ಮತದಾನಕ್ಕೆಂದು ಆಗಮಿಸಿದ ಅಜ್ಜಿ, ಮತದಾನ ಮಾಡುವ ಮುನ್ನವೇ ಕುಸಿದು ಬಿದ್ದ ಸಾವು!
Twitter
Facebook
LinkedIn
WhatsApp
ಬೆಳಗಾವಿ: ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಕೋ.ಶಿವಾಪುರ ಸಮೀಪದ ಯರಝರ್ವಿಯಲ್ಲಿ ಬುಧವಾರ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದುಬಿದ್ದು ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಪಾರವ್ವ ಈಶ್ವರ ಸಿದ್ದಾಳ(ಪನದಿ) (68) ಮೃತ ಪಟ್ಟವರು. ಪಾರವ್ವ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದು ಮತದಾನಕ್ಕೂ ಮುನ್ನವೇ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.