ಇನ್ನು ಅರವಿಂದ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಚಾರಣೆ ಜೂ. 5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದ್ದರು. ಜತೆಗೆ ʼʼದೆಹಲಿಯ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆʼʼ ಎಂದು ಭರವಸೆ ನೀಡಿದ್ದರು.
ʼʼನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್ ಭಾವುಕರಾಗಿ ಹೇಳಿದ್ದರು.