‘ಮತಪತ್ರ ವಾಪಸ್ ತನ್ನಿ’ – ಪ್ರಚಾರಕ್ಕೆ ಕರೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ (ನವೆಂಬರ್ 26, 2024) ಮತಪತ್ರವನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸುವಂತೆ ಒತ್ತಾಯಿಸಿದರು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಭಾರತ್ ಜೋಡೋ ಯಾತ್ರೆಯ ಪ್ರಮಾಣದಲ್ಲಿ‘ಮತಪತ್ರ ವಾಪಸ್ ತನ್ನಿ’ ಸಂಘಟಿತ ಪ್ರಚಾರಕ್ಕೆ ಕರೆ ನೀಡಿದರು.
ನವದೆಹಲಿ: ನಮಗೆ ವಿದ್ಯುನ್ಮಾನ ಮತಯಂತ್ರಗಳ (EVM) ಮೇಲೆ ನಂಬಿಕೆ ಇಲ್ಲ. ಹೀಗಾಗಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಪಕ್ಷದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ನಮಗೆ ಇವಿಎಂ ಮೂಲಕ ಚುನಾವಣೆ ಬೇಡ. ನಾವು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ಬಯಸುತ್ತೇವೆ. ನಾವು ‘ಭಾರತ್ ಜೋಡೋ ಯಾತ್ರೆ’ ನಡೆಸಿದಂತೆಯೇ, ನಾವು ಬ್ಯಾಲೆಟ್ ಪೇಪರ್‌ಗಳನ್ನು ಬಳಸಿಕೊಂಡು ಚುನಾವಣೆಗಾಗಿ ರಾಷ್ಟ್ರವ್ಯಾಪಿ ಪ್ರಚಾರವನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ.
ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ‘ಸಂವಿಧಾನ ರಕ್ಷಕ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಜಾತಿ ಗಣತಿ ಭಯವಿದೆ. ಜಾತಿ ಗಣತಿಗೆ ಅವಕಾಶ ನೀಡಿದರೆ ಸಮಾಜದ ಎಲ್ಲ ವರ್ಗದವರೂ ತಮ್ಮ ಪಾಲು ಕೇಳುತ್ತಾರೆ ಎಂಬ ಭಯ ಮೋದಿಯವರಿಗಿದೆ ಎಂದರು.
‘ಕಟೆಂಗೆ ಬಟೆಂಗೆ’ ಎನ್ನುತ್ತಿದ್ದಾರೆ, ಆದರೆ ದೇಶವನ್ನು ವಿಭಜಿಸುವವರು ಯಾರು?, ಅವರೇ ಧರ್ಮದ ಹೆಸರಿನಲ್ಲಿ ದ್ವೇಷ ಹರಡಿ, ಜನರನ್ನು ದಾರಿ ತಪ್ಪಿಸಿ, ಜನರನ್ನು ಒಡೆಯುವ ಮೂಲಕ ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. “ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ, ಆದರೆ ಸಂವಿಧಾನವನ್ನು ಅಂಗೀಕರಿಸಿದಾಗ, ಅದು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಆಧರಿಸಿದೆ ಮತ್ತು ಅದು ‘ಮನುಸ್ಮೃತಿ’ ಆಧಾರಿತವಾಗಿರಬೇಕು ಎಂದು ಆರ್‌ಎಸ್‌ಎಸ್ ಹೇಳಿತ್ತು” ಎಂದು ಕಾಂಗ್ರೆಸ್ ನಾಯಕ ಹೇಳಿದರು. ಮತ್ತೆ ಆರೆಸ್ಸೆಸ್ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ಸಂವಿಧಾನವನ್ನು ಅವಮಾನಿಸಿದವರು ಅದಕ್ಕಾಗಿ “ಹುಸಿ ಪ್ರೀತಿ”ಯಲ್ಲಿ ತೊಡಗುತ್ತಿದ್ದಾರೆ ಎಂದರು..
ಮತಯಂತ್ರ ವಾಪಸ್ ಬೇಕು ಎಂದು ಎಲ್ಲರಿಗೂ ಅರಿವು ಮೂಡಿಸಲು ನಮ್ಮ ಪಕ್ಷದಿಂದ ಈ ಅಭಿಯಾನ ಆರಂಭಿಸಬೇಕು. ಇತರೆ ರಾಜಕೀಯ ಪಕ್ಷಗಳ ಜತೆಯೂ ಮಾತನಾಡುತ್ತೇವೆ ಎಂದು ಖರ್ಗೆ ರಾಹುಲ್ ಗಾಂಧಿಗೆ ಆಂದೋಲನ ನಡೆಸುವಂತೆ ಒತ್ತಾಯಿಸಿದರು. “ಮತಪತ್ರವನ್ನು ಮರಳಿ ತರಲು ನಾವು ಭಾರತ್ ಜೋಡೋ ಯಾತ್ರೆಯಂತಹ ಅಭಿಯಾನವನ್ನು ಪ್ರಾರಂಭಿಸಬೇಕು” ಎಂದು ಅವರು ಒತ್ತಿ ಹೇಳಿದರು. ಪ್ರಧಾನಿಯವರ ಮೇಲೆ, “ಪ್ರಧಾನಿ ಮೋದಿಯವರು ಜಾತಿ ಗಣತಿಗೆ ಹೆದರುತ್ತಾರೆ ಏಕೆಂದರೆ ಎಲ್ಲರೂ ತಮ್ಮ ಪಾಲನ್ನು ಕೇಳುತ್ತಾರೆ ಎಂದು ಹೇಳಿದರು. ಪ್ರಧಾನಿಗೆ ನಿಜವಾಗಿಯೂ ದೇಶದಲ್ಲಿ ಏಕತೆ ಬೇಕಿದ್ದರೆ ಅವರು ಮತ್ತು ಬಿಜೆಪಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು ಎಂದರು.
ಮತಯಂತ್ರಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಸಾಂಪ್ರದಾಯಿಕ ವಿಧಾನಕ್ಕೆ ಮರಳುವಂತೆ ಕಾಂಗ್ರೆಸ್ ಅಧ್ಯಕ್ಷರು ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಕಟುವಾಗಿ ಟೀಕಿಸಿದ್ದಾರೆ. ಇಂತಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷರು ಸುಪ್ರೀಂ ಕೋರ್ಟ್ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ (ಕರ್ನಾಟಕ, ಜಮ್ಮು-ಕಾಶ್ಮೀರ, ತೆಲಂಗಾಣ, ವಯನಾಡು, ಹಿಮಾಚಲ ಪ್ರದೇಶ, ಜಾರ್ಖಂಡ್‌ನಲ್ಲಿ) ಖರ್ಗೆ ಅವರಿಗೆ ಚುನಾವಣಾ ಆಯೋಗ ಮತ್ತು ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಬಿಜೆಪಿ ಗೆದ್ದರೆ ಇವಿಎಂಗಳು ಸರಿ ಇರಲ್ಲ. ತಮ್ಮ ಸೋಲನ್ನು ಕಾಂಗ್ರೆಸ್ಸಿಗರು ಪಕ್ಷ ಸಂವಿಧಾನ ಮತ್ತು ಇವಿಎಂಗಳ ಮೇಲೆ ದೂಷಿಸಲು ಪ್ರಯತ್ನಿಸುತ್ತಾರೆ ಎಂದು ಟೀಕಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯಧಿಕ 132 ಸ್ಥಾನಗಳನ್ನು ಗೆದ್ದು ಕೊಂಡರೆ ಶಿಂಧೆ ನೇತೃತ್ವದ ಶಿವಸೇನೆ 57 ಸ್ಥಾನಗಳನ್ನು ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದು ಮಹಾಯುತಿಯನ್ನು 230 ಸ್ಥಾನಗಳಿಗೆ ಕೊಂಡೊಯ್ಯಿತು. ಎಂವಿಎ ಭಾಗವಾಗಿ ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಗೆದ್ದಿದೆ.