ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಯಲ್ಲಾಪುರದಲ್ಲಿ ನೂತನ ಏಡಿ ಪತ್ತೆ; ಮಗಳ ಹೆಸರನ್ನಿಟ್ಟ ತಜ್ಞ

Twitter
Facebook
LinkedIn
WhatsApp
ಯಲ್ಲಾಪುರದಲ್ಲಿ ನೂತನ ಏಡಿ ಪತ್ತೆ; ಮಗಳ ಹೆಸರನ್ನಿಟ್ಟ ತಜ್ಞ

ಯಲ್ಲಾಪುರ (ಫೆ.14) :  ಹೊಸ ಜಾತಿಯ ಸಿಹಿ ನೀರಿನ ಏಡಿಯೊಂದು ಮಧ್ಯ ಪಶ್ವಿಮ ಘಟ್ಟದ ಭಾಗವಾದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಪತ್ತೆಯಾಗಿದೆ. 

ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ(Gopalkrishna Hegde), ಅರಣ್ಯ ಇಲಾಖೆ(Forest depertment)ಯ ಸಿಬ್ಬಂದಿ ಪರಶುರಾಮ ಭಜಂತ್ರಿ(Parashuram Bhajantri) ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಸಮೀರಕುಮಾರ ಪಾಟಿ ತಂಡ ಈ ವೇಲಾ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿ(Crab)ಯನ್ನು ಪತ್ತೆ ಹಚ್ಚಿದ್ದು, ಇದಕ್ಕೆ ‘ವೇಲಾ ಬಾಂಧವ್ಯ'(Vela bandhavya) ಎಂದು ಹೆಸರಿಟ್ಟಿದ್ದಾರೆ. 

ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಈ ಏಡಿಯು ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಾಣಸಿಗುತ್ತವೆ. ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ‌ ಕೊರೆದು ಇದು ವಾಸ ಮಾಡುತ್ತದೆ. ಸುಮಾರು ನಾಲ್ಕು ಇಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ. 

ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆಯವರ ಯಲ್ಲಾಪುರ ತಾಲೂಕಿನ ಬಾರೆಯಲ್ಲಿರುವ ತೋಟದಲ್ಲಿ ಈ ಏಡಿ ಪತ್ತೆಯಾಗಿದ್ದು, ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಇದಾಗಿದೆ. ವೇಲಾ ಕುಲದ ಕರ್ಲಿ, ಪುಲ್ವಿನಾಟ, ವಿರೂಪ ಎಂಬ ಮೂರೂ ಪ್ರಭೇದಗಳು ಕೇರಳದ ಕರಾವಳಿಯಲ್ಲಿ ಈ ಮೊದಲು ಪತ್ತೆಯಾಗಿದ್ದು, ನಾಲ್ಕನೇ ಪ್ರಭೇದ ಈ ವೇಲಾ ಬಾಂಧವ್ಯ ಆಗಿದೆ. 

ಅಂದಹಾಗೆ, ಬಾರೆಯಲ್ಲಿ ಪತ್ತೆಯಾಗಿರುವ ಈ ಏಡಿಗೆ ಇಟ್ಟಿರುವ ಹೆಸರು ವಿಶೇಷವಾಗಿದ್ದು, ಈ ಏಡಿಯನ್ನು ಗುರುತು ಮಾಡಿರುವ ಗೋಪಾಲಕೃಷ್ಣ ಹೆಗಡೆಯವರ ಮಗಳ ಹೆಸರು ಬಾಂಧವ್ಯ ಹೆಗಡೆ(Bandhavya hegde)ಯವರ ಹೆಸರೇ ಈ ಏಡಿಗಿರಿಸಲಾಗಿದೆ. ಬಾಂಧವ್ಯ ಬಾರೆಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದು, ಅವರದ್ದೇ ತೋಟದಲ್ಲಿ ಈ ಏಡಿ ಪತ್ತೆಯಾಗಿರುವ ಕಾರಣ ಅವರ ಮಗಳ ಹೆಸರನ್ನೇ ಏಡಿಗೆ ನಾಮಕರಣ ಮಾಡಲಾಗಿದೆ.

ಬಹುತೇಕ ಹೊಸ ಜೀವಿಗಳಿಗೆ ಲ್ಯಾಟಿನ್ ಹೆಸರುಗಳನ್ನು ಇಡುವ ಕಾರಣ ಸಾಮಾನ್ಯ ಜನರು ಕೂಡಾ ನೆನಪಿನಲ್ಲಿಡಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ