ಮಾಣಿ : ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಬೆಂಗಳೂರು ನಿವಾಸಿಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.ಬೆಂಗಳೂರು ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಮೃತರಾಗಿದ್ದಾರೆ. ಚಾಲಕ ಪ್ರಜ್ವಲ್ (22) ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಬರುತ್ತಿದ್ದ ಕಾರನ್ನು ಪ್ರಜ್ವಲ್ ಚಲಾಯಿಸಿದ್ದು, ಲಕ್ಷ್ಮಣ ಆಚಾರಿ ಅವರು ಪುತ್ರಿಯ ವಿವಾಹ ಆಮಂತ್ರಣ ನೀಡುವ ನಿಟ್ಟಿನಲ್ಲಿ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ.
ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನವರಿಗೆ ಮಾಣಿ ಜಂಕ್ಷನ್ ನಲ್ಲಿ ರಸ್ತೆ ತಪ್ಪಿ ಬೆಂಗಳೂರು ಮಾರ್ಗದಲ್ಲಿ ಮುಂದುವರಿದ್ದಾರೆ. ಈ ಸಮಯ ಬುಡೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಪ್ರೆಂಡ್ಸ್ ವಿಟ್ಲ ತಂಡ ವಾಹನವನ್ನು ಸ್ಥಳದಿಂದ ತೆರವು ಮಾಡಿ ಠಾಣೆಗೆ ತಲುಪಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist