ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಆಕೆಗೆ ವಿಷ ನೀಡಿದ ಕಾಮುಕ
ಲಕ್ನೋ: ವ್ಯಕ್ತಿಯೊಬ್ಬ 18 ವರ್ಷದ ಯುವತಿಯನ್ನು (Woman) ಅಪಹರಿಸಿ ಅತ್ಯಾಚಾರವೆಸಗಿ (Rape) ನಂತರ ವಿಷ ನೀಡಿದ ಘಟನೆ ಉತ್ತರಪ್ರದೇಶದ (Uttarpradesh) ಜೆಹಾನಾಬಾದ್‍ನಲ್ಲಿ ನಡೆದಿದೆ.
ಕಮಲ್ ಬಂಧಿತ ವ್ಯಕ್ತಿ. ಕಮಲ್ ತನ್ನ ನೆರೆಮನೆಯ 18 ವರ್ಷದ ಯುವತಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಬಾಯಿಗೆ ಬಟ್ಟೆಯನ್ನು ಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಆಕೆ ವಿರೋಧಿಸಲು ಯತ್ನಿಸಿದಾಗ ಆಕೆಯನ್ನು ತೀವ್ರವಾಗಿ ಥಳಿಸಿ, ಬಲವಂತವಾಗಿ ವಿಷ ಕುಡಿಸಿದ್ದಾನೆ. ಈ ವೇಳೆ ಯುವತಿಯನ್ನು ಹುಡುಕುತ್ತಾ ಆಕೆಯ ಕುಟುಂಬಸ್ಥರು ಕಮಲ್ ಮನೆಗೆ ಬಂದಾಗ, ಆತನ ಕುಟುಂಬಸ್ಥರು ಯುವತಿಯ ತಾಯಿಗೆ ಕೆಟ್ಟದಾಗಿ ಬೈದು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಾಗಿದೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಪಿಲಿಭಿತ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಕಮಲ್, ಆತನ ಸಹೋದರ ಸಂಜು, ಸಹೋದರಿ ಶೀತಲ್, ತಾಯಿ ಮಾಯಾದೇವಿ ಮತ್ತು ತಂದೆ ಸತ್ಯಪಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.