ಯುಎಸ್ನ ಆರ್. ಬೊನಿ ಗೇಬ್ರಿಯಲ್ಗೆ ವಿಶ್ವ ಸುಂದರಿ ಪಟ್ಟ; ಭಾರತದ ದಿವಿತಾ ರೈಗೆ ನಿರಾಸೆ
Twitter
Facebook
LinkedIn
WhatsApp
ವಿಶ್ವಸುಂದರಿ ಪಟ್ಟ ಈ ಬಾರಿ ಯುಎಸ್ ಪಾಲಾಗಿದೆ. ಹೌದು 71ನೇ ವಿಶ್ವ ಸುಂದರಿ ಆವೃತ್ತಿಯು ಇಂದು (ಜ.15) ರಂದು ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಯುಎಸ್ನ ಆರ್’ಬೊನಿ ಗೇಬ್ರಿಯಲ್ ವಿಶ್ವ ಸುಂದರಿ ಕಿರೀಟ ಧರಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ದಿವಿತಾ ರೈ ವಿಶ್ವ ಸುಂದರಿ ಪಟ್ಟದಿಂದ ವಂಚಿತರಾಗಿದ್ದಾರೆ.
ಟಾಪ್ 16 ರ ಸ್ಥಾನದಲ್ಲಿದ್ದ ದಿವಿತಾ ರೈ ಅವರು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಪರಾಭವಗೊಂಡರು. ಹಾಗೆ ದಿವಿತಾ ರೈ ಅವರು ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದಿದ್ದರು. ಇದೇ ಸ್ಪರ್ಧೆಯಲ್ಲಿ 2021 ರಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ನಟಿಯರಾದ ಸುಶ್ಮಿತಾ ಸೇನ್ (1994) ಮತ್ತು ಲಾರಾ ದತ್ತಾ (2000) ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಭಾರತೀಯರು.