ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮೊದಲ ಬಾರಿಗೆ ತಾಯಿಯಾದ 70 ವರ್ಷದ ಮುದುಕಿ..!

Twitter
Facebook
LinkedIn
WhatsApp
ಮೊದಲ ಬಾರಿಗೆ ತಾಯಿಯಾದ 70 ವರ್ಷದ  ಮುದುಕಿ..!

ಇತ್ತೀಚೆಗೆ ತಡವಾಗಿ ಮದುವೆಯಾಗೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಲೈಫಲ್ಲಿ ಏನಾದ್ರೂ ಅಚೀವ್ ಮಾಡ್ತೀವಿ, ಅದೂ ಇದೂ ಅಂತ ಈಗಿನ ಜನರೇಷನ್ ಮಿನಿಮಮ್ ಅಂದ್ರೆ 35 ವರ್ಷವಾಗೋವರೆಗೂ ಮದ್ವೆಯಾಗೋ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ. ಇಂಥಹವರಿಗೆ ಮಕ್ಕಳಾಗೋದು ಸ್ವಲ್ಪ ಕಷ್ಟವಾಗಬಹುದು. ಇಂಥಹವರಿಗಾಗಿಯೇ ವೈದ್ಯಲೋಕದಲ್ಲಿ ಐವಿಎಫ್ ತಂತ್ರಜ್ಞಾನ ವರದಾನವಾಗಿದೆ. 50 ದಾಟಿದ ಮಹಿಳೆಯರೂ ಕೂಡ ಈ ಐವಿಎಫ್ ತಂತ್ರಜ್ಞಾನದಿoದ ಮಕ್ಕಳನ್ನು ಪಡೀಬಹುದು. ಆದ್ರೆ ಇದೇ ತಂತ್ರಜ್ಞಾನದಿoದ 70 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಮಗುವನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ನಿಜ..ಇತ್ತೀಚೆಗೆ ಯುವಜನತೆಯನ್ನ ಬಂಜೆತನದ ಸಮಸ್ಯೆ ಅತಿ ಹೆಚ್ಚಾಗಿ ಕಾಡ್ತಿದೆ. ದೇಹದಲ್ಲಿನ ನ್ಯೂನ್ಯತೆ ಸೇರಿದಂತೆ ನಾನಾ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗುತ್ತೆ. ಆದ್ರೆ ನಾವೂ ಎಲ್ಲರಂತೆ ನಮ್ಮ ಕುಟುಂಬವನ್ನು ಸಂಪೂರ್ಣಗೊಳಿಸಬೇಕು, ನಮಗೂ ಒಂದು ಮಗು ಬೇಕು ಅಂತ ಅದೆಷ್ಟೋ ದಂಪತಿ ಹಂಬಲಿಸುತ್ತಿದ್ದಾರೆ. ಇಂತಹವರಿಗಾಗಿಯೇ ಈ ಐವಿಎಫ್ ತಂತ್ರಜ್ಞಾನ ಅವಿಷ್ಕರಿಸಲಾಗಿದೆ. ಹೌದು, ಈ ಐವಿಎಫ್ ತಂತ್ರಜ್ಞಾನದಿoದಾಗಿ ವಿಶ್ವದಲ್ಲಿ ಕೋಟ್ಯಂತರ ಮಂದಿ ದಂಪತಿ ಮಕ್ಕಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐವಿಎಫ್ ಚಿಕಿತ್ಸಾ ಪದ್ಧತಿ ಅತಿ ಹೆಚ್ಚು ಚಾಲ್ತಿಯಲ್ಲಿದೆ. 50 ದಾಟಿದವ್ರೂ ಕೂಡ ಈ ಚಿಕಿತ್ಸಾ ವಿಧಾನದಿಂದ ಮಕ್ಕಳನ್ನು ಪಡೀಬಹುದು. ಆದ್ರೆ ನಾವೀಗ ಹೇಳೋದಕ್ಕೆ ಹೊರಟಿರೋದು 70 ವರ್ಷದ ಹಣ್ಣಣ್ಣು ಮುದುಕಿಯೊಬ್ಬರು ಮೊದಲ ಬಾರಿಗೆ ತಾಯಿಯಾಗಿರೋ ಕಥೆಯನ್ನ.

ಈಕೆಯ ಹೆಸ್ರು ಜಿವುಬೆನ್ ವಾಲಾಭಾಯಿ. ಗುಜರಾತ್ ನ ಕಚ್ ಜಿಲ್ಲೆಯ ಮೋರಾ ಗ್ರಾಮದ ನಿವಾಸಿ. ಸುಂದರ ಜೀವನ ನಡೆಸ್ತಿದ್ದ ಜಿವುಬೆನ್ ದಂಪತಿಗೆ ಅದ್ಯಾಕೋ ಮಕ್ಕಳೇ ಆಗಲಿಲ್ಲ. ಸಿಕ್ಕ ಸಿಕ್ಕವರೆಲ್ಲಾ ಮಕ್ಕಳಿಲ್ಲಾ ಅನ್ನೋ ಬಗ್ಗೆ ಈ ದಂಪತಿಯ ಮನಸ್ಸಿಗೆ ನೋವಾಗೋ ಹಾಗೆ ಮಾತನಾಡ್ತಿದ್ರಂತೆ. ಇದರಿಂದ ತುಂಬಾ ಬೇಸರಗೊಂಡಿದ್ದ ಈ ದಂಪತಿಗೆ ಐವಿಎಫ್ ನಿಂದ ಮಗು ಪಡೆಯಬಹುದು ಅನ್ನೋ ವಿಚಾರ ಇತ್ತೀಚೆಗೆ ತಿಳಿದಿದೆ. ಆದ್ರೆ ಮದ್ವೆಯಾಗಿ ಈಗಾಗಲೇ 45 ವರ್ಷಗಳೇ ಕಳೆದುಹೋಗಿವೆ, ಈಗ ಮಕ್ಕಳು ಮರಿ ಏನೂ ಬೇಡಪ್ಪಾ ಅಂತ ಈ ದಂಪತಿ ಸುಮ್ಮನೆ ಕೂರಲಿಲ್ಲ. ಹೇಗಾದ್ರೂ ಮಾಡಿ ನಾವು ಮಕ್ಕಳು ಪಡೀಲೇಬೇಕು ಅಂತ ಜಿವುಬೆನ್ ದೃಢ ನಿರ್ಧಾರ ತೆಗೆದುಕೊಂಡ್ರು. ಅದರಂತೆ ಈ ಹಣ್ಣಣ್ಣು ಮುದುಕಿ ಜಿವುಬೆನ್, ಭುಜ್ ನಲ್ಲಿರೋ ಖಾಸಗಿ ಆಸ್ಪತ್ರೆ ವೈದ್ಯರ ಬಳಿ ತೆರಳಿ ನನಗೆ ಮದುವೆಯಾಗಿ 45 ವರ್ಷ ಆಗಿದೆ, ನನ್ನ ವಯಸ್ಸು 70. ನೀವು ಏನು ಮಾಡ್ತೀರೋ ಏನೋ ನಂಗೆ ಗೊತ್ತಿಲ್ಲ, ನಾನೂ ಒಂದು ಮಗು ಪಡೆಯುವಂತೆ ಚಿಕಿತ್ಸೆ ನೀಡಿ ಅಂತ ಧೈರ್ಯವಾಗಿ ಹೇಳಿದ್ಲು. ಇನ್ನು ಈಕೆಯ ಮಾತು ಕೇಳಿ ವೈದ್ಯರೇ ಕ್ಷಣಕಾಲ ದಂದಾಗಿಬಿಟ್ರು. ಈ ವಯಸ್ಸಲ್ಲೂ ಈಕೆಯ ಈ ಧೈರ್ಯ ನೋಡಿ ವೈದ್ಯರು ಕೂಡ ಚಿಕಿತ್ಸೆ ನೀಡೋದಾಗಿ ತಿಳಿಸಿದ್ರು.
ಇನ್ನುಈ ಅಜ್ಜಿಗೆ ಐವಿಎಫ್ ಮೂಲಕ ಚಿಕಿತ್ಸೆ ನೀಡೋದು ಭುಜ್ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಅದಾಗಲೇ ಜಿವುಬೆನ್ ಗೆ ಮುಟ್ಟು ನಿಂತಿತ್ತು. ಹೀಗಾಗಿ ಕೃತಕವಾಗಿ ಮುಟ್ಟಾಗುವಂತೆ ಮಾಡಿ, ಆಕೆಯ ಗರ್ಭಕೋಶಕ್ಕೆ ಶಕ್ತಿ ತುಂಬಿ ಈ ಚಿಕಿತ್ಸೆ ನೀಡಲಾಯ್ತು. ಇನ್ನು ಐವಿಎಫ್ ನಿಂದ ಮಗು ಪಡೆಯೋದೇನೂ ಸುಲಭದ ಮಾತಲ್ಲ, ಇದಕ್ಕೆ ನಾನಾ ನಿಯಮಗಳನ್ನ ಚಾಚೂ ತಪ್ಪದೇ ಪಾಲಿಸಬೇಕು. ಇಲ್ಲದಿದ್ರೆ ಗರ್ಭಾವಸ್ತೆಯ ಯಾವುದೇ ಹಂತದಲ್ಲಾದ್ರೂ ಗರ್ಭಪಾತವಾಗೋ ಚಾನ್ಸಸ್ ಇರುತ್ತೆ. ಹೀಗಾಗಿ ಜಿವುಬೆನ್ ವೈದ್ಯರು ಹೇಳಿದ ಎಲ್ಲಾ ರೂಲ್ಸ್ ಫಾಲೋ ಮಾಡಿದ್ರು. ಹೀಗಾಗಿ ಕಳೆದ ತಿಂಗಳು ಈ ಅಜ್ಜಿ ಜಿವುಬೆನ್ ಶಿಶುವಿಗೆ ಜನ್ಮ ನೀಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು