ಶುಕ್ರವಾರ, ಮೇ 10, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಿಯಾಝಾಕಿ ಎಂಬ ಈ ದುಬಾರಿ ಮಾವಿನ ಬೆಲೆ 1 ಕೆಜಿ ಗೆ ಬರೋಬ್ಬರಿ 2.5 ಲಕ್ಷ ರೂ! ಆಶ್ಚರ್ಯ ಆದರೂ ನಿಜ - ಇಲ್ಲಿದೆ ಸಂಪೂರ್ಣ ಮಾಹಿತಿ

Twitter
Facebook
LinkedIn
WhatsApp
Ravi Bopara 3 3

ಕೊಪ್ಪಳ: ಈಗ ಮಾವಿನ ಹಣ್ಣಿನ ಫಸಲು(Mango) ಸಮಯ. ಹಲವು ತಳಿಯ ರುಚಿಕರ ಮಾವಿನ ಹಣ್ಣು ತಿನ್ನುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಾರುಕಟ್ಟೆಯಲ್ಲಿ ಹಲವು ತಳಿಯ ಮಾವುಗಳಿಗೆ ಬೇರೆ ಬೇರೆ ದರವಿರುತ್ತದೆ. 

ಇದು ವಿಶ್ವದ ಅತ್ಯಂತ ದುಬಾರಿ ಮಾವು ಮಿಯಾಝಾಕಿ ಈಗ ಕೊಪ್ಪಳದ(Koppala) ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಹಣ್ಣಿನ ಬೆಲೆ ಎಂದು ಎಷ್ಟು ಬಲ್ಲಿರಾ ಬರೋಬ್ಬರಿ 40,000 ರೂಪಾಯಿಯಿಗಳು. ಅಂದರೆ ಕೆಜಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ. ಕೊಪ್ಪಳ ಜಿಲ್ಲೆಯಲ್ಲಿ ಅದರ ಕೃಷಿಯನ್ನು ಜನಪ್ರಿಯಗೊಳಿಸಲು ತೋಟಗಾರಿಕಾ ಇಲಾಖೆ ಯೋಜಿಸುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದಿಂದ ಒಂದು ಮಿಯಾಜಾಕಿ ಮಾವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ತಳಿಯನ್ನು ಜಪಾನ್ ನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

 

ಮೇ 23 ರಂದು ಉದ್ಘಾಟನೆಯಾದಾಗಿನಿಂದ ನೂರಾರು ರೈತರು ಮಿಯಾಜಾಕಿ ಮಾವಿನ ತಳಿಯನ್ನು ವೀಕ್ಷಿಸಲೆಂದೇ ಬರುತ್ತಿದ್ದಾರೆ. ಮೇ 31 ರವರೆಗೆ ಮೇಳ ಮುಂದುವರಿಯುತ್ತದೆ. ಅನೇಕ ರೈತರು ಈ ದುಬಾರಿ ಮಾವಿನ ಜೊತೆ ಸೆಲ್ಫಿ ಮತ್ತು ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಮೇಳ ಪ್ರಾರಂಭವಾದ ನಂತರ ಕೆಂಪು ಮಿಯಾಜಾಕಿಯ ಚಿತ್ರಗಳು ವೈರಲ್ ಆಗಿವೆ.

ಇತರ ಜನಪ್ರಿಯ ತಳಿಗಳಾದ ಕೊಪ್ಪಳ ಕೇಸರ್, ಬೆನ್ಶನ್, ದಶೇರಿ, ಸ್ವರ್ಣರೇಖಾ, ಅಲ್ಫೋನ್ಸೋ, ತೋತಾಪುರಿ, ರಸಪುರಿ, ಪುನರಿ ಮತ್ತು ಮಲ್ಲಿಕಾ ಪ್ರದರ್ಶನದಲ್ಲಿವೆ. ಈ ಮೇಳದಲ್ಲಿ ಒಟ್ಟು 51 ರೈತರು ಮಾವು ಮಾರಾಟ ಮಾಡಲು ಮಳಿಗೆಗಳನ್ನು ಹಾಕಿದ್ದಾರೆ.

ಮೇಳಕ್ಕೆ ಭೇಟಿ ನೀಡಿದ್ದ ಗದಗ ಜಿಲ್ಲೆಯ ಜ್ಯೂಸ್ ಅಂಗಡಿ ಮಾಲೀಕರಾದ ರಾಮಕೃಷ್ಣ ಬೇವಿನಕಟ್ಟಿ, ಒಂದು ಹಣ್ಣಿಗೆ 40 ಸಾವಿರ ರೂಪಾಯಿ ಬೆಲೆ ಇರುವ ಮಾವು ನೋಡುವುದೇ ಅದ್ಭುತ. ಮಿಯಾಜಾಕಿ ಪ್ರತಿ ಕೆಜಿಗೆ 2.50 ಲಕ್ಷ ರೂಪಾಯಿ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಮೇಳದ ನಂತರ ಈ ಮಾವನ್ನು ಯಾರು ತಿನ್ನುತ್ತಾರೆ ಎಂದು ನಾವು ಅಧಿಕಾರಿಯೊಬ್ಬರನ್ನು ಕೇಳಿದಾಗ, ಅವರು ತಮ್ಮ ಬಳಿ ಒಂದೇ ಒಂದು ಮಾವು ಇದೆ ಎಂದು ಹೇಳಿ ನಕ್ಕರು. 

ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ್, ಕೊಪ್ಪಳ ಜಿಲ್ಲೆಯಲ್ಲಿ ಮಿಯಾಜಾಕಿ ಕೃಷಿಯನ್ನು ಜನಪ್ರಿಯಗೊಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ರೈತರು ತಮ್ಮ ಜಮೀನಿನಲ್ಲಿ ಈ ತಳಿಯನ್ನು ಬೆಳೆಯಲು ಇಲಾಖೆ ಮಾರ್ಗದರ್ಶನ ನೀಡುತ್ತದೆ ಎಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ