ಮದುವೆ ಮನೆಯಲ್ಲಿ ‘ಧಮ್’ ಹೊಡೆದು ಸಿಕ್ಕಿಬಿದ್ದ ನಟಿ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ಅವರ ಸಂಬಂಧಿ ಅಲನಾ ಪಾಂಡೆ ಅವರ ವಿವಾಹ ಕಾರ್ಯಕ್ರಮ ನಿನ್ನೆಯಿಂದ ನಡೆದಿದೆ. ಮೊದಲ ದಿನ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಅನನ್ಯಾ ಕೂಡ ಬಂದಿದ್ದರು. ಒಂದು ಕಡೆ ಇಡೀ ಕುಟುಂಬ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಅನನ್ಯಾ ಮಾತ್ರ ಧಮ್ ಎಳೆದುಕೊಂಡು ನಿಂತಿದ್ದಾರೆ. ಯಾರೋ ಸೆರೆ ಹಿಡಿದ ವಿಡಿಯೋದಲ್ಲಿ ಅನನ್ಯಾ ಸಿಕ್ಕಿಬಿದ್ದಿದ್ದಾರೆ.
ಮೆಹಂದಿ ಕಾರ್ಯಕ್ರಮವನ್ನು ಅಲ್ಲಿ ಬಂದಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಕೂಡ ಮಾಡಿದ್ದರು. ಈ ವಿಡಿಯೋದಲ್ಲಿ ಅನನ್ಯಾ ಸಿಗರೇಟು ಸೇದುತ್ತಾ ನಿಂತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಡಿಯೋವನ್ನು ಡಿಲೀಟ್ ಮಾಡಿಸುವ ಪ್ರಯತ್ನ ಕೂಡ ನಡೆದಿದೆ. ಅಷ್ಟರಲ್ಲಿ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಅನನ್ಯಾ ಪಾಂಡೆ ಅವರ ಈ ನಡೆಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಸ್ಟಾರ್ ಕಿಡ್ಸ್ ಯಾವತ್ತಿಗೂ ಹೀಗೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಬಹುಶಃ ವಿಜಯ್ ದೇವರಕೊಂಡ ಅವರೇ ಕಲಿಸಿರಬೇಕು ಎಂದು ಕಾಲೆಳೆದವರೂ ಇದ್ದಾರೆ. ಈ ನಟಿಗೆ ಇಂಥದ್ದೊಂದು ಕೆಟ್ಟ ಅಭ್ಯಾಸ ಇದೆ ಎಂದು ಗೊತ್ತಿರಲಿಲ್ಲ ಎಂದು ಅಚ್ಚರಿ ಪಟ್ಟವರೂ ಇದ್ದಾರೆ.