ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ
Twitter
Facebook
LinkedIn
WhatsApp
ಮುಂಬೈ: ಮದುವೆಯಾಗುವುದಾಗಿ (Marriage) ಹೇಳಿ ವ್ಯಕ್ತಿಯೊಬ್ಬ ಯುವತಿಯನ್ನು ಅತ್ಯಾಚಾರವೆಸಗಿದ (Rape) ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರದ ಮುಂಬೈನ (Mumbai) ದಿದೋಸಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು (Accused) ಬ್ರಿಜೇಶ್ ಪಾಲ್ (22) ಎಂದು ಗುರುತಿಸಲಾಗಿದೆ.
ಬ್ರಿಜೇಶ್ ಪಾಲ್ 21 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಅಷ್ಟೇ ಅಲ್ಲದೇ ಆಕೆಯೊಂದಿಗೆ ಒಂದು ವರ್ಷದಿಂದ ದೈಹಿಕ ಸಂಬಂಧವನ್ನು ಹೊಂದಿದ್ದ. ಆದರೆ ನಂತರದ ದಿನಗಳಲ್ಲಿ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಯುವತಿಯು ಬ್ರಿಜೇಶ್ ಪಾಲ್ ವಿರುದ್ಧ ಮುಂಬೈನ ದಿದೋಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ರಿಜೇಶ್ ಪಾಲ್‍ನನ್ನು ಬಂಧಿಸಿದ್ದಾರೆ.