ಮಂಗಳವಾರ, ಜುಲೈ 2, 2024
ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!-ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ T20 ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ!-ಬುಮ್ರ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್-ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ-ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!-ಉಜಿರೆ: ಭೀಕರ ರಸ್ತೆ ಅಪಘಾತ ; ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು..!-11-21% ಟಾರಿಪ್ ಹೆಚ್ಚಿಸಿದ ಏರ್ಟೆಲ್; ಜುಲೈ 3 ರಿಂದ ಯಾವ ಪ್ಲಾನ್ ಗೆ ಹೇಗಿದೆ ದರ.?-ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!-ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್; ಕಾಂಗ್ರೆಸ್ ಗಂಭೀರ ಆರೋಪ-ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ,13 ಮಂದಿ ದುರ್ಮರಣ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!

Twitter
Facebook
LinkedIn
WhatsApp
ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (veerappa moily) ಪುತ್ರಿ ಹಂಸ ಮೊಯ್ಲಿ (46) (Hamsa Moily) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ರಾಜಕೀಯದ ಕಾರ್ಯ ಹಿನ್ನೆಲ್ಲೆ  ಛತ್ತೀಸ್​ಗಢ್​ ಪ್ರವಾಸದಲ್ಲಿದ್ದ ವೀರಪ್ಪ ಮೊಯ್ಲಿ ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಬೆಂಗಳೂರಿಗೆ ವೀರಪ್ಪ ಆಗಮಿಸಿದ್ದರು. ನಾಳೆ ಬೆಳಗ್ಗೆ ಪುತ್ರಿಯ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ಪ್ರದರ್ಶನ ನೀಡಿದ್ದರು. ಜೊತೆಗೆ ನೃತ್ಯ ಸಂಯೋಜಕಿಯೂ ಆಗಿದ್ದರು. ಕೇವಲ ಭರತನಾಟ್ಯ ಕಲಾವಿದೆ ಅಲ್ಲದೆ ಸಿನಿಮಾನಿ ರಂಗದಲ್ಲೂ ಅವರು ಗುರುತಿಸಿಕೊಂಡಿದ್ದರು. ದೇವದಾಸಿಯರ ಜೀವನಾಧಾರಿತ ತಮಿಳು ಚಿತ್ರ ‘ಶೃಂಗಾರಂ’ನಲ್ಲಿ ಅವರು ಅಭಿನಯಿಸಿದ್ದಾರೆ.

ಹಂಸ ಮೊಯ್ಲಿ ಅವರು ಅನಾರೋಗ್ಯ ಹಿನ್ನೆಲೆ ಮನೆಯಲ್ಲಿ ವಿಶಾಂತ್ರಿ ಪಡೆಯುತ್ತಿದ್ದರು. ಆದರೆ ಬದಲಾದ ಹವಾಮಾನದಿಂದ ಏಕಾಏಕಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ವೀರಪ್ಪ ಮೊಯ್ಲಿ ಪುತ್ರಿ ನಿಧನಕ್ಕೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಸಮಾಜ ಸೇವಕಿ, ಭರತನಾಟ್ಯ ಕಲಾವಿದೆಯಾಗಿದ್ದ ಆಕೆಯ ಅಗಲಿಕೆ, ಹೆತ್ತವರಿಗೆ, ಕುಟುಂಬ ಸದಸ್ಯರಿಗೆ ಅದೆಷ್ಟು ನೋವನ್ನು ತಂದಿದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ದೇವರು ಅಗಲಿದ ಚೇತನಕ್ಕೆ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ​

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ