ಮದುವೆಯಾಗಿ 2 ವರ್ಷ ಆದ್ರೂ ಮಕ್ಕಳಾಗಿಲ್ಲ ಅಂತಾ ಗೃಹಿಣಿ ಆತ್ಮಹತ್ಯೆ
Twitter
Facebook
LinkedIn
WhatsApp
ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ನಗರದ ಮಿಳಘಟ್ಟ ಬಡಾವಣೆಯಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ಸಂಗೀತ (21) ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಮಿಳಘಟ್ಟದ ನಿವಾಸಿ ಗುರುಮೂರ್ತಿ ಜೊತೆ ಸಂಗೀತ ವಿವಾಹವಾಗಿತ್ತು. ವಿವಾಹವಾಗಿ ಎರಡು ವರ್ಷವಾದರೂ ಮಕ್ಕಳಾಗಿರಲಿಲ್ಲ ಎಂದು ಕೊರಗುತ್ತಿದ್ದಳು ಎನ್ನಲಾಗಿದೆ.
ಆದರೆ ಸಂಗೀತ ಪತಿಯ ಸಹೋದರಿ ಇತ್ತೀಚೆಗೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಆಕೆ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಎರಡು ವರ್ಷ ಕಳೆದರೂ ತನಗೆ ಮಕ್ಕಳಾಗಿರಲಿಲ್ಲ ಎಂಬ ಕೊರಗಿನಿಂದಲೇ ಕೊರಳಿಗೆ ಉರುಳು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ.
ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.