ಶುಕ್ರವಾರ, ಮಾರ್ಚ್ 29, 2024
ಸುಮಲತಾರನ್ನು ಭೇಟಿಯಾದ ಬಿವೈ ವಿಜಯೇಂದ್ರ ; ಸುಮಲತಾ ನಿಲುವು ಬಗ್ಗೆ ಹೇಳಿದ್ದೇನು.?-ಬೆಳ್ತಂಗಡಿ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಓರ್ವ ಸಾವು - ಇಬ್ಬರು ಗಂಭೀರ.!-ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕವಲ್ಲ, ಮುಂದೆಯೂ ಇರಲಿದೆ; ಕುಮಾರಸ್ವಾಮಿ-ನೀತಿ ಸಂಹಿತೆ ಉಲ್ಲಂಘನೆ ಆರೋಪ ; ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ..!-ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣಕ್ಕೆ ಪವನ್ ಕಲ್ಯಾಣ್ ಸ್ಟಾರ್ ಪ್ರಚಾರಕ.?-ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

Twitter
Facebook
LinkedIn
WhatsApp
ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

ಬೆಲ್ಜಿಯನ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮಾರೊಕ್ಕೂ (Morocco) ವಿರುದ್ಧ ಬೆಲ್ಜಿಯಂ (Belgium) ಸೋತ ಬೆನ್ನಲ್ಲೇ ಬೆಲ್ಜಿಯನ್‍ನಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿದ್ದಾರೆ.

ಬೆಲ್ಜಿಯಂ ವಿರುದ್ಧ ಮಾರೊಕ್ಕೂ 2-0 ಅಂತರದಲ್ಲಿ ಗೆದ್ದ ಬೆನ್ನಲ್ಲೇ ಇತ್ತ ಬೆಲ್ಜಿಯಂ ರಾಜಧಾನಿ ಬೆಲ್ಜಿಯನ್‍ನಲ್ಲಿ ಫುಟ್‍ಬಾಲ್ ಅಭಿಮಾನಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಸ್ತೆಯಲ್ಲಿದ್ದ ಕಾರ್, ಬೈಕ್‍ಗಳಿಗೆ ಬೆಂಕಿ ಇಟ್ಟು ಮಾರೊಕ್ಕೂ ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಫುಟ್‍ಬಾಲ್ ಅಭಿಮಾನಿಗಳ ಕೋಪಕ್ಕೆ ಹಿಂಸಾಚಾರ ಹೆಚ್ಚುತ್ತಿದ್ದಂತೆ ಬೆಲ್ಜಿಯಂ ಪೊಲೀಸರು 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

ಹಿಂಸಾಚಾರಕ್ಕೆ ಇಳಿದ ಗುಂಪೊಂದು ರಾಷ್ಟ್ರೀಯ ಹೆದ್ದಾರಿಗಿಳಿದು ದಾಂಧಲೆಗೆ ಮುಂದಾಗಿದೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಪೊಲೀಸರು ಹಿಂಸಾಚಾರದ ಸ್ಥಳದಲ್ಲಿ ಟಿಯರ್ ಗ್ಯಾಸ್ ಹಾಗೂ ನೀರು ಸಿಂಪಡಿಸಿ ಜನರನ್ನು ಚದುರಿಸಿದ್ದಾರೆ. ಈಗಾಗಲೇ ಬೆಲ್ಜಿಯನ್‍ನಲ್ಲಿ ಹಲವು ನಿರ್ಬಂಧಗಳನ್ನು ಹೊರಡಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ