ಮಾಜಿ ಸಚಿವರಿದ್ದ ಕಾರು ಭೀಕರ ಅಪಘಾತ, ಬಾಬುರಾವ್ ಚಿಂಚನಸೂರ್‌ಗೆ ಗಾಯ!
Twitter
Facebook
LinkedIn
WhatsApp
ಕಲಬುರಗಿ: ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಕಾರು ಅಪಘಾತವಾಗಿದೆ. ರಾತ್ರಿ 12:30 ರ ಸುಮಾರಿಗೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ.
ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಾಲಕನಿಗೆ ರಸ್ತೆಯ ಮಧ್ಯೆ ಇರುವ ಗುಂಡಿ ಕಾಣದೆ ಕಾರು ಗುಂಡಿಯಲ್ಲಿ ಸಿಲುಕಿದೆ. ಇದರಿಂದ ಕಾರು ಪಟ್ಟಿಯಾಗಿದೆ. ಅಪಘಾತದಲ್ಲಿ ಚಾಲಕ ಮತ್ತು ಗನ್ಮ್ಯಾನ್ಗೆ ಯಾವುದೇ ಗಾಯಗಳು ಆಗಿಲ್ಲ.