ನವದೆಹಲಿ: ಫೇಸ್‌ಬುಕ್‌ನ ಒಡೆತನ ಹೊಂದಿರುವ ಮೆಟಾ ಕಂಪನಿಯ ಸ್ಥಾಪಕ ಹಾಗೂ ಸಿಇಒ ಆಗಿರುವ ಮಾರ್ಕ್ ಜುಕರ್ ಬರ್ಗ್ ( Mark Zuckerberg )ಒಂದು ವಾರದ ಹಿಂದಷ್ಟೇ ಮೆಟಾ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಶೆರಿಲ್ ಸ್ಯಾಂಡ್‌ಬರ್ಗ್( Sheryl Sandberg ) ಕೆಲಸವನ್ನು ಮೆಚ್ಚಿ ಒಳ್ಳೆಯ ರೀತಿಯಲ್ಲೇ ವಿದಾಯ ಹೇಳಿದ್ದರು
ಆದರೆ ಇದೀಗ ಕಂಪನಿಯ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಮೆಟಾ ಲಾಯರ್‌ಗಳು ಶೆರಿಲ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಸಲುವಾಗಿ ಈಗಾಗಲೇ ಕಂಪನಿಯ ಹಲವಾರು ಉದ್ಯೋಗಿಗಳ ವಿಚಾರಣೆ ನಡೆಸಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಶೆರಿಲ್‌ಗೆ ಸೇರಿದ ಲೀನ್ ಇನ್ ಫೌಂಡೇಷನ್‌ನಲ್ಲಿ ಮತ್ತು ಆಕೆಯ ಪುಸ್ತಕ ‘ಆಪ್ಪನ್ ಬಿ: ಫೇಸಿಂಗ್ ಅಡ್ವರ್ಸಿಟಿ, ಬಿಲ್ಡಿಂಗ್ ರೆಸಿಲಿಯೆನ್ಸ್ ಆಯಂಡ್ ಫೈಂಡಿಂಗ್ ಜಾಯ್’ ಪ್ರಮೋಷನ್‌ನಲ್ಲಿ ಫೇಸ್‌ಬುಕ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಪೂರಕ ಎಂಬಂತೆ ಆಪ್ಪನ್ ಬಿನಲ್ಲಿ ಫೇಸ್‌ಬುಕ್‌ನ ಹಲವಾರು ಉದ್ಯೋಗಿಗಳನ್ನು ಉಲ್ಲೇಖಿಸಲಾಗಿದೆ.
ಶೆರಿಲ್ ತನ್ನ ಹಳೆಯ ಪಾಲುದಾರ ಆಯಕ್ಟಿವಿಷನ್ ಸಿಇಒ ಬಾಬಿ ಕೊಟಿಕ್ ವಿರುದ್ಧದ ನಕಾರಾತ್ಮಕ ಸುದ್ದಿಗಳನ್ನು ಇಲ್ಲವಾಗಿಸಲು ಫೇಸ್‌ಬುಕ್ ಮೀಡಿಯಾ ಟೀಮ್ ಬಳಸಿಕೊಂಡಿದ್ದರು ಎಂಬ ಆರೋಪವೂ ಇದೆ. ಮಾತ್ರವಲ್ಲ ಇನ್ನೂ ಕೆಲವು ವೈಯಕ್ತಿಕ ವಿಷಯಗಳಿಗೆ ಕಂಪನಿಯ ಸಂಪನ್ಮೂಲವನ್ನು ಶೆರಿಲ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಶೆರಿಲ್ 14 ವರ್ಷಗಳಿಂದ ಜತೆಗಿದ್ದು, ಇದೀಗ ಬೇರೆಯಾಗುತ್ತಿದ್ದಾರೆ ಎಂದು ಜೂ. 2ರಂದು ಸುದೀರ್ಘ ಪೋಸ್ಟ್ ಮಾಡುವ ಮೂಲಕ ಮಾರ್ಕ್ ಜುಕರ್‌ಬರ್ಗ್ ವಿದಾಯ ಹೇಳಿದ್ದರು. ಫೇಸ್‌ಬುಕ್‌ಅನ್ನು ಸ್ಥಾಪಿಸಿ ಬೆಳೆಸುವುದರಲ್ಲಿ ಶೆರಿಲ್ ಪಾತ್ರ ಪ್ರಮುಖವಾಗಿತ್ತು. ಇದೀಗ ಆಕೆ ಕಂಪನಿ ತೊರೆಯಲಿರುವಂತೆ ಆರೋಪಗಳು ಕೇಳಿಬಂದಿರುವುದಷ್ಟೇ ಅಲ್ಲದೆ, ತನಿಖೆಯೂ ಆರಂಭವಾಗಿರುವುದು ಅಚ್ಚರಿ ಮೂಡಿಸಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist