ಶನಿವಾರ, ನವೆಂಬರ್ 23, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಹಾಲಕ್ಷ್ಮೀ ಕೊಲೆ ಪ್ರಕರಣ: ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ, ಕಣ್ಣೀರಿಟ್ಟ ಸಹೋದರಿ!

Twitter
Facebook
LinkedIn
WhatsApp
ಮಹಾಲಕ್ಷ್ಮೀ

ಬೆಂಗಳೂರು: ಒಂದು ವರ್ಷ ಆಯ್ತು ಅವಳನ್ನ (ಮಹಾಲಕ್ಷ್ಮೀ) ನೋಡಿ, ಕೊನೆಗೂ ಅವಳ ಬಳಿ ಮಾತಾಡೋಕು ಆಗಿಲ್ಲ. ನಿನ್ನೆ ಈ ರೀತಿ ಪೀಸ್‌ ಪೀಸ್‌ ಆದ ರೀತಿಯಲ್ಲಿ ನೋಡಿದೆ ಎಂದು ಕೊಲೆಯಾದ ಮಹಾಲಕ್ಷ್ಮಿಯ ಅಕ್ಕ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ತುಂಬಾ ಕ್ರೂರವಾಗಿ ಆಕೆಯನ್ನು ಸಾಯಿಸಿದ್ದಾರೆ. ಕೊಲೆಗೈದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವೈಯಾಲಿಕಾವಲ್‌ನಲ್ಲಿ 29 ವರ್ಷದ ಯುವತಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಆಕೆಯ ದೇಹವನ್ನು 59 ಪೀಸ್‌ಗಳನ್ನಾಗಿ ಮಾಡಿದ ಪ್ರಕರಣದಲ್ಲಿ ಒಂದೊಂದೇ ಅಪ್‌ಡೇಟ್‌ಗಳು ಹೊರಬರುತ್ತಿವೆ. ಮಹಾಲಕ್ಷ್ಮೀಯನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವ ಪ್ರಯತ್ನವನ್ನೂ ಮಾಡಿದ್ದ. ಆದರೆ, ಕೊನೆಯ ಕ್ಷಣದಲ್ಲಿ ತನ್ನ ಪ್ಲ್ಯಾನ್‌ ಬದಲಾಯಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಫ್ರಿಜ್‌ನ ಎದುರುಗಡೆ ಇರುವ ಸೂಟ್‌ಕೇಸ್‌. ಆಕೆಯ ತಾಯಿ ಮನೆಯ ಕೀ ತೆಗೆದು ಒಳಗೆ ಹೋಗುವ ವೇಳೆ ಅದನ್ನು ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಫ್ರಿಜ್‌ನ ಎದುರು ಖಾಲಿ ಸೂಟ್‌ಕೇಸ್‌ ಕಂಡಿದೆ.

ಮಹಾಲಕ್ಷ್ಮೀ ಸ್ನೇಹಿತ ಅಶ್ರಫ್‌ ಮೇಲೆ ನನಗೆ ಅನುಮಾನ ಇದೆ. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್‌ ವಿರುದ್ಧ ದೂರು ಕೊಟ್ಟಿದ್ದೆ. ಅಶ್ರಫ್ ಉತ್ತರಾಖಂಡ್ ಮೂಲದವನು. ಒಂದು ದಿನ ಮಹಾಲಕ್ಷ್ಮೀ ಮೊಬೈಲ್​ ಚೆಕ್ ಮಾಡಿದಾಗ ಅಶ್ರಫ್‌ ಜೊತೆ ಸಂಪರ್ಕದಲ್ಲಿರುವುದು ತಿಳಿಯಿತು ಎಂದು ಕೊಲೆಯಾದ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಹೇಳಿದ್ದಾರೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಶನಿವಾರ ಮನೆ ಮಾಲೀಕರು ಫೋನ್ ಮಾಡಿದ್ದರು. ಮನೆ ಬಳಿ ಬಂದು ನೋಡಿದಾಗ ಮಹಾಲಕ್ಷ್ಮೀ ಕೊಲೆಯಾಗಿದ್ದಳು. ಮಹಾಲಕ್ಷ್ಮೀ ಕುಟುಂಬದವರು ಮೂಲತಃ ನೇಪಾಳದವರು. ಮಹಾಲಕ್ಷ್ಮೀ ಕುಟುಂಬ 35 ವರ್ಷಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದಳು. ನಮ್ಮದು ಅರೇಂಜ್ಡ್‌ ಮ್ಯಾರೇಜ್‌. ನನ್ನ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. 9 ತಿಂಗಳ ಹಿಂದೆ ನನ್ನಿಂದ ಬೇರೆಯಾದಳು. ಮಗು ನನ್ನ ಬಳಿ ಇತ್ತು, ಮಗು ನೋಡಲು ತಿಂಗಳಿಗೊಮ್ಮೆ ಮಹಾಲಕ್ಷ್ಮೀ ಬರುತ್ತಿದ್ದಳು ಎಂದು ತಿಳಿಸಿದರು.

ನೆಲಮಂಗಲದಲ್ಲಿ ನಾನು ಮೊಬೈಲ್‌ ಶಾಪ್‌ ಇಟ್ಟುಕೊಂಡಿದ್ದೇನೆ. ಮೊಬೈಲ್‌ ಶಾಪ್‌ನಲ್ಲೇ ಮಗುವನ್ನು ನೋಡಿಕೊಂಡು ವಾಪಸ್‌ ಹೋಗುತ್ತಿದ್ದಳು. 25 ದಿನಗಳ ಹಿಂದೆ ಮೊಬೈಲ್‌ ಶಾಪ್‌ಗೆ ಬಂದು ಮಗುವನ್ನು ನೋಡಿ ಹೋಗಿದ್ದಳು. ಮಗು ನೋಡಲು ಬಂದಾಗ ನನ್ನ ಜೊತೆ ಕೋಪದಲ್ಲೇ ಮಾತನಾಡುತ್ತಿದ್ದಳು ಎಂದು ಹೇಳಿದರು.

ಯಾರು ಕೊಲೆ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅವರಿಗೆ ಶಿಕ್ಷೆ ಆಗಬೇಕು. ಪ್ರೀಜರ್​ನಲ್ಲಿ ದೇಹವನ್ನು ತುಂಡು ತುಂಡು ಮಾಡಿ ಇಟ್ಟಿದ್ದರು. ಅಕ್ಕ-ನಾನು ಭೇಟಿಯಾಗಿ ಒಂದು ವರ್ಷ ಆಗಿತ್ತು. ಅಕ್ಕ ಪತಿಯಿಂದ ಬೇರೆಯಾಗಿದ್ದಳು. ಕೊಲೆ ಯಾರು ಮಾಡಿದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಕೊಲೆಯಾದ ಮಹಾಲಕ್ಷ್ಮೀ ತಂಗಿ ಒತ್ತಾಯಿಸಿದ್ದಾರೆ.

ನಾನು ನೆಲಮಂಗಲದಲ್ಲಿ ವಾಸವಿದ್ದೇನೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಇದೆ ಅಂತ ಮನೆ ಮಾಲೀಕರು ಕಾಲ್ ಮಾಡಿ ಹೇಳಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂದು ಬೀಗ ತೆಗೆದು ನೋಡಿದಾಗ, ಮಗಳ ಹೆಣ ಫ್ರೀಜರ್​ನಲ್ಲಿ ಇತ್ತು. ಕೊನೆಯದಾಗಿ ರಾಖಿ ಹಬ್ಬದ ದಿನದಂದು ಮಗಳನ್ನು ಭೇಟಿ ಆಗಿದ್ದೆ ಎಂದು ಕೊಲೆಯಾದ ಮಹಾಲಕ್ಷ್ಮೀ ತಾಯಿ ಮೀನಾ ರಾಣಾ ಭಾವುಕರಾದರು.

ಮಹಾಲಕ್ಷ್ಮಿ ದೇಹವನ್ನ ತುಂಡಾಗಿಸಿ ಹೊರಗಡೆ ಸಾಗಿಸೋದು ಆರೋಪಿಯ ಪ್ಲಾನ್ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಫ್ರಿಡ್ಜ್ ಮುಂದೆಯೇ ಕೊಲೆಗಡುಕ ಸೂಟ್ ಕೇಸ್ ಇಟ್ಟಿದ್ದ ದೇಹ ತುಂಡಾಗಿಸಿ ಸೂಟ್ ಕೇಸ್ ನಲ್ಲಿ ಸಾಗಿಸೋದು ಆರೋಪಿಯ ಪ್ಲಾನ್ ಆಗಿದ್ದಿರಬಹುದು ಎಂದು ಪೊಲೀಸರೂ ಅಂದಾಜು ಮಾಡಿದ್ದಾರೆ.

ಕಪ್ಪು ಬಣ್ಣದ ಸೂಟ್ ಕೇಸ್ ನಲ್ಲಿ ಮೃತದೇಹ ಸಾಗಿಸೋ ಆರೋಪಿಯ ಪ್ಲಾನ್ ಆಗಿತ್ತು. ಅದಲ್ಲದೆ, ಕೊಲೆ ಮಾಡಿ ಮನೆ ಪೂರ್ತಿ ಕ್ಲೀನ್‌ ಮಾಡಿದ್ದ. ರಕ್ತವನ್ನು ಟಾಯ್ಲೆಟ್‌ನಲ್ಲಿ ಹಾಕಿದ್ದಿರಬಹುದು ಎನ್ನಲಾಗಿದೆ. ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕಟ್ ಮಾಡಿದ್ದರೂ, ಮನೆಯಲ್ಲಿ ರಕ್ತ ಚೆಲ್ಲಿರಲಿಲ್ಲ. ಚೆಲ್ಲಿದ್ದ ರಕ್ತವನ್ನ ಆರೋಪಿ ಬಟ್ಟೆಯಿಂದ ಒರೆಸಿ ಹೋಗಿದ್ದಾರೆ. ಒರೆಸಿರುವ ಬಟ್ಟೆಯನ್ನೂ ಆರೋಪಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಹಾಗಾದಲ್ಲಿ ಆರೋಪಿ ಪ್ಲಾನ್ ಏನಾಗಿತ್ತು ಅನ್ನೋದೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತಿಯಿಂದ ಒಂಬತ್ತು ತಿಂಗಳ ಹಿಂದೆಯೇ ಪ್ರತ್ಯೇಕವಾಗಿದ್ದ ಮಹಾಲಕ್ಷ್ಮೀ, ನಂತರ ವೈಯಾಲಿಕಾವಲ್ ಸಮೀಪ ಪ್ರತಿಷ್ಠಿತ ಮಾರಾಟ ಮಳಿಗೆಯಲ್ಲಿ ಸೇಲ್ಸ್ ಗರ್ಲ್ಸ್‌ ಆಗಿದ್ದಳು. ಆ ವೇಳೆ ಆಕೆಗೆ ಯುವಕನ ಜತೆ ಸ್ನೇಹ ಬೆಳೆದಿತ್ತು. ಈ ಸ್ನೇಹದಲ್ಲಿ ಮೂಡಿದ ಮನಸ್ತಾಪವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ತನ್ನ ಪತಿಯಿಂದ ದೂರವಾಗಿದ್ದ ಕಾರಣಕ್ಕೆ ಮಹಾಲಕ್ಷ್ಮೀ ಜತೆ ಆಕೆಯ ಪೋಷಕರು ಸಹ ಮುನಿಸಿಕೊಂಡಿದ್ದರು. ಹೀಗಾಗಿ ವೈಯಾಲಿಕಾವಲ್‌ನಲ್ಲಿ ಆಕೆ ಏಕಾಂಗಿಯಾಗಿ ನೆಲೆಸಿದ್ದಳು. ತನ್ನ ಸಹೋದ್ಯೋಗಿಗಳ ಜತೆ ಖುಷಿಯಿಂದಲೇ ಇದ್ದ ಆಕೆ, ತನ್ನ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಸೆ.12ರಂದು ಆಕೆಯ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ. ಅಂದು ಆಕೆಯ ಮನೆಗೆ ಬಂದಿರುವ ಪರಿಚಿತನಿಂದಲೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಮಹಾಲಕ್ಷ್ಮೀ ಮೃತದೇಹವನ್ನು 30ಕ್ಕೂ ಹೆಚ್ಚುಬಾರಿ ತುಂಡಾಗಿಸಿ ಫ್ರಿಜ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದ. ಈ ಮೃತದೇಹದ ಭಾಗಗಳನ್ನು ಆಯ್ದು ಬಳಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದರು. ಚೀಲದಲ್ಲಿ ತುಂಬಿದ್ದ ದೇಹದ ಬಿಡಿ ಭಾಗಗಳನ್ನು ಮರು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ಸವಾಲಾಗಿತ್ತು ಎಂದು ತಿಳಿದು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಈ ವೇಳೆ ಮೃತಳ ಕುಟುಂಬದವರು ಆಕ್ರಂದನ ಮುಗಿಲು ಮುಟ್ಟಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ