ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ಅನುಶ್ರೀ
ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರಿಗೆ ತಮ್ಮದೇ ಆದ ಅಪಾರ ಅಭಿಮಾನಿಗಳ ಬಳಗವಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ ಅವರು ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದಾರೆ. ಪದೇ ಪದೇ ಮದುವೆ ಬಗ್ಗೆ ಕೇಳುವ ಅಭಿಮಾನಿಗಳಿಗೆ ನಟಿ ಉತ್ತರಿಸಿದ್ದಾರೆ.
ನಿರೂಪಕಿ, ನಟಿಯಾಗಿ ಸೈ ಎನಿಸಿಕೊಂಡಿರುವ ಅನುಶ್ರೀಗೆ ಸದಾ ಎದುರಾಗುವ ಪ್ರಶ್ನೆ ಎಂದರೆ ಅವರ ಮದುವೆ ವಿಚಾರ. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ (Wedding) ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ ಎಂದು ಅನುಶ್ರೀ ಲೈವ್‌ನಲ್ಲಿ ಮಾತನಾಡಿದ್ದಾರೆ.
ಒಬ್ಬ ವ್ಯಕ್ತಿ ಮದುವೆಯ್ನು ಯಾವಾಗ ಯಾಕೆ ಆಗುತ್ತಾರೆ ಗೊತ್ತಾ ಈ ಮದುವೆ ಅನ್ನೋದು ಒಂದು ಬ್ಯೂಟಿಫುಲ್ ಅನುಭವ ನಾವು ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ನಿಮಗೆ ಏಜ್ ಆಯ್ತು ನಿಮ್ಮ ವಯಸ್ಸು ಎಷ್ಟು ಅಂತಾ ಕೇಳುತ್ತಾರೆ ಹೀಗೆ ಹೇಳಿದರು ಎಂದು ನಾನು ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ಕೊರಗಜ್ಜನ (Koragajja) ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ ಎಂದು ಅನುಶ್ರೀ ಹೇಳಿದ್ದಾರೆ.
ಜೀವನದಲ್ಲಿ ನನಗೆ ಇರುವುದು ಒಂದೇ ಭಯ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ಇಲ್ಲ. ದಯವಿಟ್ಟು ಇಂತಹ ವಿಚಾರಗಳನ್ನು ಕೇಳಬೇಡಿ ಎಂದು ಅನುಶ್ರೀ ಭಾವುಕರಾಗಿದ್ದಾರೆ.