ಶನಿವಾರ, ಮೇ 4, 2024
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ

Twitter
Facebook
LinkedIn
WhatsApp
ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ

ಬಾಲಿವುಡ್ ಹಾಟ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಲಿರುವ ಮಲೈಕಾ ಹೊಸ ರಿಯಾಲಿಟಿ ಶೋ ‘ಮೂವಿಂಗ್ ಇನ್ ವಿತ್ ಮಲೈಕಾ’ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆಯೂ ಮಲೈಕಾ ಬಹಿರಂಗ ಪಡಿಸಿದರು. ವಿಚ್ಛೇದನದ ಬಳಿಕವೂ ಅರ್ಬಾಜ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದಾಗಿ ಮಲೈಕಾ ಹೇಳಿದ್ದಾರೆ. ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದು ಯಾಕೆ ಎಂದು ಮಲೈಕಾ ಅರೋರಾ ಬಹಿರಂಗ ಪಡಿಸಿದರು.  

ತನ್ನ ಮನೆಯಿಂದ ಹೊರ ಬರುವ ಏಕೈಕ ಕಾರಣಕ್ಕೆ ತಾನು ಅರ್ಬಾಜ್ ಖಾನ್ ಅವರನ್ನು ಮದುವೆ ಆಗಿರುವುದಾಗಿ ಹೇಳಿದರು ಮಲೈಕಾ ಅರೋರಾ. ಬಾಲಿವುಡ್ ನಿರ್ದೇಶಕಿ, ಡಾನ್ಸರ್ ಫರ್ಹಾ ಖಾನ್ ಜೊತೆ ಮಾತನಾಡಿದ ಮಲೈಕಾ ತನ್ನ ಜೀವನದ ಅನೇಕ ಘಟನೆಗಳನ್ನು ಬಿಚ್ಚಿಟ್ಟರು. ‘ಅರ್ಬಾಜ್‌ಗೆ ಪ್ರಪೋಸ್ ಮಾಡಿದ್ದು ನಾನೇ. ಆದರೆ ಇದು ಯಾರಿಗೂ ಗೊತ್ತಿಲ್ಲ. ಅರ್ಬಾಜ್ ನನಗೆ ಪ್ರಪೋಸ್ ಮಾಡಿದ್ದು ಅಲ್ಲ. ಇದು ಬೇರೆ ರೀತಿಯಲ್ಲಿತ್ತು. ಆದರೆ ನಾನು ನಿಮ್ಮನ್ನು ಮದುವೆಯಾಗ ಬೇಕೆಂದುಕೊಂಡಿದ್ದೀನಿ ಅಂತ ಹೇಳಿದೆ. ನೀವು ಸಿದ್ಧರಿದ್ದೀರಾ? ಅಂತ ಕೇಳಿದೆ. ತುಂಬಾ ಮುದ್ದಾಗಿ ಅವರು (ಅರ್ಬಾಜ್) ನನ್ನ ಕಡೆ ತಿರುಗಿ, ನೀವು ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿ ಎಂದು ನನಗೆ ಹೇಳಿದರು’ ಎಂದು ಮಲೈಕಾ ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದರು. 

When Arbaaz Khan Expressed His Views On Ex-Wife, Malaika Arora's Sizzling  Looks And Risque Outfits

ಮದುವೆ ಬಳಿಕ ಎಲ್ಲಿ ತಪ್ಪಾಯಿತು ಎನ್ನುವುದರ ಬಗ್ಗೆಯೂ ಮಲೈಕಾ ವಿವರಿಸಿದರು. ‘ನಾನು ತುಂಬಾ ಚಿಕ್ಕವಳಾಗಿದ್ದೆ. ನಾನು ಕೂಡ ಬದಲಾದೆ. ನಾನು ಜೀವನದಲ್ಲಿ ವಿಭಿನ್ನತೆಯನ್ನು ಬಯಸುತ್ತೇನೆ. ಮತ್ತು ಇಂದು ನಾವು ಉತ್ತಮ ಜನರುನ್ನು ಹೊಂದಿದ್ದೇನೆ. ದಬಾಂಗ್ ಬಿಡುಗಡೆಯಾಗುವವರೆಗೂ ತಮ್ಮ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರ ಅವರು ತುಂಬಾ ಇರಿಟೇಟ್ ಮಾಡುವ ವ್ಯಕ್ತಿಯಾದರದು.  ನನ್ನಿಂದ ದೂರವಾಗಲು ಪ್ರಾರಂಭಿಸಿದರು’ ಎಂದು ಹೇಳಿದರು. 

ಅರ್ಬಾಜ್ ದೂರ ಆದ ಬಗ್ಗೆ ಮಾತನಾಡುತ್ತಾ ಅವರೊಬ್ಬರು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ. ಅಪಘಾತವಾದಾಗ ತನ್ನನ್ನು ನೋಡಲು ಬಂದ ಮೊದಲ ವ್ಯಕ್ತಿಯಲ್ಲಿ ಅವರು ಒಬ್ಬರು ಎಂದು ಹೇಳಿದರು. ‘ನಾನು ವಾಹನದ ಚಕ್ರದಿಂದ ಹೊರಬಂದಾಗ ನಾನು ನೋಡಿದ ಮೊದಲ ಮುಖಗಳಲ್ಲಿ ಅರ್ಬಾಜ್ ಕೂಡ ಒಬ್ಬರು. ಆ ಕ್ಷಣ ಅವನು ನನ್ನನ್ನು ಕೇಳುತ್ತಲೇ ಇದ್ದರು ನಿನಗೆ ನೋಡಲು ಆಗುತ್ತಾ? ಎಷ್ಟು ಸಂಖ್ಯೆಗಳು? ಎಷ್ಟು ಬೆರಳುಗಳು?’ ಎಂದು. ನಾನು ಅವರು ಯಾಕೆ ಇದನ್ನೆಲ್ಲಾ ಕೇಳುತ್ತಿದ್ದಾರೆ? ಅಂತ ತುಂಬಾ ಅಚ್ಚರಿ ಪಟ್ಟಿದ್ದೆ. ಒಂದು ಸೆಕೆಂಡ್‌ಗೆ ನಾನು ‘ನಾನು ಹಿಂದೆ ಹೋಗಿದ್ದೆ? ಏನೇ ಆದರು ಅವರು ಜೊತೆಯಲ್ಲೇ ಇರುತ್ತಾರೆ’ ಎಂದು ಹೇಳಿದರು. 

Throwback Thursday: Malaika Arora gushes about Arbaaz Khan: 'I imagine  myself getting old with him' - IBTimes India

1998ರಲ್ಲಿ ಅರ್ಬಾಜ್ ಜೊತೆ ಮಲೈಕಾ ಮದುವೆ

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದಿರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಮತ್ತೊಂದೆಡೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಬಾಜ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಕೇಳಿಕೊಂಡಿಲ್ಲ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ