ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾರೆ. ಮದುವೆ ಜನುಮ ಜನುಮಗಳ ಅನುಬಂಧ ಅಂತಾರೆ. ಆದರೆ ಇತ್ತೀಚಿನ ದಾಂಪತ್ಯ ಜೀವನ ಸುದೀರ್ಗ ಬಂಧನವನ್ನೇ ಕಳೆದುಕೊಂಡು ಬಿಡುತ್ತವೆ. ಇಂತಹ ದಿನಗಳಲ್ಲಿ ಮದುವೆಯಲ್ಲೂ ಹೊಸ ಟ್ರೆಂಡ್ ಶುರುವಾಗಿದೆ. ಇಂದಿನ ಜನರೇಶನ್ ಮದುವೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಅರ್ಥಾಥ್ ಬೆಂಗಳೂರಿನಲ್ಲಿ ವಧು-ವರರ ನಯಾ ಟ್ರೆಂಡ್ ಶುರುವಾಗಿದೆ.
ಹೌದು, ಸಪ್ತಪದಿ ತುಳಿಯೋಕೆ ಮುನ್ನಾ ಕಾಂಟ್ರಕ್ಟ್. ಮಾಂಗಲ್ಯಧಾರಣೆಗೂ ಮುನ್ನವೇ ಆಗ್ರಿಮೆಂಟ್ (Marriage Agreement) ಅಂದರೆ ಕರಾರು ಒಪ್ಪಂದ ಶುರುವಾಗಿದೆ. ಮದುವೆಯಾಗಲು ನಿರ್ಧರಿಸುವ ವಧು-ವರರ ಈ ಲೇಟೆಸ್ಟ್ ಟ್ರೆಂಡ್ ಈಗ ವಕೀಲರನ್ನೇ ನಿದ್ದೆಗೆಡಿಸಿದೆ.
ಏನಿದು ಮ್ಯಾರೇಜ್ ಕಂಡೀಷನ್?: ಮದುವೆಗೂ ಮುನ್ನ ವಧು-ವರ ಪರಸ್ಪರ ಕರಾರು ಪತ್ರ ಆರಂಭವಾಗಿದೆ. ಭಾರತದಲ್ಲಿ ಮಾನ್ಯತೆ ಇಲ್ಲದೇ ಇದ್ರೂ ಟ್ರೆಂಡ್ ಹೆಚ್ಚಳವಾಗಿದೆ. ಪತಿ ಅಥವಾ ಪತ್ನಿ ಹೀಗೆ ಇರಬೇಕು ಎನ್ನುವುದರ ಬಗ್ಗೆ ವಿವಾಹಕ್ಕೂ ಮುನ್ನ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸಂಸಾರದಲ್ಲಿ ಸಾಮರಸ್ಯ ಕಂಡು ಬಂದರೆ ಮುಂದಿನ ನಿರ್ಧಾರ ಉಲ್ಲೇಖ ಮಾಡಲಾಗುತ್ತಿದೆ. ವಿಚ್ಛೇದನ (Divorce) ದ ಬಳಿಕ ಜೀವನಾಂಶ ಎಷ್ಟು ಕೊಡಬೇಕು ಎಂಬುದರ ಪ್ರಸ್ತಾಪಿಸಲಾಗುತ್ತಿದೆ. ಪತಿಯ ಮನೆಯವರಿಂದ ಪ್ರತ್ಯೇಕ ವಾಸದ ಬಗ್ಗೆಯೂ ಅಗ್ರಿಮೆಂಟ್, ಇಷ್ಟು ಮಾತ್ರವಲ್ಲದೇ ಮಕ್ಕಳಾಗದೇ ಇದ್ರೆ ಬೇರೆ ಮದ್ವೆಯಾಗುವುದರ ಬಗ್ಗೆಯೂ ಪ್ರಸ್ತಾಪ ಮಾಡಲಾಗುತ್ತಿದೆ.
ಹೀಗೆ ಮದುವೆಗೂ ಮುನ್ನ ವಧು-ವರ ಕರಾರು ಒಪ್ಪಂದ ಮಾಡಿಕೊಳ್ಳೋದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಆಗ್ರಿಮೆಂಟ್‍ಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆದರೆ ಕೆಲ ಡಿವೋರ್ಸ್ ಸಂದರ್ಭದಲ್ಲಿ ಇದೇ ವಿಚಾರಕ್ಕೆ ಗಲಾಟೆಯಾಗ್ತಿದೆ. ಹೀಗಾಗಿ ವಕೀಲರಿಗೆ ಈ ಆಗ್ರಿಮೆಂಟ್‍ನಿಂದ ದೊಡ್ಡ ತಲೆನೋವು ಉಂಟಾಗಿದೆ. ಹೀಗಾಗಿ ಇದಕ್ಕೆ ಮಾನ್ಯತೆ ಇರದ ಆಗ್ರಿಮೆಂಟ್ ಮಾಡಿಕೊಂಡು ಮೋಸ ಹೋಗಬೇಡಿ ಎಂದು ವಕೀಲರು (Lawyer) ಸಂದೇಶ ರವಾನಿಸುತ್ತಿದ್ದಾರೆ.
ಐಟಿಬಿಟಿ ವಲಯದಲ್ಲಿ ಈ ಆಗ್ರಿಮೆಂಟ್‍ಗಳು ಹೆಚ್ಚಾಗುತ್ತಿದೆ. ವಿದ್ಯಾವಂತರಾವರು ಈ ರೀತಿಯ ಆಗ್ರಿಮೆಂಟ್‍ಗಳನ್ನು ಮಾಡಿಕೊಳ್ಳುವ ಮುನ್ನ ಎಚ್ಚರವಾಗಿರಬೇಕು.