ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಯಾದಗಿರಿ: ಮದುವೆಯಾಗಲು ನಿರಾಕರಿಸಿದಕ್ಕೆ ಪ್ರಿಯಕರನಿಂದ ಕೊಲೆ; 20 ದಿನಗಳ ಬಳಿಕ ಆರೋಪಿ ಅಂದರ್

Twitter
Facebook
LinkedIn
WhatsApp
298934006 653786752771215 1026980049979693809 n 5

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 22 ದಿನಗಳ ಹಿಂದೆ ಇಡೀ ಜಿಲ್ಲೆಯನ್ನ ಬೆಚ್ಚಿ ಬಿಳಿಸುವ ಘಟನೆಯೊಂದು ನಡೆದು ಹೋಗಿತ್ತು. ರಾತ್ರಿ ವೇಳೆ ಪಂಚಶೀಲ ನಗರದ ಬಳಿಯ ಜಮೀನೊಂದರಲ್ಲಿ ಯುವತಿಯನ್ನ ಕೊಲೆ ಮಾಡಿ ಮೃತದೇಹವನ್ನ ಪೆಟ್ರೋಲ್ ಹಾಕಿ ಸಂಪೂರ್ಣವಾಗಿ ಸುಟ್ಟು ಹಾಕಲಾಗಿತ್ತು. ಮಾರನೆ ದಿನ ಮಧ್ಯಾಹ್ನ ಸುಟ್ಟ ಶವವನ್ನ ನೋಡಿ ಇಡೀ ಗ್ರಾಮದ ಜನರೆ ಬೆಚ್ಚಿ ಬಿದ್ದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸ್ಥಳದಲ್ಲಿ ಸಿಕ್ಕ ಸಣ್ಣ ಪುಟ್ಟ ವಸ್ತುವಗಳನ್ನ ತಗೆದುಕೊಂಡು ಹೋಗಿದ್ದರು. ಸಂಪೂರ್ಣವಾಗಿ ಸುಟ್ಟ ರೀತಿಯಲ್ಲಿ ಮೃತದೇಹ ಸಿಕ್ಕಿರುವ ಕಾರಣಕ್ಕೆ ಪೊಲೀಸರಿಗೂ ಯಾರ ಶವ ಎಂದು ಗೊತ್ತಾಗಿರಲಿಲ್ಲ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ಮಾಡಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದ್ರೆ, 20 ದಿನಗಳ ಬಳಿಕ ಮೃತದೇಹದ ಬಗ್ಗೆ ಪೊಲೀಸರಿಗೆ ಗೊತ್ತಾಗಿದ್ದು, ಆರೋಪಿಯನ್ನ ಇದೀಗ ಅರೆಸ್ಟ್​ ಮಾಡಲಾಗಿದೆ.

ಅಪರಿಚಿತ ಯುವತಿಯ ಸಾವಿನ ತನಿಖೆ ಆರಂಭಿಸಿದ ಪೊಲೀಸರು

ಇನ್ನು ತನಿಖೆ ಆರಂಭಿಸಿದ ಪೊಲೀಸರು, ಅದಕ್ಕೂ ಮೂರು ದಿನಗಳ ಮೊದಲು ಇದೆ ಪಂಚಶೀಲ ನಗರದ 28 ವರ್ಷದ ಯುವಕ ಮಾರುತಿ ತಾನು ಸಾಯೋದಾಗಿ ಹೇಳಿ ಸೆಲ್ಫಿ ವಿಡಿಯೋ ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದ. ಈ ವಿಡಿಯೋ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಆಗಿದ್ದರಿಂದ ಪೊಲೀಸರಿಗೆ ಈ ಮಾರುತಿ ಮೇಲೆ ಡೌಟ್ ಬಂದಿದೆ. ಯಾವ ಕಾರಣಕ್ಕೆ ಸಾಯುತ್ತಿನಿ ಎಂದು ಹೇಳಿದ್ದೆ ಎಂದು ತನಿಖೆ ಮಾಡಲು ಮುಂದಾಗುತ್ತಾರೆ. ಅಷ್ಟೋತ್ತಿಗೆ ಮುಂಬೈನಲ್ಲಿದ್ದ ಮಾರುತಿ ಕುಟುಂಬಸ್ಥರು ಮಾರುತಿ ಸಾಯೋದಾಗಿ ವಿಡಿಯೋ ಮಾಡಿದ್ದರಿಂದ ಸತ್ತೆ ಹೋಗಿದ್ದಾನೆ ಅಂತ ಮುಂಬೈನಿಂದ ಓಡಿ ಬಂದಿದ್ದರು.

ಕೂಡಲೇ ಪೊಲೀಸರು ಮಾರುತಿ ಕುಟುಂಬಸ್ಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೇರೆ ಬೇರೆಯವರ ಕಡೆಯಿಂದ ಮಾರುತಿಗೆ ಫೋನ್ ಮಾಡಿ ಇರುವ ಜಾಗವನ್ನ ಪತ್ತೆ ಮಾಡಿದ್ದಾರೆ. ಆದ್ರೆ, ಇತ್ತ ಕುಟುಂಬಸ್ಥರಿಗೆ ಪೊಲೀಸರು ಎಷ್ಟೇ ತನಿಖೆ ಮಾಡಿದ್ರು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮಾರುತಿಯನ್ನ ಕರೆದುಕೊಂಡು ಠಾಣೆಗೆ ಬಂದು ವಿಚಾರಣೆ ನಡೆಸಿದಾಗ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ.

ಕೊಲೆಯನ್ನ ಒಪ್ಪಿಕೊಂಡ ಆರೋಪಿ ಮಾರುತಿ

ಇನ್ನು ಈ ಮಾರುತಿ ಕಳೆದ ಒಂದು ವರ್ಷದ ಹಿಂದೆ ಕುಟುಂಬದ ಜೊತೆಗೆ ಮುಂಬೈಗೆ ಹೋಗಿದ್ದ. ಕುಟುಂಬಸ್ಥರು ಗಾರೆ ಕೆಲಸ ಮಾಡಿಕೊಂಡಿದ್ರೆ, ಮಾರುತಿ ಮಾತ್ರ ತಕ್ಕ ಮಟ್ಟಿಗೆ ವಿದ್ಯೆ ಕಲಿತಿದ್ದ. ಅದೇ ಕಾರಣಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇತ್ತ ಉತ್ತರ ಪ್ರದೇಶ ಮೂಲದ ಕೊಲೆಯಾದ ಯುವತಿ ಅಂತೀಮಾ ವರ್ಮಾ ಕೂಡ ಮಾರುತಿ ವಾಸವಿದ್ದ ಏರಿಯಾದಲ್ಲೇ ವಾಸವಾಗಿದ್ದಳು. ಅಂತೀಮಾ ಸಹೋದರಿ ಮುಂಬೈನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಕಾರಣಕ್ಕೆ ಅಂತೀಮಾ ಸಹೋದರಿಯ ಮನೆಯಲ್ಲಿದ್ದಳು. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಮಾರುತಿ ಮತ್ತು ಅಂತೀಮಾ ಮದ್ಯ ಪ್ರೀತಿ ಹುಟ್ಟಿಕೊಂಡಿತ್ತು.

ಅಂತೀಮಾ ಲವ್​ಗೆ ಬಿದ್ದಿದ್ದ ಮಾರುತಿ ಸರಿಯಾಗಿ ಮನೆಗೂ ಕೂಡ ಬರ್ತಾಯಿರಲಿಲ್ಲ. ಜೊತೆಗೆ ತಾನು ದುಡಿದ ಹಣವನ್ನು ಕೂಡ ಮನೆಗೆ ಕೊಡುತ್ತಿರಲಿಲ್ಲ. ಗಳಸಿದ್ದೆಲ್ಲ ಅಂತೀಮಾಳ ಜೊತೆಗೆ ಸುತ್ತಾಟ, ಮೋಜು ಮಸ್ತಿಗೆ ಖರ್ಚು ಮಾಡುತ್ತಿದ್ದ. ಆರಂಭದಲ್ಲಿಯೇ ಅಂತೀಮಾ ಮದುವೆ ಮಾಡಿಕೊಳ್ಳೋಣ ಎಂದು ಕೇಳಿದ್ದಳು. ಆದ್ರೆ, ಮಾರುತಿ ಮಾತ್ರ ಸದ್ಯಕ್ಕೆ ಬೇಡ ಎಂದು ಹೇಳಿದ್ದಾನೆ. ಇನ್ನು ಈ ಅಂತೀಮಾ ವರ್ಮಾ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಗಿ ಆಕ್ಟಿವ್ ಆಗಿದ್ದು, ದಿನಕ್ಕೆ ನಾಲ್ಕೈದು ರೀಲ್ಸ್ ಮಾಡೋದೆ ಕೆಲಸವಾಗಿತ್ತು. ರೀಲ್ಸ್ ಮಾಡ್ತಾ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ರೀಲ್ಸ್ ಮಾಡೋರು ಪರಿಚಯವಾಗಿದೆ.

ದಿನಗಳು ಕಳೆಯುತ್ತಿದ್ದ ಹಾಗೆ ಹೊಸದಾಗಿ ಸಿಕ್ಕ ಸ್ನೇಹಿತರ ಜೊತೆ ಸಲುಗೆಯಿಂದ ಇರೋದು ರೀಲ್ಸ್ ಮಾಡುವ ಕೆಲಸವನ್ನ ಅಂತೀಮಾ ಮಾಡ್ತಾಯಿದ್ದು, ಸಲುಗೆಯಿಂದ ಮಾಡಿದ ರೀಲ್ಸ್ ಗಳನ್ನ ನೋಡಿ, ಮಾರುತಿಗೆ ಅಂತೀಮಾ ನನ್ನ ಬಿಟ್ಟು ಬೇರೆಯವನ ಜೊತೆ ಹೋಗ್ತಾಳೆ ಎಂದು ಸಂಶಯ ಬರುತ್ತೆ. ಇದೆ ಕಾರಣಕ್ಕೆ ಆರಂಭದಲ್ಲಿ ಮದುವೆ ಬೇಡ ಅಂದಿದ್ದ ಮಾರುತಿ ಈಗ ಮದುವೆ ಆಗೋಣ ಎಂದು ದುಂಬಾಲು ಬಿದ್ದಿದ್ದ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಹುಚ್ಚಲ್ಲಿದ್ದ ಅಂತೀಮಾ ಮದುವೆ ಬೇಡ ಅಂತ ಹೇಳಿದ್ದಾಳೆ.

ಇದೆ ಕಾರಣಕ್ಕೆ ಇದೆ ಏ.2 ರಂದು ಸುತ್ತಾಡಿ ಬರೋಣ ಅಂತ ಹೇಳಿ ಅಂತೀಮಾಳನ್ನ ಯಾದಗಿರಿಗೆ ಕರೆದುಕೊಂಡು ಬಂದಿದ್ದ. ಬೆಳಗ್ಗೆಯಿಂದ ಸಂಜೆ ವರೆಗೆ ಸುತ್ತಾಡಿದ್ದ ಇಬ್ಬರು ಸಂಜೆಯಾಗುತ್ತಿದ್ದ ಹಾಗೆ ಮದುವೆ ವಿಷಯಕ್ಕೆ ಜಗಳವಾಗಿದೆ. ಕೋಪದಲ್ಲಿದ್ದ ಮಾರುತಿ ತನ್ನೂರಾದ ಪಂಚಶೀಲ ನಗರದ ತನ್ನ ಜಮೀನಿನಲ್ಲಿ ಅಂತೀಮಾಳ ಕುತ್ತಿಗೆ ಹಿಸುಕಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲೆ ಊರಲ್ಲಿ ಕಿರಾಣಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ನಾಲ್ಕೈದು ಬಾಟಲ್ ಪೆಟ್ರೋಲ್ ಖರೀದಿ ಮಾಡಿಕೊಂಡು ಬಂದು ಅಂತೀಮಾಳ ಮೃತ ದೇಹವನ್ನ ಸುಟ್ಟು ಹಾಕಿದ್ದ. ಬಳಿಕ ಊರು ಬಿಟ್ಟು ಓಡಿ ಹೋಗಿದ್ದಾನೆ. ಆದ್ರೆ, ಈಗ 20 ದಿನಗಳ ಬಳಿಕ ಕೊಲೆಗಾರ ಪಾಗಲ್ ಪ್ರೇಮಿ ಮಾರುತಿ ಅರೆಸ್ಟ್ ಆಗಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist