ಬುಧವಾರ, ಏಪ್ರಿಲ್ 24, 2024
Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!-ಶುಕ್ರವಾರ ಮತದಾನದಂದು ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ನಿಷೇಧ..!-164.53 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಕೊಂಡ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್!-ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ; ಆಕ್ರೋಶದ ಬಳಿಕ ಮಾಲೀಕ ಅರೆಸ್ಟ್.!-ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ; ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ-ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಅಸಲಿ ಕಾರಣ ಬಯಲು.!-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾಂಡೌಸ್ ಚಂಡಮಾರುತ – ನೆರೆಯ ತಮಿಳುನಾಡು, ಆಂಧ್ರಕ್ಕೆ ಭಾರೀ ಮಳೆ ಎಚ್ಚರಿಕೆ

Twitter
Facebook
LinkedIn
WhatsApp
ಮಾಂಡೌಸ್ ಚಂಡಮಾರುತ – ನೆರೆಯ ತಮಿಳುನಾಡು, ಆಂಧ್ರಕ್ಕೆ ಭಾರೀ ಮಳೆ ಎಚ್ಚರಿಕೆ

ನವದೆಹಲಿ: ನೈಋತ್ಯ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಂಡೌಸ್ ಚಂಡಮಾರುತ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಲಿದ್ದು, ಡಿಸೆಂಬರ್ 7 ರಂದು ಇದರ ತೀವ್ರತೆ ಹೆಚ್ಚಾಗಲಿದೆ. ಡಿಸೆಂಬರ್ 8 ರಂದು ಉತ್ತರ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ತಲುಪಲಿದ್ದು, ನೈಋತ್ಯ ಬಂಗಾಳಕೊಲ್ಲಿ ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ 2 ದಿನಗಳ ಕಾಲ ಹಲವಾರು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ತಮಿಳುನಾಡಿನ ಕರಾವಳಿ ಭಾಗ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗ ಮತ್ತು ರಾಯಲಸೀಮಾದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

 

ಡಿಸೆಂಬರ್ 10ರ ವರೆಗೂ ಭಾರೀ ಮಳೆ ಮುಂದುವರಿಯಲಿದ್ದು, ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಗಾಳಿಯೂ ಬೀಸಲಿದೆ ಎಂದು ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ