಸ್ಸೀ ಇಟ್ ಇಸ್’ ಎಂದು ಕೇಳಿದ್ದಾರೆ. ಇದಕ್ಕೆ ಕೆಲವರು ಸೋ ಕ್ಯೂಟ್, ಹಾಟ್ ಅಂತೆಲ್ಲ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಇದೇ ರೀತಿಯ ಬೇರೆ ನಟಿಯ ಫೋಟೋ ಲಿಂಕ್ ಮಾಡಿ, ಇವರಿಂದ ಕಲಿಯಿರಿ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ಮಾತ್ರ ಭಯಂಕರ ಎನ್ನುವಂತೆ ಸಂಶೋಧನೆ ಮಾಡಿದ್ದಾರೆ.
ಕೆಲ ಅಭಿಮಾನಿಗಳು ರಶ್ಮಿಕಾ ಹಾಕಿರುವ ಫೋಟೋವನ್ನು ಜೂಮ್ ಮಾಡಿ ಬಲಗಡೆ ಗದ್ದದಲ್ಲಿರುವ ಕೂದಲು ಮಾರ್ಕ್ ಮಾಡಿ ತೋರಿಸಿದ್ದಾರೆ. ‘ರಶ್ಮಿಕಾಗೆ ಗಡ್ಡ (Beard) ಬೆಳೆದಿದೆ’ ಎಂದು ಕಾಲೆಳೆದಿದ್ದಾರೆ. ಜೊತೆಗೆ ಆದರೂ ಕ್ಯೂಟ್ ಆಗಿ ಇದ್ದೀರಿ ಎಂದು ಹೊಗಳಿದ್ದಾರೆ. ಇನ್ನೊಬ್ಬ ಅದನ್ನು ತೆಗೆದುಹಾಕಿ ಎಂದೂ ಸಲಹೆ ನೀಡಿದ್ದಾರೆ.
ಈ ಫೋಟೋಗೆ ಸಾವಿರಾರು ಜನರು ಕಾಮೆಂಟ್ (Comments) ಮಾಡಿದ್ದಾರೆ. ಅಲ್ಲದೇ, ರಶ್ಮಿಕಾ ಕೇಳಿದ ಪ್ರಶ್ನೆಗೆ ಅನೇಕರು ಉತ್ತರಿಸಿದ್ದರೆ, ಇನ್ನೂ ಕೆಲವರು ದಾರಿ ತಪ್ಪಿಸುವಂತಹ ಪ್ರಯತ್ನವನ್ನೂ ಮಾಡಿದ್ದಾರೆ. ಇಡೀ ಕಾಮೆಂಟ್ ನಲ್ಲಿ ಸಖತ್ ಫಿನ್ನಿಯಾಗಿ ಇರುವಂತಹ ಕಾಮೆಂಟ್ಸ್ ಮತ್ತು ಫೋಟೋಗಳನ್ನು ಕಾಣಬಹುದು.