ಆದರೆ ಚಾಲಕನನ್ನು ರಕ್ಷಿಸಲು ಬಂದ ರವೀನಾ ಟಂಡನ್ ಮೇಲೆಯೇ ಮಹಿಳೆಯೊಬ್ಬರು ಹಲ್ಲೆ ಪ್ರಯತ್ನ ಮಾಡಿದ್ದಾರೆ. ಈ ಕುರಿತ ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ರವೀನಾ ಫ್ಯಾನ್ಸ್ ಆಘಾತಗೊಂಡಿದ್ದಾರೆ. ಇನ್ನು, ರವೀನಾ ಟಂಡನ್ ಅವರು ಮದ್ಯ ಸೇವನೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ರವೀನಾ ಟಂಡನ್ ಕಾರು ಅಪಘಾತ; ದಯವಿಟ್ಟು ಹೊಡಿಬೇಡಿ ಎಂದ ನಟಿ ವಿಡಿಯೋ ವೈರಲ್
ಮುಂಬೈನ ಬಾಂದ್ರಾ ಏರಿಯಾದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಅವರ ಮೇಲೆ ಶನಿವಾರ (ಜೂ.1) ರಾತ್ರಿ ಹಲ್ಲೆ ನಡೆದಿದೆ. ‘ದಯವಿಟ್ಟು ಹೊಡಿಬೇಡಿ…’ ಎಂದು ರವೀನಾ ಟಂಡನ್ ಪರಿಪರಿಯಾಗಿ ಬೇಡಿಕೊಂಡರೂ, ಈ ಘಟನೆ ನಡೆದಿದೆ. ಅಷ್ಟಕ್ಕೂ ಈ ಘಟನೆಗೆ ಕಾರಣವಾಗಿದ್ದು, ರಸ್ತೆ ಅಪಘಾತ! ಹೌದು, ರವೀನಾ ಅವರಿದ್ದ ಕಾರು ಅಪಘಾಕ್ಕೀಡಾಗಿದೆ. ಇದರಿಂದ ರೊಚ್ಚಿಗೆದ್ದ ಜನರು ರವೀನಾ ಮೇಲೆ ದಾಳಿ ಮಾಡಿದ್ದಾರೆ!
ಏನಿದು ಘಟನೆ?
ರವೀನಾ ಟಂಡನ್ ಅವರು ಪ್ರಯಾಣಿಸುತ್ತಿದ್ದ ಕಾರು ಮೂವರಿಗೆ ಡಿಕ್ಕಿ ಹೊಡೆಡಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಕಾರಿನ ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ರವೀನಾ ಹೊರಗೆ ಬಂದು ತಮ್ಮ ಚಾಲಕನನ್ನು ಪಾರು ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ. “ಅಪಘಾತದಿಂದ ಆ ಮಹಿಳೆಗೆ ರಕ್ತಸ್ರಾವವಾಗಿದೆ ಎಂಬುದು ನನಗೆ ತಿಳಿಸಿದೆ. ದಯವಿಟ್ಟು ನನ್ನ ಚಾಲಕನ್ನು ಹೊಡೆಯಬೇಡಿ, ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಅಲ್ಲಿದ್ದವರಿಗೆ ಕೇಳಿಕೊಂಡಿದ್ದಾರೆ.
ಮೊಹಮ್ಮದ್ ಎಂಬುವವರು ಈ ಬಗ್ಗೆ ದೂರು ನೀಡುವುದಕ್ಕೆ ಮುಂದಾಗಿದ್ದು, ನಟಿ ರವೀನಾ ಟಂಡನ್ ಅವರು ಮದ್ಯದ ಅಮಲಿನಲ್ಲಿದ್ದರು ಮತ್ತು ಅವರು ಅಪಘಾತಕ್ಕೀಡಾದ ಮಹಿಳೆಗೆ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಖಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಅಲ್ಲಿನ ಪೊಲೀಸರು ರವೀನಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮೂವರಿಗೆ ಗಾಯ
ಈ ಘಟನೆ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ರಿಜ್ವಿ ಕಾಲೇಜು ಬಳಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ನಟಿ ರವೀನಾ ಇದ್ದ ಕಾರು ತಾಯಿ, ಮಗಳು ಮತ್ತು ಅವರ ಸಂಬಂಧಿಗೆ ಡಿಕ್ಕಿ ಹೊಡೆದಿದ್ದು, ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿವೆ.ಈ ಘಟನೆಯಲ್ಲಿ ಎರಡೂ ಕಡೆಯಿಂದಲೂ ಮಾರಾಮಾರಿ ನಡೆದಿದೆ. “ನಟಿ ರವೀನಾ ಅವರ ಚಾಲಕ ಕಾರಿನಿಂದಿಳಿದು ತಾಯಿ ಮತ್ತು ಮಗಳ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ” ಎಂದು ದೂರುದಾರರು ಆರೋಪಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರ ಗುಂಪು ಚಾಲಕನ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ತಮ್ಮ ಕಾರಿನ ಚಾಲಕನನ್ನು ರಕ್ಷಿಸುವುದಕ್ಕಾಗಿ ಹೊರಬಂದ ನಟಿ ರವೀನಾ ಅವರ ಮೇಲೂ ಹಲ್ಲೆ ನಡೆದಿದೆ. ಅವರು ‘ಹೊಡೆಯಬೇಡಿ’ ಎಂದು ಮನವಿ ಮಾಡಿಕೊಂಡರೂ, ಯಾರೂ ಕೂಡ ಅವರ ಮಾತಿಗೆ ಕಿವಿ ನೀಡಿಲ್ಲ. ಇದೆಲ್ಲವೂ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಆ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kabhi Linking Road, Kabhi Warden Road pic.twitter.com/GRELw9mZuP #RaveenaTandon
— Sam (@SamKhan999) June 2, 2024