ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ; ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು

Twitter
Facebook
LinkedIn
WhatsApp
ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಹಣಾಹಣಿಯಲ್ಲಿ ಭರ್ಜರಿಯಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಆರ್ ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಅಧಿಕಾರಯುತ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ. ಅಮೋಘ ಹೋರಾಟ ಸಂಘಟಿಸಿ ದ ಆರ್ ಸಿಬಿ +0.459 ರನ್ ರೇಟ್ ಹೊಂದಿ ಮುಂದಿನ ಸುತ್ತು ಪ್ರವೇಶಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 219 ರನ್ ಗಳ ಭರ್ಜರಿ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ ರಚಿನ್ ರವೀಂದ್ರ, ರಹಾನೆ, ಧೋನಿ, ಜಡೇಜ ಅವರ ಹೋರಾಟದ ನಡುವೆಯೂ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಹೊರ ಬಿದ್ದಿತು.

ಮೊದಲ ಕೆಲವು ಪಂದ್ಯಾಟಗಳಲ್ಲಿ ಮ್ಯಾಕ್ಸ್ವೆಲ್ ಅತ್ಯಂತ ಕಲಾಪೆ ಬ್ಯಾಟಿಂಗ್ ನಿಂದ ಎಲ್ಲರ ಟೀಕೆಗೆ ಒಳಗಾಗಿದ್ದರು, ಬೌಲಿಂಗ್ ನಲ್ಲಿ ಕೂಡ ವೈಫಲ್ಯ ಹೊಂದಿದ್ದರು. ಆದರೆ ನಿನ್ನ ನಡೆದ ಅಗತ್ಯ ಪಂದ್ಯಾಟದಲ್ಲಿ ಬೌಲಿಂಗ್ ಆಗೋ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸಿ ಆರ್‌ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮುಂದಿನ ಪಂದ್ಯಾಟದಲ್ಲಿ ಮ್ಯಾಕ್ಸ್ ಸಿಡಿದರೆ ಫೈನಲಿಗೆ ಮುನ್ನುಗ್ಗಲು ಯಾವುದೇ ಸಂಶಯವಿಲ್ಲ.

ಫ್ಲೆಸಿಸ್ ಪಂದ್ಯಶ್ರೇಷ್ಠ

ನಾಯಕನ ಜವಾಬ್ದಾರಿ ಮೆರೆದ ಫ್ಲೆಸಿಸ್ ಪಂದ್ಯಶ್ರೇಷ್ಠ ಎನಿಸಿ ಕೊಂಡರು. ಸಾಮರ್ಥ್ಯ ಮೆರೆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ನಿಜವಾಗಿಯೂ ಪಂದ್ಯದ ನಾಯಕ ಎನಿಸಿಕೊಂಡರು. 54 ರನ್ ಗಳಿಸಿದ್ದು ಮಾತ್ರವಲ್ಲದೆ ಅನುಭವಿ ಕೊಹ್ಲಿ ಸೇರಿ ಎಲ್ಲ ಆಟಗರೊಂದಿಗೆ ರಣತಂತ್ರ ಹೂಡಿ ಚೆನ್ನೈ ಗೆ ಲಗಾಮು ಹಾಕಿದುದರಲ್ಲಿ ದೊಡ್ಡ ಪಾತ್ರ ಫ್ಲೆಸಿಸ್ ಅವರದ್ದಾಗಿತ್ತು. ರೆಹಾನ್ ಅವರ ಕ್ಯಾಚ್ ಮಾತ್ರ ಅದ್ಭುತವಾಗಿತ್ತು. ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗು ಮೂಡಿಸಿತು.

ಗೆಲುವಿನ ಕೇಕೆ
ರೋಚಕ ಪಂದ್ಯವನ್ನು ಕಣ್ ತುಂಬಿಕೊಂಡ ಆರ್ ಸಿಬಿ ಅಭಿಮಾನಿಗಳು ಗೆಲುವಿನ ಕೇಕೆ ಹಾಕುತ್ತಾ ಕ್ರೀಡಾಂಗಣದಿಂದ ಹೊರ ಬಂದ ದೃಶ್ಯ ಕಂಡು ಬಂದಿತು. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಗಳು ಮೊಳಗಿದವು. ಸಾಮಾಜಿಕ ತಾಣದಲ್ಲೂ ಆರ್ ಸಿಬಿ ಆಟಕ್ಕೆ ಮನಸೋತ ಅಭಿಮಾನಿಗಳು ಪ್ರಶಂಸೆಯ ಸುರಿ ಮಳೆ ಸುರಿಸಿದ್ದಾರೆ. ಸೋತು ಸುಣ್ಣವಾಗಿದ್ದ ಆರ್ ಸಿಬಿ ಯ ಮೇಲೆ ನಿರಾಶೆ ವ್ಯಕ್ತವಾಗಿತ್ತು.ಈಗ ಮತ್ತೆ ಹೊಸ ಉತ್ಸಾಹ ಚಿಗುರಿದೆ.

ಅನೇಕ ಅಭಿಮಾನಿಗಳು ವರುಣ ದೇವ ವಿರಾಮ ನೀಡಿ ಆರ್ ಸಿಬಿ ಪಂದ್ಯ ಗೆಲ್ಲಬೇಕು ಎಂದು ಪೂಜೆ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು.

ಚಿನ್ನಸ್ವಾಮಿಯಲ್ಲಿ ಕೊಹ್ಲಿ 3,000 ರನ್‌
ವಿರಾಟ್‌ ಕೊಹ್ಲಿ ಎಂ. ಚಿನ್ನಸ್ವಾಮಿ ಮೈದಾನದಲ್ಲಿ 3000 ರನ್‌ ಪೂರೈಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಾತ್ರರಾದರು. ಇದರೊಂದಿಗೆ ಒಂದೇ ತಾಣದಲ್ಲಿ ಈ ಸಾಧನೆಗೈದ ಮೊದಲಿಗನೆನಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist