ಬುಧವಾರ, ಮೇ 8, 2024
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!-ನಾಳೆ SSLC ಪಲಿತಾಂಶ ಪ್ರಕಟ ; ಇಲ್ಲಿದೆ ಲಿಂಕ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ

Twitter
Facebook
LinkedIn
WhatsApp
Mekedatu 4
ವಿಜಯ್ ದೇವರಕೊಂಡ ನಟನೆಯ ಲೈಗರ್ ಸೇರಿದಂತೆ ಸಾಕಷ್ಟು ಬಾಲಿವುಡ್ (Bollywood) ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ (Ananya Pandey) ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸೆಕ್ಸ್, ಡೇಟಿಂಗ್ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದರು. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಗರೇಟ್ (Cigarette) ಸೇದಿದ ಕಾರಣಕ್ಕಾಗಿ ವೈರಲ್ ಆಗಿದ್ದಾರೆ.
 
May be an image of one or more people and body of water

ಅನನ್ಯಾ ಪಾಂಡೆ ಅವರ ಸಂಬಂಧಿ ಅಲನಾ ಪಾಂಡೆ ಅವರ ವಿವಾಹ ಕಾರ್ಯಕ್ರಮ ನಿನ್ನೆಯಿಂದ ನಡೆದಿದೆ. ಮೊದಲ ದಿನ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಅನನ್ಯಾ ಕೂಡ ಬಂದಿದ್ದರು. ಒಂದು ಕಡೆ ಇಡೀ ಕುಟುಂಬ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಅನನ್ಯಾ ಮಾತ್ರ ಧಮ್ ಎಳೆದುಕೊಂಡು ನಿಂತಿದ್ದಾರೆ. ಯಾರೋ ಸೆರೆ ಹಿಡಿದ ವಿಡಿಯೋದಲ್ಲಿ ಅನನ್ಯಾ ಸಿಕ್ಕಿಬಿದ್ದಿದ್ದಾರೆ.

May be an image of one or more people and indoor

ಮೆಹಂದಿ ಕಾರ್ಯಕ್ರಮವನ್ನು ಅಲ್ಲಿ ಬಂದಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಅನನ್ಯಾ ಸಿಗರೇಟು ಸೇದುತ್ತಾ ನಿಂತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಡಿಯೋವನ್ನು ಡಿಲೀಟ್ ಮಾಡಿಸುವ ಪ್ರಯತ್ನ ಕೂಡ ನಡೆದಿದೆ. ಅಷ್ಟರಲ್ಲಿ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.

No photo description available.

ಅನನ್ಯಾ ಪಾಂಡೆ ಅವರ ಈ ನಡೆಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಸ್ಟಾರ್ ಕಿಡ್ಸ್ ಯಾವತ್ತಿಗೂ ಹೀಗೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಬಹುಶಃ ವಿಜಯ್ ದೇವರಕೊಂಡ ಅವರೇ ಕಲಿಸಿರಬೇಕು ಎಂದು ಕಾಲೆಳೆದವರೂ ಇದ್ದಾರೆ. ಈ ನಟಿಗೆ ಇಂಥದ್ದೊಂದು ಕೆಟ್ಟ ಅಭ್ಯಾಸ ಇದೆ ಎಂದು ಗೊತ್ತಿರಲಿಲ್ಲ ಎಂದು ಅಚ್ಚರಿ ಪಟ್ಟವರೂ ಇದ್ದಾರೆ.

May be an image of 1 person

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ