ಶನಿವಾರ, ಮೇ 4, 2024
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮದ್ಯಪಾನ, ಡ್ರಗ್ಸ್, ಗನ್‌ಗಳನ್ನು ವೈಭವೀಕರಿಸುವ ಹಾಡು ಹಾಕಬೇಡಿ: ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

Twitter
Facebook
LinkedIn
WhatsApp
ಮದ್ಯಪಾನ, ಡ್ರಗ್ಸ್, ಗನ್‌ಗಳನ್ನು ವೈಭವೀಕರಿಸುವ ಹಾಡು ಹಾಕಬೇಡಿ: ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

ಮದ್ಯಪಾನ (Temple), ಡ್ರಗ್ಸ್ (Drugs) , ಶಸ್ತ್ರಾಸ್ತ್ರಗಳು (Weapon) ಮತ್ತು “ದರೋಡೆಕೋರ ಅಥವಾ ಗನ್ (Gun) ಸಂಸ್ಕೃತಿ”ಯನ್ನು ವೈಭವೀಕರಿಸುವ ಹಾಡುಗಳನ್ನು ಹಾಕದಂತೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ (Private FM Channels) ಕೇಂದ್ರ ಸರ್ಕಾರ (Central Government) ನಿರ್ದೇಶನ ನೀಡಿದೆ. ಇಲ್ಲದಿದ್ದರೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಅನುಮತಿಗಳನ್ನು (Permission) ಸಸ್ಪೆಂಡ್‌ (Suspend) ಮಾಡುವುದು ಮುಂತಾದ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಪರವಾನಗಿ ನೀಡುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವೆಂಬರ್ 30 ರಂದು ಈ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ. “…ಕೆಲವು ಎಫ್‌ಎಂ ರೇಡಿಯೋ ಚಾನೆಲ್‌ಗಳು ಆಲ್ಕೋಹಾಲ್ ಅಥವಾ ಡ್ರಗ್ಸ್ ಅಥವಾ ಆಯುಧ ಅಥವಾ ದರೋಡೆಕೋರ ಅಥವಾ ಬಂದೂಕು ಸಂಸ್ಕೃತಿ ಇತ್ಯಾದಿಗಳನ್ನು ವೈಭವೀಕರಿಸುವ ಹಾಡುಗಳು ಪ್ರಸಾರ ಮಾಡುತ್ತಿವೆ. ಅಂತಹ ಹಾಡುಗಳು ಅಥವಾ ವಿಷಯಗಳ ಪ್ರಸಾರವು AIR ಪ್ರೋಗ್ರಾಂ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೇಳಿದೆ. 

ಆಲ್ ಇಂಡಿಯಾ ರೇಡಿಯೊ (AIR) ಕಾರ್ಯಕ್ರಮದ ನೀತಿ ಸಂಹಿತೆಯನ್ನು ಉಲ್ಲೇಖಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಅನುಮತಿ ಹೊಂದಿರುವವರು ಆಲ್ ಇಂಡಿಯಾ ರೇಡಿಯೊ ಅನುಸರಿಸುವ ಅದೇ ಕಾರ್ಯಕ್ರಮ ಮತ್ತು ಜಾಹೀರಾತು ನೀತಿಗಳನ್ನು ಅನುಸರಿಸಬೇಕು. ಇದು ಕಾಲಕಾಲಕ್ಕೆ ತಿದ್ದುಪಡಿಯಾಗುತ್ತದೆ ಅಥವಾ ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಸೂಚಿಸಬಹುದಾದ ಯಾವುದೇ ಅನ್ವಯವಾಗುವ ನೀತಿ ಸಂಹಿತೆಯನ್ನು ಅನುಸರಿಸಬೇಕು ಎಂದು ಅಡ್ವೈಸರಿ ನೀಡಿದೆ. 

ಅಂತಹ ಕಂಟೆಂಟ್‌ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ನೀಡಿದ ನ್ಯಾಯಾಂಗ ಟಿಪ್ಪಣಿಯನ್ನು ಸಹ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಉಲ್ಲೇಖಿಸಿದೆ. ಅಂತಹ ವಿಷಯಗಳು ಪ್ರಭಾವಶಾಲಿ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಜೊತೆಗೆ, ಇದು ದರೋಡೆಕೋರರ ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ ಎಂದೂ ಕೇಂದ್ರ ಸರ್ಕಾರ ಅಡ್ವೈಸರಿಯಲ್ಲಿ ತಿಳಿಸಿದೆ. 

ರೇಡಿಯೋ ಚಾನೆಲ್‌ಗಳು ಈ ನೀತಿ ಸಂಹಿತೆಗೆ ಬದ್ಧವಾಗಿರಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಕೇಂದ್ರ ಸರ್ಕಾರ ಎಚ್ಚರಿಸಿದೆ. “ಅನುಮತಿ ಹೊಂದಿರುವವರು ಅನುಮತಿಯ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಅಥವಾ ಎಫ್‌ಎಂ ರೇಡಿಯೋ ನೀತಿಯ ಯಾವುದೇ ಇತರ ನಿಬಂಧನೆಗಳನ್ನು ಉಲ್ಲಂಘಿಸಿದರೆ, ಅನುಮತಿಯನ್ನು ಅಮಾನತುಗೊಳಿಸಲು ಮತ್ತು ಪ್ರಸಾರದ ನಿಷೇಧಕ್ಕಾಗಿ ನಿರ್ಬಂಧಗಳನ್ನು ವಿಧಿಸುವ ಹಕ್ಕನ್ನು ನೀಡುವವರು ಹೊಂದಿರುತ್ತಾರೆ” ಎಂದೂ ಅಡ್ವೈಸರಿಯಲ್ಲಿ ಮಾಹಿತಿ ನೀಡಿದೆ.

ಪಂಜಾಬ್‌ ಸರ್ಕಾರವು ಈಗಾಗಲೇ  ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ ಹಾಡುಗಳನ್ನು ನಿಷೇಧಿಸಿದೆ. ಈ ಸಂಬಂಧ ನವೆಂಬರ್ 13 ರಂದು, ಪಂಜಾಬ್ ಸರ್ಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಕಮಿಷನರ್‌ಗಳು ಮತ್ತು ಹಿರಿಯ ಪೊಲೀಸ್ ಅಧೀಕ್ಷಕರಿಗೆ ಆಪ್‌ ಸರ್ಕಾರ ಪತ್ರ ಬರೆದಿತ್ತು.  ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ ಹಾಡುಗಳನ್ನು ನಿಷೇಧಿಸಿ ಪತ್ರ ಬರೆದಿತ್ತು. ಅಲ್ಲದೆ, ರಾಜ್ಯದಲ್ಲಿ ಇದುವರೆಗೆ ನೀಡಿರುವ ಎಲ್ಲಾ ಪರವಾನಗಿಗಳನ್ನು 3 ತಿಂಗಳೊಳಗೆ ಪರಿಶೀಲಿಸುವಂತೆಯೂ ಹೇಳಿದೆ.

ಜೂನ್ 2019 ರ ಹೊತ್ತಿಗೆ ಸುಮಾರು 381 ಖಾಸಗಿ FM ರೇಡಿಯೋ ಕೇಂದ್ರಗಳು ನೂರಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ