ಮನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ ಕೊಡಗು; ಈ ಪ್ರವಾಸದ ಸಂದರ್ಭದಲ್ಲಿ ಈ ಸ್ಥಳಗಳನ್ನು ಮಿಸ್ ಮಾಡಬೇಡಿ!
ಮಡಿಕೇರಿ: ಮಾನ್ಸೂನ್ ಪ್ರವಾಸ ಆರಂಭವಾಗಿದೆ. ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ ಕೊಡಗು. ಆದರೆ ಕೊಡಗಿನ ಮಾನ್ಸೂನ್ ಪ್ರವಾಸದ ಪ್ರಮುಖ ಸ್ಥಳಗಳು ಈ ರೀತಿ ಇವೆ.
1. ಕರಿಕೆಯ ಜಲಪಾತಗಳು:
30ಕ್ಕೂ ಅಧಿಕ ಜಲಪಾತಗಳನ್ನು ಹೊಂದಿರುವ ಭಾರತದ ಗ್ರಾಮವೇ ಕರಿಕೆ. ನೀವು ಕರಿಕೆಯಲ್ಲಿ 30ಕ್ಕೂ ಅಧಿಕ ಜಲಪಾತಗಳನ್ನು ವೀಕ್ಷಿಸಬಹುದಾಗಿದೆ.
2. ರಾಣಿಪುರ0:
ಕೊಡಗಿನ ಪಕ್ಕದಲ್ಲಿ ರಾಣಿಪುರಂ ಇದೆ. ಇದು ಕರಿಕೆಗೆ ಹೊಂದಿಕೊಂಡಿದೆ. ಅದ್ಭುತ ಸೌಂದರ್ಯದ ಸ್ಥಳವಾಗಿದೆ ಇದು.
3. ಭಾಗಮಂಡಲ :
ಬಗಂಡೇಶ್ವರ ನಡೆಸಿರುವ ಪ್ರಮುಖ ಸ್ಥಳವೂ ಭಾಗಮಂಡಲ. ಆದರೆ ಭಾಗಮಂಡಲದ ಸೌಂದರ್ಯ ನಿಮ್ಮನ್ನು ಆಕರ್ಷಿಸುತ್ತದೆ.
4. ಕಕ್ಕಬೆ:
ವಿರಾಜಪೇಟೆಗೆ ಹತ್ತಿರದಲ್ಲಿರುವ ಬಹು ಆಕರ್ಷಣೀಯ ಸ್ಥಳವಾಗಿದೆ ಕಕ್ಕಬೆ. ಇಲ್ಲಿರುವ ಜಲಪಾತ ನಿಮ್ಮನ್ನು ಬಹುವಾಗಿ ಆಕರ್ಷಿಸುತ್ತದೆ.
5. ಮಡಿಕೇರಿ ಕೋಟೆ:
ಮಡಿಕೇರಿಯ ಮಧ್ಯಭಾಗದಲ್ಲಿ 19ನೇ ಶತಮಾನದ ಒಂದು ಕೋಟೆಯಿದ್ದು, ಕೋಟೆಯಲ್ಲಿ ಒಂದು ಮಂದಿರ ಮತ್ತು ಕಾರಾಗೃಹವಿದೆ. ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಇಲ್ಲಿ ಸಣ್ಣ ಮ್ಯೂಸಿಯಂ ನಿರ್ಮಿಸಿದ್ದು, ಈಗ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಚರಿಸುತ್ತಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್ ಎಂಬುವವರು ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲ್ಭಾಗದಿಂದ ನೋಡಿದರೆ ಮಡಿಕೇರಿ ಸೌಂದರ್ಯ ಗೋಚರವಾಗುತ್ತದೆ.
6. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಮಡಿಕೆರಿಯಲ್ಲಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರೂಪದ ವನ್ಯಜೀವಿಗಳನ್ನು ಹೊಂದಿದೆ. ರಾಜೀವ್ ಗಾಂಧಿ ಪಾರ್ಕ್ ಎಂದೂ ಕರೆಯಲ್ಪಡುವ ಈ ಸ್ಥಳವು ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ. ವಿವಿಧ ರೀತಿಯ ಪ್ರಾಣಿಗಳು ಮತ್ತು 270 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ನಿಂತಿದೆ. ರಾಷ್ಟ್ರೀಯ ಉದ್ಯಾನವು ಮೂಲಭೂತವಾಗಿ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಅದಾಗ್ಯೂ, ಆನೆ, ಜಿಂಕೆಗಳಂತಹ ಇತರ ಪ್ರಾಣಿಗಳು ನಾಗರಹೊಳೆ ಉದ್ಯಾನವನದಲ್ಲಿದೆ. ಇನ್ನು ಉದ್ಯಾನವನದ ಆವರಣದೊಳಗೆ ಇರುವ ಲಾಡ್ಜ್‌ಗಳು ಕೂಡ ಪ್ರವಾಸಿಗರಿಗೆ ಪೂರಕವಾಗಿದೆ.
7. ಬ್ರಹ್ಮಗಿರಿ ಶಿಖರ
ಈ ಶಿಖರವು ಒಂದು ಸುಂದರವಾದ ಸ್ಥಳವಾಗಿದ್ದು, ಇದು ಅತ್ಯಂತ ಅದ್ಭುತವಾದ ಹಾಗೂ ಮಂಜಿನ ಸುತ್ತಮುತ್ತಲಿನ ಪ್ರದೇಶಗಳಿಂದ ಕೂಡಿದೆ. ಈ ಅದ್ಭುತ ಶಿಖರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ ಮತ್ತು ಟ್ರೆಕ್ಕಿಂಗ್ಗೆ ಉತ್ತಮ ಸ್ಥಳವಾಗಿದೆ. ಅದ್ಭುತವಾದ ಹುಲ್ಲುಗಾವಲುಗಳು, ರೋಮಾಂಚಕ ಸಸ್ಯಗಳು ಮತ್ತು ಸ್ಪಷ್ಟವಾದ ನೀಲಿ ನೀರಿನ ತೊರೆಗಳ ಮೂಲಕ ಹಾದುಹೋಗುವುದು ಅತ್ಯದ್ಭುತ ಅನುಭವವಾಗಿದೆ. ಈ ಸ್ಥಳವು ಅತ್ಯಾಕರ್ಷಕ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ. ಇದರಲ್ಲಿ ಸಿಂಹ, ಜಂಗಲ್ ಕ್ಯಾಟ್, ಜಿಂಕೆ, ಅಳಿಲು, ನೀಲಗಿರಿ ಲಾಂಗೂರ್ ಮತ್ತು ಇತರ ಹಲವು ವಿಲಕ್ಷಣ ಜಾತಿಯ ಪ್ರಾಣಿಗಳಿವೆ.
8. ಮಂಡಲಪಟ್ಟಿ ವ್ಯೂ ಪಾಯಿಂಟ್
ಸಮುದ್ರ ಮಟ್ಟದಿಂದ 1,600 ಅಡಿ ಎತ್ತರದಲ್ಲಿದೆ. ಮಂಡಲಪಟ್ಟಿ ವ್ಯೂ ಪಾಯಿಂಟ್ ಖಂಡಿತವಾಗಿಯೂ ಕೊಡಗಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ಅದ್ಭುತ ಸ್ಥಳವನ್ನು ಅನುಭವಿಸಲು ಒಂದು ಉತ್ತಮ ಮಾರ್ಗವೆಂದರೆ ರೋಮಾಂಚಕ ಜೀಪ್ ಡ್ರೈವ್. ಇದು ಸೊಗಸಾದ ಸೂರ್ಯಾಸ್ತವನ್ನು ವೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಸುತ್ತಮುತ್ತಲಿನ ಕಾಡು, ಅಲ್ಲಿನ ನೈಸರ್ಗಿಕ ಸೌಂದರ್ಯದ ಸಮೃದ್ಧಿಗೆ ಇದು ನೆಲೆಯಾಗಿದೆ. ಮಂಡಲಪಟ್ಟಿ ವ್ಯೂ ಪಾಯಿಂಟ್‌ಗೆ ಭೇಟಿ ನೀಡಿದ ಅನುಭವವು ನೀವು ಅನುಭವಿಸುವ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಇದು ಮಡಿಕೇರಿ ಪಟ್ಟಣದಿಂದ 35 ಕಿಲೋಮೀಟರ್ ದೂರದಲ್ಲಿದೆ.
ಮಾನ್ಸೂನ್ ಸಂದರ್ಭದಲ್ಲಿ ಕೊಡಗಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ತಪ್ಪದೇ ಭೇಟಿ ನೀಡಿ, ನಿಮ್ಮ ಪ್ರವಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿ.