ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮತ್ತೆ ಮರು ಜೀವ ಪಡೆದ ನಂದಿತಾ ಪ್ರಕರಣ! ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಕಿಮ್ಮನೆ ಪಟ್ಟು. ಜ.30ರಂದು ಉಪವಾಸ ಸತ್ಯಾಗ್ರಹ.

Twitter
Facebook
LinkedIn
WhatsApp
ಮತ್ತೆ ಮರು ಜೀವ ಪಡೆದ ನಂದಿತಾ ಪ್ರಕರಣ! ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಕಿಮ್ಮನೆ ಪಟ್ಟು. ಜ.30ರಂದು ಉಪವಾಸ ಸತ್ಯಾಗ್ರಹ.

ತೀರ್ಥಹಳ್ಳಿ: ತೀರ್ಥಹಳ್ಳಿ ನಂದಿತಾ ಸಾವು ಪ್ರಕರಣ ಇದೀಗ ಮುನ್ನೆಲೆಗೆ ಬಂದಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಂದಿತಾ ಆತ್ಮಹತ್ಯೆ ಪ್ರಕರಣ ನಡೆದಾಗ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು.ಈಗಿನ ಗೃಹ ಸಚಿವ ಆರಗ ಜ್ಞಾನೇಂದ್ರ 18 ಸಭೆಯಲ್ಲಿ ಹೀನಾಮಾನವಾಗಿ ಬೈದಿದ್ದರು. ಈಗ ನೀವೇ ಗೃಹಸಚಿವರೇ ಆಗಿದ್ದೀರಿ. ಈಗಲಾದರೂ ಪ್ರಕರಣ ಸಿಬಿಐಗೆ ನೀಡಿ ತನಿಖೆ ನಡೆಸಿ. ಇದಕ್ಕಾಗಿ ಒತ್ತಾಯಿಸಿ ಜ.30 ರಂದು ತೀರ್ಥಹಳ್ಳಿಯಲ್ಲಿ 24 ಗಂಟೆ ಉಪವಾಸ ಸತ್ಯಾಗ್ರಹ ಕೂರಲಿದ್ದೇನೆ ಎಂದರು.
ಸಿಬಿಐಗೆ ನೀಡಿ ಆರು ತಿಂಗಳಲ್ಲಿ ಫಲಿತಾಂಶ ನೀಡಿ. ನಂದಿತಾ ಪ್ರಕರಣದಲ್ಲಿ ನನ್ನ ಪಾತ್ರ ಕಂಡುಬಂದಿದ್ದು ಸಾಬೀತಾದರೆ ನಾನು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೇನೆ. ಮುಂದೆ ಯಾವ ಚುನಾವಣೆಗೂ ಸ್ಪರ್ಧಿಸೊಲ್ಲ, ದೂರ ಆಗುತ್ತೆನೆ ಎಂದು
ಸವಾಲೆಸಿದ್ದಾರೆ. ಆಯುನೂರು ಮಂಜುನಾಥ ನನ್ನನ್ನ ನಾಮರ್ಧ ಎಂದರು. 2018ರಲ್ಲಿ ಅಮಿತ್ ಷಾ ನಂದಿತ ಮನೆಗೆ ತೆರಳಿ ನಮ್ಮ ಸರ್ಕಾರ ಬಂದ ಮೇಲೆ ತಪ್ಪಿತಸ್ದರಿಗೆ ತಕ್ಕ ಶಿಕ್ಷೆ ಅಂದಿದ್ದರು.ನಂದಿತಾಳು 2014ನೇ ಇಸವಿ ಜನವರಿ 29ಕ್ಕೆ ಆತ್ಮಹತ್ಯೆಗೆ ಯತ್ನಿಸಿತ್ತಾಳೆ. ಮರುದಿನ ಮನೆಗೆ ಕರೆದು ಕೊಂಡು ಬರುತ್ತಾರೆ. ಜ.31ಕ್ಕೆ ಸಾವು ಕಾಣುತ್ತಾಳೆ. ರಾತ್ರಿ 11 ಗಂಟೆಗೆ ನಂದಿತಾಳ ಕುಟುಂಬ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತಾರೆ. ಕುಟುಂಬದವರು ವಿಷ ಕುಡಿಸಿ ಸಾವು ಎಂದು ದೂರು ಕೊಡುತ್ತಾರೆ. ನಂದಿತಾ ಸಾವು ಕಂಡ ವೈಕುಂಠ ಸಮಾರಾಧನೆಯನ್ನ ಇದೇ ಜ್ಞಾನೇಂದ್ರ ಮೂರು ವರ್ಷ ನಡೆಸಿದ್ದರು. ಅಧಿಕಾರ ಸಿಕ್ಕ ನಂತರ ಕೈಬಿಟ್ಟರು ಎಂದರು.
ನಾನು ಅವರಿಗೆ ಧನಸಹಾಯವನ್ನು ಮಾಡಿದ್ದೇನೆ. ಜ್ಞಾನೇಂದ್ರ 2000 ಹಣನೂ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ.ಈ ವಿಷಯವನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ನನ್ನ ಅವಧಿಯಲ್ಲಿ ಸಿಒಡಿ ತನಿಖೆ ಮಾಡಲಾಗಿದೆ.ಇದನ್ನ ಬಿಜೆಪಿ ಒಪ್ಪಿರಲಿಲ್ಲ. ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯನವರ ಪ್ರಶ್ನೆಗೆ ಜ್ಞಾನೇಂದ್ರ ಕಿಮ್ಮನೆಯ ರಾಜೀನಾಮೆ ಕೇಳಿಲ್ಲವೆಂದರು. ಆದರೆ ನನ್ನ ರಾಜೀನಾಮೆ ಆಗ್ರಹಿಸಿದ್ದರು ಎಂದು ತಿಳಿಸಿದರು.
ದೇಶದಲ್ಲಿ ಈಗ ಬಿಜೆಪಿಯವರೇ ಶ್ರೀಮಂತರಾಗಿದ್ದು ಪ್ರಧಾನಿ ಮೋದಿ ಎಲ್ಲರ ಜೇಬನ್ನು ಖಾಲಿ ಮಾಡಿದ್ದಾರೆ. ಬಿಜೆಪಿಯವರು ಮಾತ್ರ ಹಣವಂತರಾಗಿದ್ದಾರೆ. ಕೊರೋನದಿಂದ ಕಷ್ಟ ಅನುಭವಿಸುವ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಬಿಜೆಪಿಯ ದುರಾಡಳಿತದಿಂದ ಎಂದು ದೂರಿದರು.
ಮೇಕೆದಾಟು ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆಗೆ ರಾಜ್ಯದ್ಯಂತ ಸಂಚಲನ ಮೂಡಿಸಿದೆ.
ಗೃಹ ಸಚಿವ ತೀರ್ಥಹಳ್ಳಿಯಲ್ಲಿ ಜಾತ್ರೆ ಮಾಡ್ತಾರೆ ಬೆಂಗಳೂರಿನಲ್ಲಿ ನಿಯಮವೆನ್ನುತ್ತಾರೆ. ಆರಂಭದಲ್ಲಿ 19 ಸೊಂಕಿತ್ತು. ಜಾತ್ರೆ ಮುಗಿದ ನಂತರ 200 ಆಸುಪಾಸ್ ಬಂದಿದೆ. ಇದು ರಾಜ್ಯ ಸರ್ಕಾರದ ಸಚಿವರಲ್ಲೇ ಗೊಂದಲಗಳಿವೆ ಎಂದು ಆರೋಪಿಸಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು