ಮೂಡಬಿದಿರೆ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ
Twitter
Facebook
LinkedIn
WhatsApp

ಮೂಡಬಿದಿರೆ, ಫೆ 11 : ಮೂಡಬಿದಿರೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಮಹಮ್ಮದ್ ಅಕ್ಬರ್ ದಂಪತಿ ತಮ್ಮ ಎರಡೂವರೆ ವರ್ಷ ವಯಸ್ಸಿನ ಮಗುವನ್ನು ಇಂಜೆಕ್ಷನ್ ಗಾಗಿ ಕರೆತಂದಿದ್ದು, ಮಗು ತಂದೆ, ತಾಯಿಯ ಜೊತೆ ಆಸ್ಪತ್ರೆ ಆವರಣದಲ್ಲಿ ಕುರ್ಚಿಯಲ್ಲಿ ಕುಳಿತಿದ್ದು ಈ ವೇಳೆ ಆಸ್ಪತ್ರೆಯ ಸುತ್ತ ಮುತ್ತಾ ಓಡಾಡುತ್ತಿದ್ದ ನಾಯಿಯೊಂದು ಏಕಾಏಕಿ ಮಗುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಇನ್ನು ಮೂಡಬಿದಿರೆ ಆರೋಗ್ಯ ಕೇಂದ್ರಕ್ಕೆ ಇಂಜೆಕ್ಷನ್ ಪೂರೈಕೆ ಇಲ್ಲದ ಕಾರಣ ಮಗುವಿನ ಹೆತ್ತವರು ಖಾಸಗಿ ಆಸ್ಪತ್ರೆಯಿಂದ ಇಂಜೆಕ್ಷನ್ ತರಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ನೀಡಿದ್ದಾರೆ.