ಮದುವೆ ಆಗದೇ ಮಗುವಿಗಾಗಿ ಕಾಯುತ್ತಿರುವೆ ಎಂದು ಶಾಕ್ ಕೊಟ್ಟ ಇಲಿಯಾನ
ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನ (Ileana), ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ (Marriage) ಆಗಿಲ್ಲ. ಆದರೂ, ತಾಯಿ (Pregnancy) ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.
ಇಲಿಯಾನ ಪ್ರೆಗ್ನಿನ್ಸಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.
ಇಲಿಯಾನ ನಿಜವಾಗಿಯೂ ಗರ್ಭಿಣಿಯಾ ಅಥವಾ ಯಾವುದಾದರೂ ಸಿನಿಮಾದ ಪ್ರಮೋಷನ್ ಗೆ ಈ ರೀತಿ ಪೋಸ್ಟ್ ಮಾಡಿರಬಹುದಾ ಎನ್ನುವ ಅನುಮಾನ ಕೂಡ ಮೂಡಿದೆ. ಸದ್ಯದಲ್ಲೇ ಈ ಎಲ್ಲ ಅನುಮಾನಗಳಿಗೆ ಅವರೇ ತೆರೆ ಎಳೆಯಲಿದ್ದಾರೆ.