ಮದ್ಯದ ಬಾಟ್ಲಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ
Twitter
Facebook
LinkedIn
WhatsApp
ಬೀದರ್: ಮದ್ಯದ ಬಾಟ್ಲಿ ಹಾಗೂ ಕಲ್ಲಿನಿಂದ ಜಜ್ಜಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ಬೀದರ್ (Bidar) ಜಿಲ್ಲೆ ಚಿಟ್ಟಗುಪ್ಪ (Chittaguppa) ತಾಲೂಕಿನ ಉಡಬಾಳು ಗ್ರಾಮದಲ್ಲಿ ನಡೆದಿದೆ.
ರಾಜೆಪ್ಪ ಪುಂಡಲೀಕ (55) ಕೊಲೆಯಾದ ದುರ್ದೈವಿ. ಈತ ಉಡಬಾಳು ಗ್ರಾಮದಲ್ಲಿ ಹಲಿಗೆ ಬಾರಿಸುವ ಕೆಲಸ ಮಾಡುತ್ತಿದ್ದು, ಸಾರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಈತನನ್ನು ಬರ್ಬರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.
ಉಡಬಾಳ ಗ್ರಾಮದ ಹೊರ ವಲಯದ ಸ್ಮಶಾನ ಭೂಮಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಸ್ಥಳಕ್ಕೆ ಚಿಟ್ಟಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತರ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.