ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೂಡುಬಿದಿರೆ: ಮೊಬೈಲ್ ವಿಚಾರ - 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Twitter
Facebook
LinkedIn
WhatsApp
rani abbakka 96225570 6

ಮೂಡುಬಿದಿರೆ,ಫೆ 21 : 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಕೇಳಿದಾಗ ತಾಯಿ ಮೊಬೈಲ್ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ಮೂಡುಬಿದಿರೆಯ ವಾಲ್ಪಾಡಿ ಗ್ರಾಮದ ನಾಗದಡ್ಕದಲ್ಲಿ ನಡೆದಿದೆ.

ಉಮೇಶ್ ಪೂಜಾರಿ ಎಂಬವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ. ಈಕೆ ಅಳಿಯೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಯುತಿಯ ತಂದೆ ಭಾನುವಾರ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೋಗಲು ಸಿದ್ಧರಾದರು. ಈ ವೇಳೆ ತಾಯಿಯೂ ಹಿರಿಯ ಮಗಳು ಯುತಿಯನ್ನೂ ತಮ್ಮೊಂದಿಗೆ ಬರುವಂತೆ ಕೇಳಿದಾಗ, ತನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದು ನಿರಾಕರಿಸಿದ್ದಳು. ಈ ವೇಳೆ ಯುತಿ ತಾಯಿ ಕೈಯಲ್ಲಿದ್ದ ಮೊಬೈಲ್ ತನಗೆ ಕೊಟ್ಟು ಹೋಗುವಂತೆ ಕೇಳಿದ್ದಳು. ಮೊಬೈಲ್ ಈಗ ಕೊಡುವುದಿಲ್ಲ. ಶಿರ್ತಾಡಿಯಿಂದ ಬಂದ ಮೇಲೆ ಮೊಬೈಲ್ ಕೊಡುತ್ತೇನೆ ಎಂದು ಯುತಿಯ ತಾಯಿ ಹೇಳಿ ಹೊರಟುಹೋಗಿದ್ದಾರೆ.

ಮದ್ಯಾಹ್ನ ವಾಪಾಸಾದಾಗ ಮಗಳು ಕಾಣದಿರುವುದನ್ನು ಕಂಡು ಹುಡುಕಾಟದ ನಂತರ ಸಂಜೆ 4 ಗಂಟೆಗೆ ಮನೆಯ ಬಾವಿಯಲ್ಲಿ ಯುತಿಯ ಮೃತದೇಹ ಪತ್ತೆಯಾಗಿದೆ.

ಯುತಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಳು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮವಾಗಿದ್ದಳು. ಮೂಡುಬಿದಿರೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ