ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧು; ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿ! ವಿಡಿಯೋ ವೈರಲ್
ಉತ್ತರ ಪ್ರದೇಶ (ಹತ್ರಾಸ್) : ಸ್ಪಾರ್ಕ್ ಗನ್ ಹಿಡಿದು ಪೋಸ್ ಕೊಡುವಾಗ ವಧುವಿನ ಮುಖಕ್ಕೆ ತಾಗಿದ ಬೆಂಕಿ ಕಿಡಿ ತಾಗಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮದುವೆ ಸಂಭ್ರಮದಲ್ಲಾದ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆಯ ವೇದಿಕೆಯಲ್ಲಿ ಕೂರುವ ವಧು ನಾಚಿಕೆ ಸ್ವಭಾವದಿಂದ ಕೂರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಧು ಮದುವೆ ಧಿರಿಸಿನಲ್ಲಿ ಕೂತು ಪಿಸ್ತೂಲ್ ಕೈಯಲ್ಲಿಡಿದು ಗುಂಡು ಹಾರಿಸಿದ್ದಾರೆ.!
ಇತ್ತೀಚೆಗೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನೊಂದಿಗೆ ಕೂತ ವಧುವಿನ ಕೈಗೆ ವ್ಯಕ್ತಿಯೊಬ್ಬ ಬಂದು ಬಂದೂಕನ್ನು ನೀಡಿದ್ದಾರೆ. ವಧು ಪಿಸ್ತೂಲ್ ಹಿಡಿದು 4 ಸುತ್ತಿನ ಗುಂಡು ಹಾರಿಸಿದ್ದಾರೆ. ಇದನ್ನು ಸಂಬಂಧಿ ಯುವಕನೊಬ್ಬ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Hathras, U.P., 2023#WomenEmpowerment #ABLANARI
— Lady Of Equality ?? (@ladyofequality) April 9, 2023
Are Indians without a gun licence allowed to use guns @Uppolice @kpmaurya1 @myogiadityanath @dgpup @hathraspolice @dm_hathras ⁉️
Please investigate such incidents@NCMIndiaa @realsiff @Das1Tribikram @RajNgc @KirenRijiju pic.twitter.com/UFgJRgowWT
ಹತ್ರಾಸ್ ಜಂಕ್ಷನ್ ಪೊಲೀಸರು ವಧುವಿನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 25 (9) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಧು ರಾಗ್ನಿ ಮೇಲೆ ಕೇಸ್ ದಾಖಲಾಗಿದ್ದು, ಬಂಧನದ ಭೀತಿಯಿಂದ ಆಕೆ ಪರಾರಿಯಾಗಿದ್ದಾಳೆ. ಆಕೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಗಿರೀಶ್ ಚಂದ್ ಹೇಳಿದ್ದಾರೆ.