![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಹಿಂದೆ ಮುತ್ತಪ್ಪ ರೈ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಹೊರಟಿದ್ದರು. ಅದ್ಧೂರಿಯಾಗಿ ಮುಹೂರ್ತ ಕೂಡ ಆಗಿತ್ತು. ಆ ಸಿನಿಮಾ ‘ರೈ’ ಎಂದು ಹೆಸರಿಟ್ಟಿದ್ದರು. ತಮ್ಮ ಬಗೆಗಿನ ಸಿನಿಮಾದ ಬಗ್ಗೆ ಸ್ವತಃ ಮುತ್ತಪ್ಪ ರೈ ಕೂಡ ಕುತೂಹಲದಿಂದ ಎದುರು ನೋಡುತ್ತಿದ್ದರು. ಆದರೆ, ಆ ಸಿನಿಮಾ ಆಗಲೇ ಇಲ್ಲ.
ಬೆಂಗಳೂರಿನಲ್ಲೇ ‘ರೇ’ ಸಿನಿಮಾದ ಮುಹೂರ್ತ ನಡೆದಿತ್ತು. ಮುತ್ತಪ್ಪ ರೈ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕಾಣಿಸಿಕೊಳ್ಳುತ್ತಿದ್ದರು. ಮುತ್ತಪ್ಪ ರೈ ಜತೆಗಿನ ವಿವೇಕ್ ಓಬೆರಾಯ್ ಫೋಟೋ ಭಾರೀ ವೈರಲ್ ಕೂಡ ಆಗಿತ್ತು. ಆದರೆ, ಮುಹೂರ್ತದ ನಂತರ ಸಿನಿಮಾ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ
ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಅದೇ ಕಥೆಯನ್ನೇ ಬೇರೆ ಟೈಟಲ್ ನೊಂದಿಗೆ ತರಲಿದ್ದಾರೆ ಎನ್ನಲಾಗುತ್ತಿದೆ. ನೆನ್ನೆಯಷ್ಟೇ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಸಿನಿಮಾಗೆ ‘ಆರ್’ ಎಂದು ಹೆಸರಿಟ್ಟಿದ್ದಾರೆ. ಅದೊಂದು ಬೆಂಗಳೂರು ಭೂಗತ ಜಗತ್ತಿನ ಕಥೆ ಎಂದು ಹೇಳುವ ಮೂಲಕ ಮುತ್ತಪ್ಪ ರೈ ಬಗೆಗಿನ ಕಥೆಯೇ ಇದಾಗಿದೆ ಎಂದು ಕೆಲವು ಸೂಚನೆಗಳನ್ನೂ ಕೊಟ್ಟಿದ್ದಾರೆ. ಆದರೆ, ಅದು ಯಾರ ಕಥೆ ಎನ್ನುವುದನ್ನು ವರ್ಮಾ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ, ಇದು ರೈ ಸಿನಿಮಾದ ಕಥೆಯೇ ಇಲ್ಲಿ ಬಳಕೆ ಆಗಲಿದೆ ಎನ್ನಲಾಗುತ್ತಿದೆ
ರಾಮ್ ಗೋಪಾಲ್ ವರ್ಮಾ ಅವರು ಶೇರ್ ಮಾಡಿರುವ ‘ಆರ್’ ಸಿನಿಮಾದ ಒಂದೆರಡು ಗ್ಲಿಂಪ್‌ಗಳನ್ನು ಹಾಕಿದ್ದು, ಅದರಲ್ಲಿ ಉಪ್ಪಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವೀಡಿಯೋದಲ್ಲಿ, ಉಪೇಂದ್ರ ಚಾಕುವಿನಿಂದ ತನ್ನ ಬೆರಳುಗಳನ್ನು ಹುಜ್ಜುವುದು, ನಂತರ ಅದನ್ನು ಚುಂಬಿಸುವುದನ್ನು ಕಾಣಬಹುದು. ಈ ಗ್ಲಿಂಪ್‍ಗಳು ವಿಶಿಷ್ಟ ಶೈಲಿಯಲ್ಲಿವೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist