ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಲೆನಾಡು ಭಾಗದಲ್ಲಿರುವ ಟಾಪ್ 5 ಪ್ರಸಿದ್ಧ ಪ್ರವಾಸಿ ಶಿಖರಗಳು

Twitter
Facebook
LinkedIn
WhatsApp
WhatsApp Image 2023 04 06 at 8.38.24 AM

ಮುಳ್ಳಯ್ಯನಗಿರಿ ಶಿಖರ 

ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು ಮತ್ತು ದಕ್ಷಿಣ ಕರ್ನಾಟಕದ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.ಸುಲಭ ಪ್ರವೇಶ: ಹೆಚ್ಚುಚಾರಣದ ಅಗತ್ಯವಿಲ್ಲದೆ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವನ್ನು ತಲುಪಲು ವಾಹನ ನಿಲುಗಡೆ ಸ್ಥಳದಿಂದ 500 ಮೆಟ್ಟಿಲುಗಳನ್ನು ಒಳಗೊಂಡ ಸಣ್ಣ ಚಾರಣವಷ್ಟೇ ಸಾಕಾಗಿದೆ.ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇತರ ಆಕರ್ಷಣೆಗಳಾಗಿವೆ.ಸರ್ವಋತು ಪ್ರವಾಸಿ ಕೇಂದ್ರ: ಮುಳ್ಳಯ್ಯನಗಿರಿ ಶಿಖರವನ್ನು ವರ್ಷಪೂರ್ತಿ ಭೇಟಿ ಮಾಡಬಹುದು.

ಬಾಬಾ ಬುಡನ್‌ಗಿರಿ

‌‌ಬಾಬಾ ಬುಡನ್‌ಗಿರಿಯು ಕರ್ನಾಟಕದ ಚಿಕ್ಕಮಂಗಳೂರಿನಲ್ಲಿದೆ. ಬಾಬಾ ಬುಡನ್‌ಗಿರಿ ಚಿಕ್ಕಮಂಗಳೂರಿನ ಬಾಬಾ ಬುಡನ್ ಶ್ರೇಣಿಯಲ್ಲಿರುವ ಪರ್ವತವಾಗಿದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನಲ್ಲಿರುವ ಬಾಬಾ ಬುಡನ್‌ಗಿರಿಯು ಸೂಫಿ ಸಂತ ಹಜರತ್ ದಾದಾ ಹಯಾತ್ ಖಲಂದರ್ ಅವರ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಬಾಬಾ ಬುಡನ್‌ಗಿರಿ ಶ್ರೇಣಿಯ ಅತ್ಯಂತ ಎತ್ತರದ 1930 ಮೀ 6317 ಅಡಿ ಎತ್ತರವಿರುವ ಇದು ಹಿಮಾಲಯ ಮತ್ತು ನೀಲಗಿರಿಗಳ ನಡುವಿನ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿ ನಡುವೆ ಪ್ರಸಿದ್ಧವಾದ ಚಾರಣ ಮಾರ್ಗವಿದೆ.ಬಾಬಾ ಬುಡನ್ ಗಿರಿ ಬೆಟ್ಟಗಳ ಮೇಲೆ ಮೂರು ಗುಹೆಗಳಿವೆ ಅವುಗಳು ಮೂರು ಸಿದ್ಧರಿಂದ ಪವಿತ್ರವಾಗಲು ಭಾರತದ ಪಶ್ಚಿಮ ಘಟ್ಟಗಳ ಸುಂದರ ನೋಟ ಎಂದು ಹೇಳಲಾಗುತ್ತದೆ .

ಮಾಂದಲಪಟ್ಟಿ(ಮಡಿಕೇರಿ)

4050 ಅಡಿ ಎತ್ತರದಲ್ಲಿರುವ ಮಾಂದಲಪಟ್ಟಿ ಮಡಿಕೇರಿಯ ಪ್ರಸಿದ್ಧ ಬೆಟ್ಟವಾಗಿದೆ. ಹಚ್ಚ ಹಸಿರಿನ, ಪ್ರಶಾಂತ ಸ್ಥಳವಾಗಿರುವ ಮಾಂದಲಪಟ್ಟಿ ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡುವ ಪ್ರವಾಸಿಗರಿಂದ ಅಪಾರ ಮೆಚ್ಚುಗೆಯನ್ನು ಪಡೆದಿದೆ. ಈ ಪ್ರದೇಶವು ಶಾಂತಿ ಮತ್ತು ಏಕಾಂತವನ್ನು ನೀಡುವುದರಿಂದ, ಹತ್ತಿರದ ಹಳ್ಳಿಗಳ ನಿವಾಸಿಗಳು ಸಾಮಾನ್ಯವಾಗಿ ತಮ್ಮ ವಾರಾಂತ್ಯವನ್ನು ಇಲ್ಲಿ ಯೋಜಿಸುತ್ತಾರೆ. ನಿಸರ್ಗ ಪ್ರೇಮಿಗಳು ಈ ಸ್ಥಳದ ಭವ್ಯವಾದ ಸೌಂದರ್ಯವನ್ನು ಖಂಡಿತವಾಗಿ ಪ್ರೀತಿಸುತ್ತಾರೆ! ಮಾಂದಲಪಟ್ಟಿ ಪುಷ್ಪಗಿರಿ ಅರಣ್ಯದ ನೈಸರ್ಗಿಕ ಮೀಸಲು ಭಾಗವಾಗಿದೆ. ಸ್ಥಳೀಯವಾಗಿ, ಜನರು ಈ ಭೂಮಿಯನ್ನು ಮುಗಿಲು-ಪೇಟೆ ಅಥವಾ ಮುಗಿಲು-ಪೇಟ್ ಎಂದು ಕರೆಯುತ್ತಾರೆ. ಎರಡೂ ಸ್ಥಳೀಯ ಹೆಸರುಗಳ ಅಕ್ಷರಶಃ ಅರ್ಥವು ಮೋಡ ಅಥವಾ ಮಂಜಿನ ಮಾರುಕಟ್ಟೆ ಎಂದರ್ಥ.

ದೇವರಮನೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿರುವ ದೇವರಮನೆ ಚಾರಣಿಗರನ್ನು ಆಕರ್ಷಿಸುವ ಸುಂದರ ತಾಣವಾಗಿದೆ. ಮೈ ಕೊರೈಸುವ ಚಳಿ, ಜೋರಾಗಿ ಬೀಸುವ ಗಾಳಿ, ಹಾಲಿನ ಬಣ್ಣದಂತಿರುವ ಮಂಜು ಭೂ ಲೋಕದಲ್ಲಿ ಸ್ವರ್ಗದ ಅನುಭವವನ್ನು ನೀಡುತ್ತದೆ.ಕರ್ನಾಟಕದ ಚಿಕ್ಕಮಗಳೂರು ಪ್ರದೇಶವು ಹಚ್ಚ ಹಸಿರ ಬನದಿಂದ ಕೂಡಿದ್ದು ಕಾಫಿನಾಡು ಎಂದೇ ಪ್ರಸಿದ್ಧವಾಗಿದೆ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಅಲ್ಲದೆ ದೂರದೂರಿನ ಚಾರಣಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಅತ್ಯಂತ ಅದ್ಭುತವಾದ ಚಾರಣ ಸ್ಥಳಗಳಲ್ಲಿ ಒಂದು ದೇವರ ಮನೆ ಬೆಟ್ಟಸುಂದರವಾದ ಪರಿಸರ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ದೇವರಮನೆ ಮೂಡಿಗೆರೆಯಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇದು ಅತ್ಯಂತ ಅದ್ಭುತವಾದ ಕೆಲವು ಚಾರಣದ ಹಾದಿಗಳಿಗೆ ನೆಲೆಯಾಗಿದೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಇಲ್ಲಿ ಬೆಟ್ಟಗುಡ್ಡಗಳಲ್ಲಿ ಚಾರಣ ಹೋಗುವುದೆಂದರೆ ಅದು ರೋಮಾಂಚಕ ಅನುಭವ.ದೇವರಮನೆ ಟ್ರೆಕ್ ಪ್ರಕೃತಿ ಸೌಂದರ್ಯದ ನಡುವೆ ಅದರ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಚಾರಣಿಗರು ಶಿಖರಗಳನ್ನು ಏರುತ್ತಾ, ಹುಲ್ಲುಗಾವಲುಗಳಲ್ಲಿ ಅಡ್ಡಾಡುತ್ತಾರೆ, ಮತ್ತು ತಣ್ಣನೆಯ ಗಾಳಿಯ ಅನುಭವವನ್ನು ಇಲ್ಲಿ ಪಡೆಯುತ್ತಾರೆ.

ಎತ್ತಿನಭುಜ

ಕಾಫಿನಾಡು ಚಿಕ್ಕಮಗಳೂರು, ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ. ನೋಡುಗರು-ಕೇಳುಗರ ಭಾವನೆಗಳಿಗೆಲ್ಲ ಜೀವ ತುಂಬೋ ಜೀವ ವೈವಿಧ್ಯಮಯದ ತಾಣ. ಭೂಲೋಕದ ಸ್ವರ್ಗವೆನಿಸಿರುವ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಂದರ ತಾಣಗಳ ಪೈಕಿ ಮೂಡಿಗೆರೆ ತಾಲೂಕಿನ ಬೈರಾಪುರದ ಬಳಿ ಇರೋ ಶಿಶಿಲ ಗುಡ್ಡ ಕೂಡ ಒಂದು. ಇದನ್ನು ಎತ್ತಿನಭುಜ ಅಂತಲೂ ಕರೆಯುತ್ತಾರೆ. ಕಾರಣ, ದೂರದಿಂದ ನೋಡಿದರೆ ಈ ರಮಣೀಯ ತಾಣ ಎತ್ತಿನ ಭುಜದ ರೀತಿ ಕಾಣಿಸುತ್ತದೆ. ಇಲ್ಲಿನ ಮನಮೋಹಕ ಗುಡ್ಡಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅಷ್ಟೆ ಅಲ್ಲದೆ, ಈ ಬೆಟ್ಟ ಏರುವ ಸವಾಲಿದೆಯಲ್ಲ ಅದು ನಿಜಕ್ಕೂ ರೋಮಾಂಚನಕಾರಿ.ಬೈರಾಪುರ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರೋ ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕು. ಅದು ಕೂಡ ಕಡಿದಾದ ರಸ್ತೆಯಲ್ಲಿ ಕಲ್ಲು ಮಣ್ಣು ಎನ್ನದೇ ಗುಡ್ಡವನ್ನು ಹತ್ತುತ್ತ ಸಾಗಬೇಕು. ಹೀಗೆ ಬೆಟ್ಟ ಹತ್ತುವ ಸಾಹಸಕ್ಕೆ ಬಿದ್ದಾಗ ಸಾಕು, ಸಾಕು ಎಂಬ ಸೋಲು ನಮ್ಮನ್ನ ಮುಂದೆ ಗುಡ್ಡವನ್ನು ಏರದಂತೆ ತಡೆಯುತ್ತದೆ. ಆದರೆ ಮುಂದೆ ನಡೆಯದಂತೆ ತಡೆಯೋ ಸುಸ್ತು, ಸೋಲನ್ನು ಹಿಮ್ಮೆಟ್ಟಿಸಿ ಹೆಜ್ಜೆ ಹಾಕಿ, ಬೆಟ್ಟ ಏರಿದರೆ ಸಿಗೋದು ನಿಜಕ್ಕೂ ಸ್ವರ್ಗ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist