ಮೆಕ್ಸಿಕೋ : ವಿಶ್ವ ದಾಖಲೆ ನಿರ್ಮಿಸಲು ಹಿಮಾದ ಮೇಲೆ ವಾಸ ಮಾಡುತ್ತಿರುವ ಮಹಿಳೆ
ನಮ್ಮಲ್ಲಿ ಅನೇಕ ಪ್ರತಿಭೆ ಅದೆಷ್ಟೂ ಸಾಹಸಗಳನ್ನು ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ, ಭಾರತದ ಅನೇಕ ಯುವ ಶಕ್ತಿಗಳು ಇಂತಹ ಸಾಹಸದಲ್ಲಿ ತಮ್ಮನ್ನು ತೋಡಗಿಸಿಕೊಂಡಿರುವುದನ್ನು ಈಗಾಗಲೇ ನೋಡಿದ್ದೇವೆ. ಇಂತಹ ಅದೆಷ್ಟೊ ಸಹಾಸ ಪ್ರತಿಭೆಗಳಲ್ಲಿ ಹಿಮಾ ಪರ್ವತದ ಮೇಲೆ ಒಂದು ತಿಂಗಳು ವಾಸಿಸುವ ಮೂಲಕ ದಾಖಲೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಪೆರ್ಲಾ ಟಿಜೆರಿನಾ ಕೂಡ ಒಬ್ಬರು. ಇವರು ತಮ್ಮ 31 ವರ್ಷ ವಯಸ್ಸಿನಲ್ಲಿ ಮೆಕ್ಸಿಕೋದ ಅತಿ ಎತ್ತರದ ಪರ್ವತ ಮತ್ತು ಸ್ಟ್ರಾಟೊವೊಲ್ಕಾನೊವಾದ ಪಿಕೊ ಡಿ ಒರಿಜಾಬಾದಲ್ಲಿ ವಾಸಿಸುತ್ತಿದ್ದಾರೆ. ದಿ ಇಂಡಿಪೆಂಡೆಂಟ್ ಪ್ರಕಾರ ಪೆರ್ಲಾ ಟಿಜೆರಿನಾ ತಮ್ಮ ದಾಖಲೆಯ ಮೂಲಕ ಯುವ ಸಾಧಕರಿಗೆ ಹಾಗೂ ಸಾಧಿಸುವ ಹಾದಿಯಲ್ಲಿರುವ ಮಹಿಳೆಯರಿಗೆ ಪ್ರೇರೆಪಿತ ಮಾತುಗಳನ್ನು ಹೇಳಿದ್ದಾರೆ. “ಪ್ರಯತ್ನವನ್ನು ಮುಂದುವರಿಸಲು, ಈ ಪ್ರಯತ್ನದಲ್ಲಿ ನಿರಂತರವಾಗಿರಲು ಮತ್ತು ಯಾವುದೇ ಅಡೆತಡೆಗಳ ಹೊರತಾಗಿಯೂ ಬಿಟ್ಟುಕೊಡದಿರಲು ಪ್ರೋತ್ಸಾಹಿಸುವ ಪ್ರೇರಣೆಯನ್ನು ಹುಡುಕುತ್ತಿರುವ ಎಲ್ಲ ಮಹಿಳೆಯರಿಗೆ ನಾನು ಸ್ಫೂರ್ತಿಯಾಗಲು ಬಯಸುತ್ತೇನೆ” ಎಂದು ಅವರು ಹೇಳಿದರು.
https://www.instagram.com/reel/Cp5_yM5jS_c/?utm_source=ig_embed&ig_rid=8fefb092-f68b-435b-98ea-c5dcf1b01093
ನಾನು ಎಂದಿಗೂ ಒಂಟಿಯಲ್ಲ, ನನ್ನ ಬಳಿ ಓದಲು ಹಲವಾರು ಪುಸ್ತಕಗಳಿವೆ ಮತ್ತು ನಾನು ಯೋಗ ಧ್ಯಾನ ಮಾಡುತ್ತೇವೆ. ನನ್ನನ್ನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ದೃಢವಾಗಿಡಲು ಬೈಬಲ್ ಓದುತ್ತೇನೆ ಎಂದು ಹೇಳಿದ್ದಾರೆ. ದಿ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಈ ಸಾಹಸ ಮಾಡುವ ಮುನ್ನ ಸರಿಯಾದ ವೈದ್ಯಕೀಯ ತಪಾಸಣೆಗೆ ಮಾಡಿಯೇ ಈ ಪ್ರಯಾಣ ಆರಂಭಿಸಿದ್ದಾರೆ.
ಸಮುದ್ರ ಮಟ್ಟದಿಂದ 18,620 ಅಡಿ ಎತ್ತರದಲ್ಲಿ ವಾಸಿಸುವ ಬಗ್ಗೆ ಟಿಜೆರಿನಾ ಅವರು Instagramನಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ನಾನು ನನ್ನ ಸಹಾಸದ ಬಗ್ಗೆ ಹಾಗು ಎಷ್ಟು ಮಾಸನಿಕವಾಗಿ ಸಮರ್ಥ ಎಂದು ತಿಳಿಸಲು ಈ ಕಾರ್ಯಮಾಡಬೇಕಿತ್ತು ಎಂದು ಅವರು NeedToKnow.online ಗೆ ತಿಳಿಸಿದ್ದಾರೆ. ಇದು ನನ್ನ ಜೀವನದ ದೊಡ್ಡ ಸವಾಲು, ನಾನು ಈಗ ಎತ್ತರ ಮಹಿಳೆ ಎಂದು ಹೇಳಿಕೊಂಡಿದ್ದಾರೆ.