ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

Twitter
Facebook
LinkedIn
WhatsApp
ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

ಒಮಿಕ್ರಾನ್​ ಆತಂಕ ಶುರುವಾದಾಗಿನಿಂದ ದೇಶದಲ್ಲಿ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಉಂಟಾಗಿದ್ದ ಹೀನಾಯ ಪರಿಸ್ಥಿತಿ ಮರುಕಳಿಸಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಾನಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್​ ಡೋಸ್​ ಹಾಗೂ ಮಕ್ಕಳಿಗೆ ಕೊರೊನಾ ಲಸಿಕೆ ಹೀಗೆ ನಾನಾ ಮಹತ್ವದ ಘೋಷಣೆಯನ್ನು ಮಾಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಗುಡ್​ ನ್ಯೂಸ್​ನ್ನು ದೇಶದ ಜನತೆಗೆ ನೀಡಿದೆ.

ದೇಶದಲ್ಲಿನ ಕೋವಿಡ್​ ವಿರುದ್ಧದ ಹೋರಾಟಕ್ಕೆ ಇದೀಗ ಹೊಸ 2 ಅಸ್ತ್ರಗಳು ಸೇರ್ಪಡೆಯಾಗಿವೆ..ಮತ್ತೆರಡು ಹೊಸ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ.

ಈ ಮೂಲಕ ಭಾರತದ ಕೊರೊನಾ ಲಸಿಕೆಗಳ ಬತ್ತಳಿಕೆಗೆ ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಸೇರ್ಪಡೆಯಾದಂತಾಗಿದೆ. ಇದರ ಜೊತೆಯಲ್ಲಿ ಆ್ಯಂಟಿ ವೈರಲ್​ ಡ್ರಗ್​ ಮೊಲ್ನುಪಿರವಿರ್​ಗೂ ಕೇಂದ್ರ ಆರೋಗ್ಯ ಸಚಿವಾಲಯ ಹಸಿರು ನಿಶಾನೆ ತೋರಿದೆ. 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಈ ಲಸಿಕೆಗಳು ಹಾಗೂ ಔಷಧವನ್ನು ಬಳಕೆ ಮಾಡಲಾಗಿದೆ.

ಈ ವಿಚಾರವಾಗಿ ಟ್ವೀಟ್​ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಶುಭಾಶಯಗಳು ಭಾರತ..!, ಕೋವಿಡ್​ 19 ವಿರುದ್ಧದ ಭಾರತದ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ಸಲುವಾಗಿ ಸಿಡಿಎಸ್​ಸಿಓ ಒಂದೇ ದಿನದಲ್ಲಿ ಮೂರು ಅನುಮೋದನೆಗಳನ್ನು ನೀಡಿದೆ. ಕಾರ್ಬೆವ್ಯಾಕ್ಸ್​ ಲಸಿಕೆ, ಕೊವಾವ್ಯಾಕ್ಸ್​ ಲಸಿಕೆ ಹಾಗೂ ಆ್ಯಂಟಿ ವೈರಲ್​ ಡ್ರಗ್​ ಮಾಲ್ನುಪಿರವಿರ್​​ಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ನಿರ್ಬಂದಿತ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಒಂದೇ ದಿನದಲ್ಲಿ ಎರಡು ಲಸಿಕೆಗಳಿಗೆ ಅನುಮೋದನೆ ನೀಡುವ ಮೂಲಕ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳಿಗೆ ತುರ್ತು ಅನುಮೋದನೆ ಸಿಕ್ಕಂತಾಗಿದೆ. ಸೀರಂ ಇನ್​ಸ್ಟಿಟ್ಯೂಟ್​​ನ ಕೋವಿಶೀಲ್ಡ್​, ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​, ರಷ್ಯಾದ ಸ್ಪುಟ್ನಿಕ್​ ವಿ, ಅಮೆರಿಕದ ಮಾಡೆರ್ನಾ, ಜಾನ್ಸ್​ನ್​ & ಜಾನ್ಸನ್​ ಕೊರೊನಾ ಲಸಿಕೆ ಹಾಗೂ ಜೈಡಸ್​​​ ಕ್ಯಾಡಿಲಾದ ZyCoV-D ಲಸಿಕೆಗಳಿಗೆ ಈ ಹಿಂದೆಯೇ ಅನುಮೋದನೆ ದೊರಕಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು